Psalms · chapter 105 · verse 30
Psalm 105:30 in Kannada
ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು.
Avara deshadalellaa bahalavaagi kappegalu tumbi kondavu. Arasugala kothadigalalli saha bandavu.
Psalm 105:30 in English
- King James Version (KJV)
- Their land brought forth frogs in abundance, in the chambers of their kings.
- World English Bible (WEB)
- Their land swarmed with frogs, even in the rooms of their kings.
- American Standard Version (ASV)
- Their land swarmed with frogs In the chambers of their kings.
- Bible in Basic English (BBE)
- Their land was full of frogs, even in the rooms of the king.
- Darby Translation (DBY)
- Their land swarmed with frogs, — in the chambers of their kings.
- Webster's Bible (WBS)
- Their land brought forth frogs in abundance, in the chambers of their kings.
- Young's Literal Translation (YLT)
- Teemed hath their land [with] frogs, In the inner chambers of their kings.
Read in context
- 28ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
- 29ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು.
- 30ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು.
- 31ಆತನು ಹೇಳಲು ನೊಣದ ಗುಂಪುಗಳೂ ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
- 32ಅವರ ಮಳೆಗಾಗಿ ಕಲ್ಮಳೆಯನ್ನೂ ಅಗ್ನಿಜ್ವಾಲೆಗಳನ್ನೂ ದೇಶದಲ್ಲಿ ಬರಮಾಡಿದನು.
Cross references
- Revelation 16:13–14 ಪ್ರಕಟನೆ 16:13–14ಘಟಸರ್ಪದ ಬಾಯಿಂದಲೂ ಮೃಗದ ಬಾಯಿಂ ದಲೂ ಸುಳ್ಳು ಪ್ರವಾದಿಯ ಬಾಯಿಂದಲೂ ಕಪ್ಪೆಗಳಂ ತಿದ್ದ ಮೂರು ಅಶುದ್ಧಾತ್ಮಗಳು ಹೊರಗೆ ಬರುವದನ್ನು ನಾನು ಕಂಡೆನು. ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು.
- Exodus 8:3–14 ವಿಮೋಚನಕಾಂಡ 8:3–14ನದಿಯು ಕಪ್ಪೆಗಳನ್ನು ಅಧಿಕವಾಗಿ ಬರಮಾಡು ವದು; ಅವು ಏರಿ ನಿನ್ನ ಮನೆಯಲ್ಲಿಯೂ ನೀನು ಮಲಗುವ ಕೋಣೆಯಲ್ಲಿಯೂ ಹಾಸಿಗೆಯ ಮೇಲೂ ಸೇವಕರ ಮನೆಗಳಲ್ಲಿಯೂ ಜನರ ಮೇಲೆಯೂ ಒಲೆಗ ಳಲ್ಲಿಯೂ ಹಿಟ್ಟು ನಾದುವ ಕೊಣವಿಗೆಗಳಲ್ಲಿಯೂ ಬರುವವು. ನಿನ್ನ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಎಲ್ಲಾ ಸೇವಕರ ಮೇಲೆಯೂ ಕಪ್ಪೆಗಳು ಏರಿ ಬರುವವು ಎಂದು ಹೇಳು ಅಂದನು. ಕರ್ತನು ಮೋಶೆಯ ಸಂಗಡ ಮಾತನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಹಿಡು ಕೊಂಡು ಕಾಲುವೆಗಳ ಮೇಲೆಯೂ ನದಿಗಳ ಮೇಲೆಯೂ ಕೆರೆಗಳ ಮೇಲೆಯೂ ನಿನ್ನ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು. ಆರೋನನು ಐಗು ಪ್ತದ ನೀರುಗಳ ಮೇಲೆ ಕೈಚಾಚಿದಾಗ ಕಪ್ಪೆಗಳು ಏರಿಬಂದು ಐಗುಪ್ತದೇಶವನ್ನು ಮುಚ್ಚಿಕೊಂಡವು. ಆದರೆ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿ ಕಪ್ಪೆಗಳನ್ನು ಐಗುಪ್ತದೇಶದ ಮೇಲೆ ಬರಮಾಡಿದರು. ಆಗ ಫರೋಹನು ಮೋಶೆ ಆರೋನರನ್ನು ಕರೆ ಯಿಸಿ--ನೀವು ಕರ್ತನನ್ನು ಬೇಡಿಕೊಂಡು ಈ ಕಪ್ಪೆ ಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿ ಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಕರ್ತನಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು ಅಂದನು. ಮೋಶೆಯು ಫರೋಹನಿಗೆ--ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ತೆಗೆದು ಹಾಕಲ್ಪಟ್ಟು ನದಿಯಲ್ಲಿ ಮಾತ್ರ ಉಳಿಯುವ ಹಾಗೆ ನಾನು ನಿನಗೋಸ್ಕರವೂ ನಿನ್ನ ಸೇವಕರಿಗೋಸ್ಕರವೂ ಜನರಿಗೋಸ್ಕರವೂ ಬೇಡಿ ಕೊಳ್ಳುವ ಸಮಯವನ್ನು ನನಗೆ ನೇಮಿಸು ಅಂದನು. ಅವನು ಮೋಶೆಗೆ--ನಾಳೆ ಅಂದನು. ಆಗ ಮೋಶೆಯು--ನಮ್ಮ ದೇವರಾಗಿರುವ ಕರ್ತನ ಹಾಗೆ ಯಾರು ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ನಿನ್ನ ಮಾತಿನ ಪ್ರಕಾರ ಆಗಲಿ. ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ ನದಿಯಲ್ಲಿ ಮಾತ್ರ ಅವು ಉಳಿಯುವವು ಅಂದನು. ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು. ಮೋಶೆ ಹೇಳಿದ ಪ್ರಕಾರ ಕರ್ತನು ಮಾಡಿದನು. ಮನೆಗಳಲ್ಲಿಯೂ ಹಳ್ಳಿಗಳ ಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು. ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.
- Psalm 78:45 ಕೀರ್ತನೆಗಳು 78:45ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು.