Proverbs · chapter 8 · verse 15
Proverbs 8:15 in Kannada
ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು.
Nanna moolaka raajaru aaluvaru. Pradhaanaru teerpu koduvaru.
Proverbs 8:15 in English
- King James Version (KJV)
- By me kings reign, and princes decree justice.
- World English Bible (WEB)
- By me kings reign, and princes decree justice.
- American Standard Version (ASV)
- By me kings reign, And princes decree justice.
- Bible in Basic English (BBE)
- Through me kings have their power, and rulers give right decisions.
- Darby Translation (DBY)
- By me kings reign, and rulers make just decrees;
- Webster's Bible (WBS)
- By me kings reign, and princes decree justice.
- Young's Literal Translation (YLT)
- By me kings reign, and princes decree righteousness,
Read in context
- 13ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
- 14ಆಲೋಚನೆಯೂ ಸುಜ್ಞಾನವೂ ನನ್ನವು; ವಿವೇಕವು ನಾನೇ. ನನಗೆ ಸಾಮರ್ಥ್ಯವಿದೆ.
- 15ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು.
- 16ನನ್ನಿಂದ ಅಧಿಪತಿಗಳೂ ಕೀರ್ತಿವಂತರೂ ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೂ ಆಳುವರು.
- 17ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
Cross references
- Romans 13:1 ರೋಮಾಪುರದವರಿಗೆ 13:1ಪ್ರತಿಯೊಬ್ಬನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವ ರಿಂದ ನೇಮಿಸಲ್ಪಟ್ಟವರು.
- Daniel 2:21 ದಾನಿಯೇಲನು 2:21ಆತನು ಕಾಲವನ್ನೂ ಸಮಯವನ್ನೂ ಬದಲಾಯಿ ಸುತ್ತಾ ಅರಸನನ್ನು ಮೇಲೆತ್ತುತ್ತಾನೆ; ಜ್ಞಾನಿಗಳಿಗೆ ಜ್ಞಾನ ವನ್ನೂ ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡು ತ್ತಾನೆ.
- Matthew 28:18 ಮತ್ತಾಯನು 28:18ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
- Revelation 19:16 ಪ್ರಕಟನೆ 19:16ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.
- Daniel 4:32 ದಾನಿಯೇಲನು 4:32ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
- Daniel 7:13–14 ದಾನಿಯೇಲನು 7:13–14ನಾನು ಕಂಡ ರಾತ್ರಿಯ ದರ್ಶನದಲ್ಲಿ ಇಗೋ, ಮನುಷ್ಯ ಕುಮಾರನಂತಿರುವ ಒಬ್ಬನು ಆಕಾಶದ ಮೇಘಗಳ ಸಂಗಡ ಪೂರ್ವಿಕನ ಬಳಿಗೆ ಸವಿಾಪಿಸಿದನು. ಅವನನ್ನು ಆತನ ಬಳಿಗೆ ಕರೆತಂದರು. ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು ಮಹತ್ವವು ರಾಜ್ಯವು ಕೊಡಲ್ಪಟ್ಟವು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂತ ರಾಜ್ಯವಾಗಿದೆ.
- Daniel 5:18–31 ದಾನಿಯೇಲನು 5:18–31ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು. ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು. ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು; ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು. ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ. ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು. ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್, ಇದರ ಅರ್ಥವು ಹೀಗಿದೆ--ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ; ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ. ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು. ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು. ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು. ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
- Jeremiah 27:5–7 ಯೆರೆಮೀಯ 27:5–7ನಾನೇ ಭೂಮಿಯನ್ನೂ ಭೂಮಿಯ ಮೇಲಿರುವ ಮನುಷ್ಯರನ್ನೂ ಮೃಗಗಳನ್ನೂ ನನ್ನ ಮಹಾಬಲದಿಂದ ನಾನು ಕೈಚಾಚಿ ಉಂಟು ಮಾಡಿ ನನಗೆ ಸರಿತೋಚಿದವರಿಗೆ ಅದನ್ನು ಕೊಟ್ಟಿ ದ್ದೇನೆ. ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ. ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು.
- 1 Samuel 16:1 1 ಸಮುವೇಲನು 16:1ಕರ್ತನು ಸಮುವೇಲನಿಗೆ--ಇಸ್ರಾಯೇ ಲಿನ ಅರಸನಾಗಿರದ ಹಾಗೆ ನಾನು ತಿರಸ್ಕರಿಸಿದ ಸೌಲನಿಗೋಸ್ಕರ ನೀನು ಎಷ್ಟರ ವರೆಗೆ ದುಃಖವುಳ್ಳವನಾಗಿರುವಿ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ, ಬೇತ್ಲೆಹೇಮಿನ ವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು; ಯಾಕಂದರೆ ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಆದುಕೊಂಡೆನು ಅಂದನು.
- 1 Kings 5:7 1 ಅರಸುಗಳು 5:7ಹೀರಾಮನು ಸೊಲೊಮೋನನ ಮಾತು ಗಳನ್ನು ಕೇಳಿದಾಗ ಬಹು ಸಂತೋಷಪಟ್ಟು--ಈ ಮಹಾ ಜನರ ಮೇಲೆ ಜ್ಞಾನವುಳ್ಳ ಮಗನನ್ನು ದಾವೀದನಿಗೆ ಕೊಟ್ಟ ಕರ್ತನು ಈ ಹೊತ್ತು ಸ್ತುತಿಸಲ್ಪಡಲಿ ಅಂದನು.
- Jeremiah 33:15 ಯೆರೆಮೀಯ 33:15ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು; ಆತನು ದೇಶದಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸುವನು.
- Isaiah 1:26 ಯೆಶಾಯ 1:26ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ.