Psalms · chapter 147 · verse 2
Psalm 147:2 in Kannada
ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
Kartanu yeroosalemannu kattuttaane; chadarihoda israayelyarannu koodisuttaane.
Psalm 147:2 in English
- King James Version (KJV)
- The LORD doth build up Jerusalem: he gathereth together the outcasts of Israel.
- World English Bible (WEB)
- The LORD builds up Jerusalem. He gathers together the outcasts of Israel.
- American Standard Version (ASV)
- Jehovah doth build up Jerusalem; He gathereth together the outcasts of Israel.
- Bible in Basic English (BBE)
- The Lord is building up Jerusalem; he makes all the outlaws of Israel come together.
- Darby Translation (DBY)
- Jehovah doth build up Jerusalem: he gathereth the outcasts of Israel.
- Webster's Bible (WBS)
- The LORD buildeth up Jerusalem: he gathereth together the outcasts of Israel.
- Young's Literal Translation (YLT)
- Building Jerusalem [is] Jehovah, The driven away of Israel He gathereth.
Read in context
- 1ಕರ್ತನನ್ನು ಸ್ತುತಿಸಿರಿ; ನಮ್ಮ ದೇವರನ್ನು ಕೀರ್ತಿಸುವದು ಒಳ್ಳೇದು; ಸ್ತೋತ್ರವು ರಮ್ಯವೂ ಯೋಗ್ಯವೂ ಆಗಿದೆ.
- 2ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
- 3ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
- 4ಆತನು ನಕ್ಷತ್ರಗಳ ಸಂಖ್ಯೆಯನ್ನು ಹೇಳು ತ್ತಾನೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆ ಯುತ್ತಾನೆ.
Cross references
- Deuteronomy 30:3 ಧರ್ಮೋಪದೇಶಕಾಂಡ 30:3ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು.
- Isaiah 56:8 ಯೆಶಾಯ 56:8ಇಸ್ರಾಯೇಲಿನ ತಳ್ಳಲ್ಪ ಟ್ಟವರನ್ನು ಕೂಡಿಸುವಂಥ ಕರ್ತನಾದ ದೇವರು ಹೇಳುವದೇನಂದರೆ--ನಾನು ಕೂಡಿಸಿದ ಇಸ್ರಾ ಯೇಲ್ಯರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು ಎಂದು ಹೇಳುತ್ತಾನೆ.
- Psalm 51:18 ಕೀರ್ತನೆಗಳು 51:18ನಿನ್ನ ದಿವ್ಯ ಚಿತ್ತದ ಪ್ರಕಾರ ಚೀಯೋನಿಗೆ ಒಳ್ಳೇದು ಮಾಡು; ಯೆರೂಸಲೇಮಿನ ಗೋಡೆಗಳನ್ನು ಕಟ್ಟು.ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.
- Psalm 102:20–22 ಕೀರ್ತನೆಗಳು 102:20–22ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ. ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ ತನ್ನ ಪರಿಶುದ್ಧವಾದ ಉನ್ನತ ಸ್ಥಳದಿಂದ ಕಣ್ಣಿಟ್ಟು ಆಕಾಶದಿಂದ ಭೂಮಿಯನ್ನು ನೋಡಿದ್ದಾನೆ.
- Isaiah 62:7 ಯೆಶಾಯ 62:7ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
- Ephesians 2:12–19 ಎಫೆಸದವರಿಗೆ 2:12–19ಇದಲ್ಲದೆ ನೀವು ಆ ಕಾಲದಲ್ಲಿ ಕ್ರಿಸ್ತನಿಲ್ಲದವರು ಇಸ್ರಾಯೇಲಿನ ಬಾಧ್ಯತೆಯಲ್ಲಿ ಹಕ್ಕಿಲ್ಲದವರೂ ಪರಕೀಯರು ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಿಗೆ ಅನ್ಯರೂ ನಿರೀಕ್ಷೆ ಯಿಲ್ಲದವರೂ ಈ ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ. ಈಗಲಾ ದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸವಿಾಪಸ್ಥ ರಾದಿರಿ. ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದ ಆತನೇ ನಮ್ಮ ಸಮಾಧಾನವಾಗಿ ನಮ್ಮಿಬ್ಬರನ್ನು ಅಗಲಿ ಸಿದ ಅಡ್ಡಗೋಡೆಯನ್ನು ಆತನು ಕೆಡವಿಹಾಕಿದನು. ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು. ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ. ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು. ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು. ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.
- Ezekiel 39:27–28 ಯೆಹೆಜ್ಕೇಲನು 39:27–28ನಾನು ಅವರನ್ನು ಜನಗಳೊಳಗಿಂದ ಮತ್ತೆ ತಂದ ಮೇಲೆ ಅವರ ಶತ್ರುಗಳ ದೇಶದೊಳಗಿಂದ ಅವರನ್ನು ಕೂಡಿಸಿ ಅನೇಕ ಜನಾಂಗ ಗಳ ಮುಂದೆ ಅವರಲ್ಲಿ ಪರಿಶುದ್ಧನಾಗುವೆನು; ಆಮೇಲೆ ಅವರನ್ನು ಅನ್ಯಜನಾಂಗಗಳೊಳಗಿಂದ ಸೆರೆಗೈದವನೂ ಇನ್ನು ಮೇಲೆ ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ದೇಶಕ್ಕೆ ಕೂಡಿಸಿದವನು ನಾನೇ ಅವರ ದೇವರಾದ ಕರ್ತನೆಂದು ಅವರು ತಿಳಿಯುವರು.ಇಲ್ಲವೇ ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವದಿಲ್ಲ; ನಾನು ನನ್ನ ಆತ್ಮವನ್ನು ಇಸ್ರಾ ಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 14:32 ಯೆಶಾಯ 14:32ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
- Jeremiah 32:37 ಯೆರೆಮೀಯ 32:37ಇಗೋ, ನಾನು ನನ್ನ ಕೋಪ ದಲ್ಲಿಯೂ ಉಗ್ರದಲ್ಲಿಯೂ ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶಗಳೊಳಗಿಂದ ಅವರನ್ನು ಕೂಡಿಸಿ ಈ ಸ್ಥಳಕ್ಕೆ ತಿರಿಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.
- Ezekiel 38:8 ಯೆಹೆಜ್ಕೇಲನು 38:8ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ.
- Isaiah 27:13 ಯೆಶಾಯ 27:13ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.
- Ezekiel 36:24–38 ಯೆಹೆಜ್ಕೇಲನು 36:24–38ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು. ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ. ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿ ಸುವಿರಿ; ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು; ಬೆಳೆ ಬೆಳೆ ಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವದಿಲ್ಲ. ಅನ್ಯಜನಾಂಗ ಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನು ಹೆಚ್ಚಿಸುವೆನು. ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ. ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ದೇವರಾದ ಕರ್ತನು ಹೇಳುತ್ತಾನೆ; ಓ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾ ರ್ಗಗಳಿಗೆ ನಾಚಿಕೆ ಪಟ್ಟು ಲಜ್ಜೆಹೊಂದಿರಿ. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸು ವೆನು; ಹಾಳಾಗಿರುವ ಸ್ಥಳಗಳೂ ಸಹ ಕಟ್ಟಲ್ಪಡುವವು. ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಬೀಡಾಗಿ ಕಾಣದೆ ಉಳುಮೆಗೊಂಡಿರುವದು. ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿ ಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ ಎಂದು ಹೇಳುವರು. ಆಮೇಲೆ ನಿಮ್ಮ ಸುತ್ತಲೂ ಉಳಿದಿರುವ ಅನ್ಯಜನಾಂಗಗಳು ನಶಿಸಿ ಹೋಗಿರುವ ಸ್ಥಳಗಳನ್ನು ಮತ್ತು ಹಾಳಾಗಿರುವ ಸ್ಥಳದಲ್ಲಿ ಗಿಡ ನೆಟ್ಟ ವನು ಕರ್ತನಾದ ನಾನೇ ಎಂದು ತಿಳಿಯುವರು; ಕರ್ತನಾದ ನಾನೇ ಇದನ್ನು ಹೇಳಿದ್ದೇನೆ, ನಾನೇ ಇದನ್ನು ಮಾಡುತ್ತೇನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇದನ್ನು ಅವರಿಗೆ ಮಾಡಲು ನಾನಿನ್ನೂ ಇಸ್ರಾಯೇಲನ ಮನೆ ತನದವರಿಂದ ವಿಚಾರಿಸುವೆನು; ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು. ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.