Psalms · chapter 102 · verse 16
Psalm 102:16 in Kannada
ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು.
Kartanu cheeyonannu kattuvanu; aatanu tanna mahimeyalli kaanisikolluvanu.
Psalm 102:16 in English
- King James Version (KJV)
- When the LORD shall build up Zion, he shall appear in his glory.
- World English Bible (WEB)
- For the LORD has built up Zion. He has appeared in his glory.
- American Standard Version (ASV)
- For Jehovah hath built up Zion; He hath appeared in his glory.
- Bible in Basic English (BBE)
- When the Lord has put up the walls of Zion, and has been been in his glory;
- Darby Translation (DBY)
- When Jehovah shall build up Zion, he will appear in his glory.
- Webster's Bible (WBS)
- When the LORD shall build up Zion, he will appear in his glory.
- Young's Literal Translation (YLT)
- For Jehovah hath builded Zion, He hath been seen in His honour,
Read in context
- 14ನಿನ್ನ ಸೇವಕರು ಅದರ ಕಲ್ಲುಗಳಲ್ಲಿ ಇಷ್ಟಪಡುತ್ತಾರೆ. ಅದರ ಧೂಳನ್ನು ಕರುಣಿಸುತ್ತಾರೆ.
- 15ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು.
- 16ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು.
- 17ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ.
- 18ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು.
Cross references
- Isaiah 60:1–2 ಯೆಶಾಯ 60:1–2ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು. ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು.
- Jeremiah 33:7 ಯೆರೆಮೀಯ 33:7ಯೆಹೂದದ ಸೆರೆಯನ್ನೂ ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ ಅವರನ್ನು ಮುಂಚಿನ ಹಾಗೆ ಕಟ್ಟುವೆನು.
- Psalm 147:2 ಕೀರ್ತನೆಗಳು 147:2ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
- Isaiah 2:2–3 ಯೆಶಾಯ 2:2–3ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು. ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
- Zechariah 2:6–13 ಜೆಕರ್ಯ 2:6–13ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ. ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ. ಇಗೋ, ನಾನು ನನ್ನ ಕೈಯನ್ನು ಅವರ ಮೇಲೆ ಜಾಡಿಸುತ್ತೇನೆ; ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು; ಸೈನ್ಯಗಳ ಕರ್ತನು ನನ್ನನ್ನು ಕಳುಹಿಸಿದನೆಂದು ನೀವು ತಿಳಿಯುವಿರಿ. ಚೀಯೋನ್ ಕುಮಾರ್ತೆಯೇ, ಹಾಡಿ ಹರ್ಷಿಸು. ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸವಾಗಿರುವೆನೆಂದು ಕರ್ತನು ಅನ್ನುತ್ತಾನೆ. ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ. ಇದಲ್ಲದೆ ಕರ್ತನು ತನ್ನ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸ್ವಾಸ್ತ್ಯವಾಗಿ ಹೊಂದುವನು. ಯೆರೂಸಲೇಮನ್ನು ತಿರುಗಿ ಆದು ಕೊಳ್ಳುವನು.ಓ ಮನುಷ್ಯರೇ, ನೀವೆಲ್ಲಾ ಕರ್ತನ ಮುಂದೆ ಮೌನ ವಾಗಿರ್ರಿ; ಆತನು ತನ್ನ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾನೆ. ಓ ಮನುಷ್ಯರೇ, ನೀವೆಲ್ಲಾ ಕರ್ತನ ಮುಂದೆ ಮೌನ ವಾಗಿರ್ರಿ; ಆತನು ತನ್ನ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾನೆ.
- Jeremiah 31:4 ಯೆರೆಮೀಯ 31:4ಇಸ್ರಾ ಯೇಲಿನ ಕನ್ಯಾಸ್ತ್ರೀಯೇ, ನೀನು ಕಟ್ಟಲ್ಪಟ್ಟಿರುವ ಹಾಗೆ ತಿರುಗಿ ನಿನ್ನನ್ನು ಕಟ್ಟುವೆನು; ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷಪಡು ವವರ ನಾಟ್ಯದಲ್ಲಿ ಹೊರಡುವಿ.
- Isaiah 66:18 ಯೆಶಾಯ 66:18ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು.
- Isaiah 60:7 ಯೆಶಾಯ 60:7ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು.
- Micah 2:9 ಮೀಕ 2:9ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.
- Psalm 97:6 ಕೀರ್ತನೆಗಳು 97:6ಆಕಾಶಗಳು ಆತನ ನೀತಿಯನ್ನು ತಿಳಿಸುತ್ತವೆ; ಎಲ್ಲಾ ಜನಗಳು ಆತನ ಘನವನ್ನು ನೋಡುತ್ತಾರೆ.
- Psalm 69:35 ಕೀರ್ತನೆಗಳು 69:35ದೇವರು ಚೀಯೋನನ್ನು ರಕ್ಷಿಸಿ ಯೆಹೂದದ ಪಟ್ಟ ಣಗಳನ್ನು ಕಟ್ಟುವನು; ಹೀಗೆ ಅವರು ಅಲ್ಲಿ ವಾಸ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುವರು.ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು.
- Isaiah 14:26 ಯೆಶಾಯ 14:26ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.