Psalms · chapter 97 · verse 8
Psalm 97:8 in Kannada
ಚೀಯೋನ್ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.
Cheeyon idannu keli santoshisitu. O kartane, ninna nyaayagala nimitta yehoodada kumaartegalu ullaasisuttaare.
Psalm 97:8 in English
- King James Version (KJV)
- Zion heard, and was glad; and the daughters of Judah rejoiced because of thy judgments, O LORD.
- World English Bible (WEB)
- Zion heard and was glad. The daughters of Judah rejoiced because of your judgments, LORD.
- American Standard Version (ASV)
- Zion heard and was glad, And the daughters of Judah rejoiced, Because of thy judgments, O Jehovah.
- Bible in Basic English (BBE)
- Zion gave ear and was glad; and the daughters of Judah were full of joy, because of your decisions, O Lord.
- Darby Translation (DBY)
- Zion heard, and rejoiced; and the daughters of Judah were glad, because of thy judgments, O Jehovah.
- Webster's Bible (WBS)
- Zion heard, and was glad; and the daughters of Judah rejoiced because of thy judgments, O LORD.
- Young's Literal Translation (YLT)
- Zion hath heard and rejoiceth, And daughters of Judah are joyful, Because of Thy judgments, O Jehovah.
Read in context
- 6ಆಕಾಶಗಳು ಆತನ ನೀತಿಯನ್ನು ತಿಳಿಸುತ್ತವೆ; ಎಲ್ಲಾ ಜನಗಳು ಆತನ ಘನವನ್ನು ನೋಡುತ್ತಾರೆ.
- 7ಕೆತ್ತಿದ ವಿಗ್ರಹಗಳನ್ನು ಸೇವಿಸಿ, ವಿಗ್ರಹಗಳಲ್ಲಿ ಹೆಮ್ಮೆಪಡುವ ವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಆತನನ್ನು ಆರಾಧಿಸಿರಿ.
- 8ಚೀಯೋನ್ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.
- 9ಕರ್ತನೇ, ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ; ಎಲ್ಲಾ ದೇವರುಗಳ ಮೇಲೆ ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದೀ.
- 10ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
Cross references
- Psalm 48:11 ಕೀರ್ತನೆಗಳು 48:11ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.
- Revelation 18:20 ಪ್ರಕಟನೆ 18:20ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.
- Zechariah 9:9 ಜೆಕರ್ಯ 9:9ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.
- Matthew 21:4–9 ಮತ್ತಾಯನು 21:4–9ಇದೆಲ್ಲವೂ ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರು ವಂತೆ ಆಯಿತು; ಅದೇನಂದರೆ-- ಇಗೋ, ನಿನ್ನ ಅರಸನು ಸಾತ್ವಿಕನು, ಆತನು ಕತ್ತೆಯನ್ನೂ ಕತ್ತೆಯ ಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ ಎಂದು ಚೀಯೋನ್ ಕುಮಾರ್ತೆಗೆ ಹೇಳಿರಿ ಎಂಬದೇ. ಆಗ ಶಿಷ್ಯರು ಹೊರಟುಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು. ಮತ್ತು ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿ ಆತನನ್ನು ಆದರ ಮೇಲೆ ಕೂಡ್ರಿಸಿದರು. ಆಗ ಅತಿ ದೊಡ್ಡ ಜನರ ಸಮೂಹವು ತಮ್ಮ ವಸ್ತ್ರಗಳನ್ನು ದಾರಿಯಲ್ಲಿ ಹಾಸಿದರು; ಬೇರೆಯವರು ಮರಗಳಿಂದ ಕೊಂಬೆಗಳನ್ನು ಕತ್ತರಿಸಿ ದಾರಿಯಲ್ಲಿ ಹರಡಿದರು. ಆತನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು--ದಾವೀದನ ಕುಮಾರನಿಗೆ ಹೊಸನ್ನ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು; ಮಹೋನ್ನತದಲ್ಲಿ ಹೊಸನ್ನ ಎಂದು ಕೂಗುತ್ತಾ ಹೇಳಿದರು.
- Isaiah 62:11 ಯೆಶಾಯ 62:11ಇಗೋ, ಕರ್ತನು ಭೂಮಿಯ ಅಂತ್ಯದ ವರೆಗೆ ಪ್ರಕಟಿಸಿದ್ದಾನೆ. ಚೀಯೋನಿನ ಕುಮಾ ರಿಯೇ--ಇಗೋ, ನಿನ್ನ ರಕ್ಷಣೆಯು ಬರುತ್ತದೆ; ಆತನ ಬಹುಮಾನವು ಆತನ ಸಂಗಡವೂ ಆತನ ಕೆಲಸವು ಆತನ ಮುಂದೆಯೂ ಅದೆ ಎಂದು ಹೇಳಿರಿ.ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
- Isaiah 52:7–10 ಯೆಶಾಯ 52:7–10ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ! ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು. ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ. ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
- Psalm 58:10 ಕೀರ್ತನೆಗಳು 58:10ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.
- Zephaniah 3:14–17 ಚೆಫನ್ಯ 3:14–17ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು. ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Revelation 19:1–7 ಪ್ರಕಟನೆ 19:1–7ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ. ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.
- Psalm 52:6 ಕೀರ್ತನೆಗಳು 52:6ನೀತಿವಂತರು ಸಹ ಭಯಪಟ್ಟು ಅವನನ್ನು ನೋಡಿ ನಗುವರು.