Psalms · chapter 105 · verse 28
Psalm 105:28 in Kannada
ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
Aatanu kattalannu kaluhisi adannu kattalaaga maadidanu; aaga aatana maatige avaru edu raadalilla.
Psalm 105:28 in English
- King James Version (KJV)
- He sent darkness, and made it dark; and they rebelled not against his word.
- World English Bible (WEB)
- He sent darkness, and made it dark. They didn’t rebel against his words.
- American Standard Version (ASV)
- He sent darkness, and made it dark; And they rebelled not against his words.
- Bible in Basic English (BBE)
- He sent black night and made it dark; and they did not go against his word.
- Darby Translation (DBY)
- He sent darkness, and made it dark; and they rebelled not against his word.
- Webster's Bible (WBS)
- He sent darkness, and made it dark; and they rebelled not against his word.
- Young's Literal Translation (YLT)
- He hath sent darkness, and it is dark, And they have not provoked His word.
Read in context
- 26ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.
- 27ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
- 28ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
- 29ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು.
- 30ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು.
Cross references
- Psalm 99:7 ಕೀರ್ತನೆಗಳು 99:7ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.
- Joel 2:31 ಯೋವೇಲ 2:31ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
- 2 Peter 2:4 2 ಪೇತ್ರನು 2:4ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು.
- 2 Peter 2:17 2 ಪೇತ್ರನು 2:17ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು.
- Luke 23:44–45 ಲೂಕನು 23:44–45ಆಗ ಸುಮಾರು ಆರನೇತಾಸಾಗಿತ್ತು; ಒಂಭತ್ತನೇ ತಾಸಿನವರೆಗೆ ಭೂಮಿಯ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ಸೂರ್ಯನು ಕತ್ತಲಾದನು; ದೇವಾಲಯದ ತೆರೆಯು ಮಧ್ಯದಲ್ಲಿ ಹರಿಯಿತು.
- Joel 2:2 ಯೋವೇಲ 2:2ಕತ್ತಲೆಯೂ ಮೊಬ್ಬೂ ಉಳ್ಳ ದಿವಸವೂ; ಮೇಘವೂ ಕಾರ್ಗತ್ತಲೂ ಉಳ್ಳ ದಿವಸ ವೂ; ಬೆಟ್ಟಗಳ ಮೇಲೆ ಹಾಸಿರುವ ಉದಯದ ಹಾಗಿದೆ. ದೊಡ್ಡ ಬಲವಾದ ಜನವು; ಅದರ ಹಾಗೆ ಎಂದೂ ಇದ್ದದ್ದಿಲ್ಲ; ಅದರ ತರುವಾಯ ತಲತಲಾಂತರಗಳ ವರುಷಗಳ ವರೆಗೆ ಇನ್ನು ಇರುವದೇ ಇಲ್ಲ.
- Ezekiel 2:4–8 ಯೆಹೆಜ್ಕೇಲನು 2:4–8ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು. ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು. ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ. ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ. ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವ ದನ್ನು ಕೇಳು; ಆ ತಿರುಗಿಬೀಳುವವರ ಮನೆಯ ಹಾಗೆ ನೀನೂ ತಿರುಗಿಬೀಳಬೇಡ; ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವದನ್ನು ತಿನ್ನು ಅಂದನು.
- Exodus 10:21–23 ವಿಮೋಚನಕಾಂಡ 10:21–23ಆಗ ಕರ್ತನು ಮೋಶೆಗೆ--ಐಗುಪ್ತದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು ಅಂದನು. ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ ಐಗುಪ್ತದೇಶದಲ್ಲೆಲ್ಲಾ ಮೂರು ದಿನಗಳ ವರೆಗೆ ಘೋರವಾದ ಕತ್ತಲು ಕವಿಯಿತು. ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.