Proverbs · chapter 9 · verse 5
Proverbs 9:5 in Kannada
ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ
Baa, nanna rottiyannu tindu naanu berasida draakshaa rasavannu kudi endoo
Proverbs 9:5 in English
- King James Version (KJV)
- Come, eat of my bread, and drink of the wine [which] I have mingled.
- World English Bible (WEB)
- “Come, eat some of my bread, Drink some of the wine which I have mixed!
- American Standard Version (ASV)
- Come, eat ye of my bread, And drink of the wine which I have mingled.
- Bible in Basic English (BBE)
- Come, take of my bread, and of my wine which is mixed.
- Darby Translation (DBY)
- Come, eat ye of my bread, and drink of the wine that I have mingled.
- Webster's Bible (WBS)
- Come, eat of my bread, and drink of the wine [which] I have mingled.
- Young's Literal Translation (YLT)
- 'Come, eat of my bread, And drink of the wine I have mingled.
Read in context
- 3ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ--
- 4ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು--
- 5ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ
- 6ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ.
- 7ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
Cross references
- John 6:27 ಯೋಹಾನನು 6:27ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.
- Song of Solomon 5:1 ಪರಮಗೀತೆ 5:1ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ.
- Proverbs 9:17 ಜ್ಞಾನೋಕ್ತಿಗಳು 9:17ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.
- Jeremiah 31:12–14 ಯೆರೆಮೀಯ 31:12–14ಆದದರಿಂದ ಅವರು ಬಂದು ಚೀಯೋನಿನ ಉನ್ನತದಲ್ಲಿ ಹಾಡಿ ಕರ್ತನ ಒಳ್ಳೇತನದ ಬಳಿಗೆ ಗೋಧಿಯ ನಿಮಿತ್ತವೂ ದ್ರಾಕ್ಷಾರಸದ ನಿಮಿತ್ತವೂ ಎಣ್ಣೆಯ ನಿಮಿತ್ತವೂ ಮಂದೆ ದನ ಮರಿಗಳ ನಿಮಿತ್ತವೂ ಪ್ರವಾಹದಂತೆ ಬರುವರು; ಅವರ ಪ್ರಾಣವು ಚೆನ್ನಾಗಿ ನೀರು ಹಾಕಿದ ತೋಟದ ಹಾಗೆ ಇರುವದು; ಅವರು ಇನ್ನು ಮೇಲೆ ಯಾವಾಗಲೂ ದುಃಖಪಡುವದಿಲ್ಲ. ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು. ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
- Proverbs 9:2 ಜ್ಞಾನೋಕ್ತಿಗಳು 9:2ಆಕೆಯು ತನ್ನ ಪಶುಗಳನ್ನು ವಧಿಸಿ, ತನ್ನ ದ್ರಾಕ್ಷಾರಸವನ್ನು ಬೆರಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.
- John 6:49–58 ಯೋಹಾನನು 6:49–58ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.
- Psalm 22:26 ಕೀರ್ತನೆಗಳು 22:26ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು.
- Isaiah 55:1–3 ಯೆಶಾಯ 55:1–3ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ. ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ! ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
- Psalm 22:29 ಕೀರ್ತನೆಗಳು 22:29ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು.
- Matthew 26:26–28 ಮತ್ತಾಯನು 26:26–28ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿ ಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ ಮುರಿದು ತನ್ನ ಶಿಷ್ಯರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು. ಮತ್ತು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ ಅವರಿಗೆ ಕೊಟ್ಟು --ನೀವೆಲ್ಲರೂ ಇದರಲ್ಲಿರುವದನ್ನು ಕುಡಿಯಿರಿ; ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.