Psalms · chapter 145 · verse 7
Psalm 145:7 in Kannada
ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
Ninna bahu olletanada jnyaapakavannu avaru nudiyuvaru; ninna neetiya nimitta utsaahadhvani maaduvaru.
Psalm 145:7 in English
- King James Version (KJV)
- They shall abundantly utter the memory of thy great goodness, and shall sing of thy righteousness.
- World English Bible (WEB)
- They will utter the memory of your great goodness, and will sing of your righteousness.
- American Standard Version (ASV)
- They shall utter the memory of thy great goodness, And shall sing of thy righteousness.
- Bible in Basic English (BBE)
- Their sayings will be full of the memory of all your mercy, and they will make songs of your righteousness.
- Darby Translation (DBY)
- They shall abundantly utter the memory of thy great goodness, and shall sing aloud of thy righteousness.
- Webster's Bible (WBS)
- They shall abundantly utter the memory of thy great goodness, and shall sing of thy righteousness.
- Young's Literal Translation (YLT)
- The memorial of the abundance of Thy goodness they send forth. And Thy righteousness they sing.
Read in context
- 5ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
- 6ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
- 7ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
- 8ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
- 9ಕರ್ತನು ಸರ್ವರಿಗೂ ಒಳ್ಳೆಯವನು; ಆತನ ಅಂತಃಕರಣವು ಆತನ ಎಲ್ಲಾ ಕೆಲಸಗಳ ಮೇಲೆ ಅದೆ.
Cross references
- Isaiah 63:7 ಯೆಶಾಯ 63:7ಕರ್ತನು ನಮಗೆ ಮಾಡಿದ್ದೆಲ್ಲಾದರ ಪ್ರಕಾರ, ಕರ್ತನ ಪ್ರೀತಿ ಕೃಪೆಗಳನ್ನೂ ಕರ್ತನ ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು; ಆತನು ತನ್ನ ಅಂತಃಕರುಣೆಯ ಪ್ರಕಾರವೂ ತನ್ನ ಕೃಪೆಯ ಮಹಾ ಒಳ್ಳೇತನದ ಪ್ರಕಾರವೂ ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
- Psalm 36:10 ಕೀರ್ತನೆಗಳು 36:10ನಿನ್ನನ್ನು ತಿಳಿದವರಿಗೆ ನಿನ್ನ ಕೃಪೆಯನ್ನೂ ಯಥಾರ್ಥ ಹೃದಯದವರಿಗೆ ನಿನ್ನ ನೀತಿಯನ್ನೂ ನೆಲೆಯಾಗಿರಿಸು.
- Psalm 51:14 ಕೀರ್ತನೆಗಳು 51:14ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.
- Psalm 71:15–16 ಕೀರ್ತನೆಗಳು 71:15–16ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು. ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
- 2 Corinthians 9:11–12 2 ಕೊರಿಂಥದವರಿಗೆ 9:11–12ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಅದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟು ಮಾಡುವದು. ಹೇಗಂದರೆ ಈ ನಿಮ್ಮ ಸೇವೆಯ ಪರಿಚರ್ಯವು ಪರಿಶುದ್ಧರ ಕೊರತೆಗಳನ್ನು ನೀಗು ವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು.
- Revelation 19:1–3 ಪ್ರಕಟನೆ 19:1–3ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ.
- Isaiah 45:24–25 ಯೆಶಾಯ 45:24–25ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು. ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
- Psalm 72:1–3 ಕೀರ್ತನೆಗಳು 72:1–3ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು. ನಿನ್ನ ಜನರಿಗೆ ನೀತಿಯಿಂದಲೂ ದೀನರಿಗೆ ನ್ಯಾಯದಿಂದಲೂ ಆತನು ತೀರ್ಪು ಮಾಡು ವನು. ಬೆಟ್ಟಗಳೂ ಚಿಕ್ಕ ಗುಡ್ಡಗಳೂ ನೀತಿಯಿಂದ ಸಮಾಧಾನವನ್ನು ಜನರಿಗೆ ತರುವವು.
- Psalm 71:19 ಕೀರ್ತನೆಗಳು 71:19ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
- Psalm 89:16 ಕೀರ್ತನೆಗಳು 89:16ನಿನ್ನ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು ನಿನ್ನ ನೀತಿಯಲ್ಲಿ ಅವರು ಉನ್ನತಕ್ಕೇರು ವರು.
- Revelation 15:3–4 ಪ್ರಕಟನೆ 15:3–4ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
- 1 Peter 2:9–10 1 ಪೇತ್ರನು 2:9–10ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ. ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆ ಯಾಗಿದ್ದೀರಿ; ಮೊದಲು ಕರುಣೆ ಹೊಂದಿರಲಿಲ್ಲ, ಈಗ ಕರುಣೆ ಹೊಂದಿದವರಾಗಿದ್ದೀರಿ.