Psalms · chapter 105 · verse 26
Psalm 105:26 in Kannada
ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.
Tanna sevakanaada mosheyannoo taanu aadu konda aaronanannoo kaluhisidanu.
Psalm 105:26 in English
- King James Version (KJV)
- He sent Moses his servant; [and] Aaron whom he had chosen.
- World English Bible (WEB)
- He sent Moses, his servant, and Aaron, whom he had chosen.
- American Standard Version (ASV)
- He sent Moses his servant, [And] Aaron whom he had chosen.
- Bible in Basic English (BBE)
- He sent Moses, his servant, and Aaron, the man of his selection.
- Darby Translation (DBY)
- He sent Moses his servant, [and] Aaron whom he had chosen:
- Webster's Bible (WBS)
- He sent Moses his servant; [and] Aaron whom he had chosen.
- Young's Literal Translation (YLT)
- He hath sent Moses His servant, Aaron whom He had fixed on.
Read in context
- 24ಆತನು ತನ್ನ ಜನರನ್ನು ಬಹಳ ಅಭಿವೃದ್ಧಿಮಾಡಿ ಅವರ ವೈರಿಗಳಿಗಿಂತ ಬಲಿಷ್ಠ ರನ್ನಾಗಿ ಮಾಡಿದನು.
- 25ಆತನು ಆ ದೇಶದವರ ಹೃದಯವನ್ನು ಮಾರ್ಪ ಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು.
- 26ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.
- 27ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
- 28ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
Cross references
- Exodus 3:10 ವಿಮೋಚನಕಾಂಡ 3:10ಆದದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲ್ ಮಕ್ಕಳಾದ ನನ್ನ ಜನರನ್ನು ನೀನು ಐಗುಪ್ತದೊಳಗಿಂದ ಹೊರಗೆ ಬರಮಾಡಬೇಕು ಅಂದನು.
- Exodus 29:5–46 ವಿಮೋಚನಕಾಂಡ 29:5–46ತರು ವಾಯ ಆ ವಸ್ತ್ರಗಳನ್ನು ತಕ್ಕೊಂಡು ಆರೋನನಿಗೆ ಅಂಗಿಯನ್ನೂ ಎಫೋದಿನ ನಿಲುವಂಗಿಯನ್ನೂ ಎಫೋ ದನ್ನೂ ಎದೆಪದಕವನ್ನೂ ತೊಡಿಸಿ ಎಫೋದಿನ ವಿಚಿತ್ರ ವಾದ ನಡುಕಟ್ಟನ್ನು ಅವನಿಗೆ ಕಟ್ಟಿ ಅವನ ತಲೆಗೆ ಮುಂಡಾಸವನ್ನು ಇಟ್ಟು ಮುಂಡಾಸದ ಮೇಲೆ ಪರಿಶುದ್ಧ ಕಿರೀಟವನ್ನು ಇಟ್ಟು ಅಭಿಷೇಕಿಸುವ ಎಣ್ಣೆಯನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಬೇಕು. ನೀನು ಅವನ ಕುಮಾರರನ್ನು ಕರಕೊಂಡು ಬಂದು ಅವರಿಗೆ ಮೇಲಂಗಿಗಳನ್ನು ತೊಡಿಸಿ ಆರೋನನಿಗೂ ಅವನ ಕುಮಾರರಿಗೂ ನಡುಕಟ್ಟುಗಳನ್ನು ಕಟ್ಟಿ ಅವರಿಗೆ ಕುಲಾಯಿಗಳನ್ನು ಇಡಬೇಕು. ಹೀಗೆ ಅವರಿಗೆ ಯಾಜಕ ಸೇವೆಯು ಶಾಶ್ವತ ಕಟ್ಟಳೆಯಾಗಿರುವದು. ಆರೋನ ನನ್ನೂ ಅವನ ಕುಮಾರರನ್ನೂ ನೀನು ಪ್ರತಿಷ್ಠೆ ಮಾಡಬೇಕು. ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಕುಮಾರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಆ ಹೋರಿಯನ್ನು ಕರ್ತನ ಮುಂದೆ ಸಭೆಯ ಗುಡಾರದ ಬಾಗಲಲ್ಲಿ ವಧಿಸಬೇಕು. ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ರಕ್ತವನ್ನೆಲ್ಲಾ ಯಜ್ಞವೇದಿಯ ಅಡಿಯಲ್ಲಿ ಸುರಿಯಬೇಕು. ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು. ಇದಲ್ಲದೆ ಹೋರಿಯ ಮಾಂಸ ವನ್ನೂ ಅದರ ಚರ್ಮವನ್ನೂ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪದ ಬಲಿಯಾಗಿದೆ. ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳ ಬೇಕು. ಆರೋನನೂ ಅವನ ಕುಮಾರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರು ವಾಯ ಆ ಟಗರನ್ನು ನೀನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಬೇಕು. ಇದಲ್ಲದೆ ಆ ಟಗರನ್ನು ತುಂಡು ತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು. ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ. ಇನ್ನೊಂದು ಟಗರನ್ನು ನೀನು ತಂದಾಗ ಆರೋ ನನೂ ಅವನ ಕುಮಾರರೂ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಅದನ್ನು ವಧಿಸಿ ಅದರ ರಕ್ತವನ್ನು ಆರೋನನ ಮತ್ತು ಅವನ ಕುಮಾರರ ಬಲ ಕಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಕುಮಾರರೂ ಅವರ ವಸ್ತ್ರಗಳೂ ಪರಿಶುದ್ಧ ವಾಗುವ ಹಾಗೆ ಯಜ್ಞವೇದಿಯ ಮೇಲಿರುವ ರಕ್ತವನ್ನೂ ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಕುಮಾರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು. ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿ ರುವ ಪರೆಯನ್ನೂ ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಬಲ ತೊಡೆಯನ್ನೂ ತೆಗೆದುಕೊಳ್ಳಬೇಕು. ಯಾಕಂದರೆ ಅದು ಪ್ರತಿಷ್ಠೆಯ ಟಗರು. ಕರ್ತನ ಮುಂದಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿ ಯನ್ನೂ ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಅವರು ಕರ್ತನ ಮುಂದೆ ಅದನ್ನು ತೂಗು ಅರ್ಪಣೆಗಾಗಿ ತೂಗಬೇಕು. ನೀನು ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ದಹನಬಲಿ ಯಾಗಿ ಕರ್ತನ ಮುಂದೆ ಸುವಾಸನೆಗೋಸ್ಕರ ದಹಿಸ ಬೇಕು. ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಅರ್ಪಣೆ. ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಮುಂದೆ ತೂಗು ಅರ್ಪಣೆಗಾಗಿ ತೂಗಬೇಕು. ಅದು ನಿನ್ನ ಪಾಲಾಗಿರುವದು. ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು. ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು. ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಕುಮಾರರಿಗೆ ಆಗಬೇಕು. ಅವರು ಅವುಗಳನ್ನು ತೊಟ್ಟುಕೊಂಡು ಅಭಿಷೇಕಿಸಲ್ಪಟ್ಟು ಪ್ರತಿಷ್ಠಿಸಲ್ಪಡಬೇಕು. ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು. ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸು. ಆರೋನನೂ ಅವನ ಕುಮಾರರೂ ಟಗರಿನ ಮಾಂಸ ವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ಸಭೆಯ ಗುಡಾ ರದ ಬಾಗಲಿನ ಬಳಿಯಲ್ಲಿ ಊಟಮಾಡಬೇಕು. ಅವ ರನ್ನು ಪ್ರತಿಷ್ಠೆಮಾಡುವದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿ ದವುಗಳನ್ನು ಅವರೇ ಊಟಮಾಡಬೇಕು. ಅನ್ಯರು ಅವುಗಳನ್ನು ಉಣ್ಣಬಾರದು, ಯಾಕಂದರೆ ಅವುಗಳು ಪರಿಶುದ್ಧವಾದವುಗಳು. ಪ್ರತಿಷ್ಠೆಯ ಮಾಂಸದ ಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದ ವರೆಗೆ ಏನಾದರೂ ಮಿಕ್ಕಿದ್ದರೆ ಅದನ್ನು ಬೆಂಕಿಯಿಂದ ಸುಡ ಬೇಕು. ಅದು ಪರಿಶುದ್ಧವಾಗಿರುವದರಿಂದ ಅದನ್ನು ಊಟ ಮಾಡಬಾರದು. ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು. ಪಾಪದ ಯಜ್ಞವಾದ ಹೋರಿಯನ್ನು ಪ್ರತಿದಿನ ಪ್ರಾಯಶ್ಚಿತ್ತಕ್ಕಾಗಿ ತಂದು ಯಜ್ಞವೇದಿಗಾಗಿ ಪ್ರಾಯ ಶ್ಚಿತ್ತ ಮಾಡಿದ ಮೇಲೆ ಅದರ ದೋಷವನ್ನು ಪರಿ ಹರಿಸಿ ಅದನ್ನು ಪವಿತ್ರಮಾಡುವದಕ್ಕೆ ಅದನ್ನು ಅಭಿಷೇಕಿಸಬೇಕು. ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು. ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು. ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು. ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು. ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು. ಅಲ್ಲಿ ನಾನು ಇಸ್ರಾಯೇಲ್ ಮಕ್ಕಳನ್ನು ಸಂಧಿಸುವೆನು. ಗುಡಾರವು ನನ್ನ ಮಹಿಮೆಯಿಂದ ಪವಿತ್ರವಾಗುವದು. ಸಭೆಯ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಮಾಡುವೆನು. ಆರೋನನನ್ನೂ ಅವನ ಕುಮಾರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರಮಾಡುವೆನು. ಇಸ್ರಾಯೇಲ್ ಮಕ್ಕಳ ಮಧ್ಯ ದಲ್ಲಿ ನಾನು ವಾಸಮಾಡಿ ಅವರಿಗೆ ದೇವರಾಗಿರುವೆನು.ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು. ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.
- Exodus 28:29–38 ವಿಮೋಚನಕಾಂಡ 28:29–38ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲ್ ಮಕ್ಕಳ ಹೆಸರುಗಳನ್ನು ಯಾವಾಗಲೂ ಕರ್ತನ ಮುಂದೆ ಜ್ಞಾಪಕಮಾಡುವದಕ್ಕಾಗಿ ನ್ಯಾಯದ ಎದೆ ಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು. ನ್ಯಾಯದ ಎದೆಪದಕದಲ್ಲಿ ಊರೀಮ್ ತುವ್ಮೆಾಮ್ ಗಳನ್ನು ಇಡಬೇಕು. ಆರೋನನು ಕರ್ತನ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಕರ್ತನ ಮುಂದೆ ಯಾವಾಗಲೂ ಇಸ್ರಾಯೇಲ್ ಮಕ್ಕಳ ನ್ಯಾಯವನ್ನು ತನ್ನ ಹೃದಯದ ಮೇಲೆ ಹೊರಬೇಕು. ಇದಲ್ಲದೆ ಎಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ನೂಲಿನಲ್ಲಿ ಮಾಡಬೇಕು. ಅದರ ಮಧ್ಯದಲ್ಲಿ ಮೇಲ್ಗಡೆ (ತಲೆದೂರಿಸುವದಕ್ಕೆ) ರಂಧ್ರವಿರಬೇಕು. ಆ ರಂಧ್ರದ ಸುತ್ತಲೂ ಹೆಣಿಗೆಯ ಕೆಲಸದ ಗೋಟಿರ ಬೇಕು. ಅದು ಹರಿಯದ ಹಾಗೆ ಅದಕ್ಕೆ ರಂಧ್ರದ ಕವಚವಿರಬೇಕು. ನಿಲುವಂಗಿಯ ಅಂಚಿನ ಮೇಲೆ ನೀಲ ಧೂಮ್ರ ರಕ್ತವರ್ಣಗಳ ದಾಳಿಂಬರಗಳನ್ನು ಅದರ ಅಂಚಿನ ಸುತ್ತಲೂ ಮಾಡಿ ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನು ಸುತ್ತಲೂ ಇರಿಸ ಬೇಕು. ಬಂಗಾರದ ಗಂಟೆಯೂ ದಾಳಿಂಬರವೂ ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು. ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಕರ್ತನ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ ಅವನು ಸಾಯದಂತೆ ಅವುಗಳ ಶಬ್ದವು ಕೇಳಿಸಬೇಕು. ಶುದ್ಧ ಬಂಗಾರದ ತಗಡು ಗಳನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ ಕರ್ತನಿಗೆ ಪರಿಶುದ್ಧ ಎಂದು ಅದರ ಮೇಲೆ ಕೆತ್ತಬೇಕು. ಅದು ಮುಂಡಾಸದ ಮುಂಭಾಗದಲ್ಲಿರುವಂತೆ ನೀನು ಅದನ್ನು ನೀಲಿ ನೂಲಿನಿಂದ ಕಟ್ಟಬೇಕು. ಇಸ್ರಾಯೇಲ್ ಮಕ್ಕಳು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ಅಕ್ರಮವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಕರ್ತನ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
- Exodus 7:1 ವಿಮೋಚನಕಾಂಡ 7:1ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ.
- Exodus 28:12 ವಿಮೋಚನಕಾಂಡ 28:12ಆ ಎರಡು ಕಲ್ಲುಗಳನ್ನು ಎಫೋದಿನ ಹೆಗಲು ಭಾಗದ ಮೇಲೆ ಇಸ್ರಾಯೇಲ್ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಕರ್ತನ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.
- Numbers 16:40 ಅರಣ್ಯಕಾಂಡ 16:40ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
- Exodus 28:1–2 ವಿಮೋಚನಕಾಂಡ 28:1–2ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲಿಯೇಜರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು. ನಿನ್ನ ಸಹೋದರನಾದ ಆರೋನನ ಗೌರವ ಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.
- Numbers 17:5–8 ಅರಣ್ಯಕಾಂಡ 17:5–8ಆಗ ಏನಾಗುವ ದಂದರೆ, ನಾನು ಯಾವನನ್ನು ಆದುಕೊಳ್ಳುತ್ತೇನೋ ಆ ಮನುಷ್ಯನ ಕೋಲು ಚಿಗುರುವದು. ಹೀಗೆ ಇಸ್ರಾ ಯೇಲ್ ಮಕ್ಕಳು ನಿಮಗೆ ವಿರೋಧವಾಗಿ ಗುಣುಗುಟ್ಟು ವದನ್ನು ನಾನು ನಿಲ್ಲಿಸಿಬಿಡುವೆನು ಅಂದನು. ಹಾಗೆಯೇ ಮೋಶೆಯು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಮನೆಗಳ ಪ್ರಕಾರ ಒಬ್ಬೊಬ್ಬ ಪ್ರಧಾನಿ ಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರ ದೊಳಗೆ ಕರ್ತನ ಸಮ್ಮುಖದಲ್ಲಿ ಇಟ್ಟನು. ಮರು ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಸಾಕ್ಷೀ ಗುಡಾರದೊಳೆಗೆ ಪ್ರವೇಶಿಸುವಾಗ ಇಗೋ, ಲೇವಿ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು.
- Numbers 16:47–48 ಅರಣ್ಯಕಾಂಡ 16:47–48ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು. ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು.
- Acts 7:34–35 ಅಪೊಸ್ತಲರ ಕೃತ್ಯಗಳು 7:34–35ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು. ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.
- Micah 6:4 ಮೀಕ 6:4ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು.
- Exodus 6:26–27 ವಿಮೋಚನಕಾಂಡ 6:26–27ಇಸ್ರಾಯೇಲ್ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೊಳಗಿಂದ ಹೊರಗೆ ಬರಮಾಡ ಬೇಕೆಂದು ಕರ್ತನು ಯಾರಿಗೆ ಹೇಳಿದನೋ ಆ ಆರೋನ ಮೋಶೆ ಇವರೇ. ಇಸ್ರಾಯೇಲ್ ಮಕ್ಕ ಳನ್ನು ಹೊರಗೆ ತರುವದಕ್ಕಾಗಿ ಐಗುಪ್ತದ ಅರಸನಾದ ಫರೋಹನ ಸಂಗಡ ಮಾತನಾಡಿದ ಮೋಶೆ ಆರೋನರೂ ಇವರೇ.