Psalms · chapter 101 · verse 1
Psalm 101:1 in Kannada
ಕರುಣೆ ನೀತಿಗಳನ್ನು ಕುರಿತು ಹಾಡುವೆನು; ಓ ಕರ್ತನೇ, ನಿನ್ನನ್ನು ಕೀರ್ತಿ ಸುವೆನು.
Karune neetigalannu kuritu haaduvenu; o kartane, ninnannu keerti suvenu.
Psalm 101:1 in English
- King James Version (KJV)
- A Psalm of David. I will sing of mercy and judgment: unto thee, O LORD, will I sing.
- World English Bible (WEB)
- A Psalm by David. I will sing of loving kindness and justice. To you, LORD, I will sing praises.
- American Standard Version (ASV)
- A Psalm of David. I will sing of lovingkindness and justice: Unto thee, O Jehovah, will I sing praises.
- Bible in Basic English (BBE)
- A Psalm. Of David. I will make a song of mercy and righteousness; to you, O Lord, will I make melody.
- Darby Translation (DBY)
- A Psalm of David. I will sing of loving-kindness and judgment: unto thee, Jehovah, will I sing psalms.
- Webster's Bible (WBS)
- A Psalm of David. I will sing of mercy and judgment: to thee, O LORD, will I sing.
- Young's Literal Translation (YLT)
- A Psalm of David. Kindness and judgment I sing, To Thee, O Jehovah, I sing praise.
Read in context
- 1ಕರುಣೆ ನೀತಿಗಳನ್ನು ಕುರಿತು ಹಾಡುವೆನು; ಓ ಕರ್ತನೇ, ನಿನ್ನನ್ನು ಕೀರ್ತಿ ಸುವೆನು.
- 2ಸಂಪೂರ್ಣವಾದ ಮಾರ್ಗದಲ್ಲಿ ಬುದ್ಧಿ ಯಿಂದ ನಡೆದು ಕೊಳ್ಳುವೆನು; ಯಾವಾಗ ನನ್ನ ಬಳಿಗೆ ಬರುವಿ? ನನ್ನ ಹೃದಯದ ಸಂಪೂರ್ಣತೆಯಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
- 3ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.
Cross references
- Psalm 89:1 ಕೀರ್ತನೆಗಳು 89:1ಕರ್ತನ ಕರುಣೆಗಳನ್ನು ಯುಗಯುಗಕ್ಕೂ ಹಾಡುವೆನು; ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿಂದ ತಿಳಿಯಪಡಿ ಸುವೆನು.
- Psalm 71:22–23 ಕೀರ್ತನೆಗಳು 71:22–23ಓ ನನ್ನ ದೇವರೇ, ನಾನು ಸಹ ನಿನ್ನನ್ನೂ ನಿನ್ನ ಸತ್ಯವನ್ನೂ ವೀಣೆಯಿಂದ ಕೊಂಡಾಡುವೆನು; ಓ ಇಸ್ರಾಯೇಲಿನ ಪರಿಶುದ್ದನೇ, ಕಿನ್ನರಿಯಿಂದ ನಿನ್ನನ್ನು ಕೀರ್ತಿಸುವೆನು. ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
- Psalm 145:7 ಕೀರ್ತನೆಗಳು 145:7ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
- Revelation 19:1–3 ಪ್ರಕಟನೆ 19:1–3ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ.
- Psalm 51:14 ಕೀರ್ತನೆಗಳು 51:14ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.
- Psalm 103:6–8 ಕೀರ್ತನೆಗಳು 103:6–8ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ. ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು. ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.
- Psalm 97:8 ಕೀರ್ತನೆಗಳು 97:8ಚೀಯೋನ್ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.
- Romans 9:15–18 ರೋಮಾಪುರದವರಿಗೆ 9:15–18ಆತನು ಮೋಶೆಗೆ--ಯಾವನ ಮೇಲೆ ನನಗೆ ಕರುಣೆ ಇದೆಯೋ ಅವನನ್ನು ಕರುಣಿಸುವೆನು ಮತ್ತು ಯಾವನ ಮೇಲೆ ನನಗೆ ದಯೆ ಇದೆಯೋ ಅವನಿಗೆ ದಯೆ ತೋರಿಸುವೆನು ಎಂದು ಹೇಳುತ್ತಾನೆ. ಹೀಗಿರುವಾಗ ಅದು ಇಚ್ಛಿಸುವವನಿಂದಾಗಲೀ ಪ್ರಯಾಸಪಡುವವನಿಂದಾಗಲೀ ಆಗದೆ ಕರುಣೆ ತೋರಿ ಸುವ ದೇವರಿಂದಲೇ ಆಗುವದು. ಬರಹವು ಫರೋ ಹನಿಗೆ--ನನ್ನ ಬಲವನ್ನು ನಿನ್ನಲ್ಲಿ ತೋರಿಸುವ ಹಾಗೆಯೂ ನನ್ನ ನಾಮವು ಭೂಮಿಯ ಎಲ್ಲಾ ಕಡೆಯಲ್ಲಿ ಪ್ರಸಿದ್ಧಿ ಹೊಂದಬೇಕೆಂಬ ಉದ್ದೇಶದಿಂದಲೂ ನಾನು ನಿನ್ನನ್ನು ಉನ್ನತ ಸ್ಥಿತಿಗೆ ತಂದಿದ್ದೇನೆ ಎಂದು ಹೇಳುತ್ತದೆ. ಆದದರಿಂದ ಆತನು ಯಾವನನ್ನು ಕರುಣಿಸಬೇಕೆಂದಿ ರುವನೋ ಅವನನ್ನು ಕರುಣಿಸುವನು; ಯಾವನನ್ನು ಕಠಿಣಪಡಿಸಬೇಕೆಂದಿರುವನೋ ಅವನನ್ನು ಕಠಿಣ ಪಡಿಸುವನು.
- Revelation 15:3–4 ಪ್ರಕಟನೆ 15:3–4ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
- Psalm 136:10–22 ಕೀರ್ತನೆಗಳು 136:10–22ಐಗುಪ್ತದ ಚೊಚ್ಚಲಾದವುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಇಸ್ರಾಯೇಲನನ್ನು ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ. ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಅವರನ್ನು ಹೊರಗೆ ತಂದನು; ಆತನ ಕರುಣೆಯು ಎಂದೆಂದಿಗೂ ಅದೆ. ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ತನ್ನ ಜನರನ್ನು ಅರಣ್ಯದಲ್ಲಿ ನಡೆಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ದೊಡ್ಡ ಅರಸುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಪ್ರಸಿ ದ್ಧರಾದ ಅರಸುಗಳನ್ನು ಕೊಂದುಹಾಕಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ. ತನ್ನ ಸೇವಕನಾದ ಇಸ್ರಾಯೇಲಿಗೆ ಅದು ಬಾಧ್ಯತೆಯಾಗಿದೆ; ಆತನ ಕರುಣೆಯು ಎಂದೆಂದಿಗೂ ಅದೆ.
- Romans 11:22 ರೋಮಾಪುರದವರಿಗೆ 11:22ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ.
- Romans 9:22–23 ರೋಮಾಪುರದವರಿಗೆ 9:22–23ಹೀಗಿರಲು ದೇವರು ತನ್ನ ಕೋಪವನ್ನು ತೋರಿಸುವದಕ್ಕೂ ತನ್ನ ಬಲವನ್ನು ಪ್ರಸಿದ್ಧಿಪಡಿಸುವದಕ್ಕೂ ಮನಸ್ಸುಳ್ಳವನಾಗಿ ನಾಶನಕ್ಕೆ ಯೋಗ್ಯವಾಗಿರುವ ಕೋಪದ ಪಾತ್ರೆಗಳಿಗಾಗಿ ಬಹು ದೀರ್ಘಶಾಂತಿಯಿಂದ ತಾಳಿಕೊಂಡು ಮುಂಚಿತ ವಾಗಿಯೇ ತಾನು ಮಹಿಮೆಗೋಸ್ಕರ ಸಿದ್ಧಮಾಡಿದ ಕರುಣೆಯ ಪಾತ್ರೆಗಳಿಗೆ ತನ್ನ ಮಹಿಮಾತಿಶಯವನ್ನು ತಿಳಿಯಪಡಿಸುವವನಾಗಿ