Psalms · chapter 106 · verse 19
Psalm 106:19 in Kannada
ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.
Avaru horebi nalli karuvannu maadi erakada vigrahakke adda biddaru.
Psalm 106:19 in English
- King James Version (KJV)
- They made a calf in Horeb, and worshipped the molten image.
- World English Bible (WEB)
- They made a calf in Horeb, and worshiped a molten image.
- American Standard Version (ASV)
- They made a calf in Horeb, And worshipped a molten image.
- Bible in Basic English (BBE)
- They made a young ox in Horeb, and gave worship to an image of gold.
- Darby Translation (DBY)
- They made a calf in Horeb, and did homage to a molten image;
- Webster's Bible (WBS)
- They made a calf in Horeb, and worshiped the molten image.
- Young's Literal Translation (YLT)
- They make a calf in Horeb, And bow themselves to a molten image,
Read in context
- 17ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.
- 18ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
- 19ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.
- 20ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
- 21ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ
Cross references
- Exodus 32:35 ವಿಮೋಚನಕಾಂಡ 32:35ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.
- Exodus 32:4–8 ವಿಮೋಚನಕಾಂಡ 32:4–8ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಉಳಿಯಿಂದ ರೂಪಿಸಿ ಎರಕಹೊಯ್ದ ಕರುವಾಗಿ ಮಾಡಿದನು. ಆಗ ಅವರು--ಓ ಇಸ್ರಾ ಯೇಲೇ, ನಿನ್ನನ್ನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ದೇವರುಗಳು ಇವೇ ಆಗಿರಲಿ ಅಂದರು. ಆರೋನನು ಅದನ್ನು ನೋಡಿ ಅದರ ಮುಂದೆ ಯಜ್ಞವೇದಿಯನ್ನು ಕಟ್ಟಿದನು. ಆರೋನನು--ನಾಳೆ ಕರ್ತನಿಗೆ ಹಬ್ಬ ಎಂದು ಪ್ರಕಟಿಸಿದನು. ಮರುದಿನ ದಲ್ಲಿ ಅವರು ಬೆಳಿಗ್ಗೆ ಎದ್ದು ದಹನಬಲಿಗಳನ್ನು ಅರ್ಪಿಸಿ ಸಮಾಧಾನದ ಬಲಿಗಳನ್ನು ತಂದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡು, ಎದ್ದು ಕುಣಿದಾಡಿದರು. ಆಗ ಕರ್ತನು ಮೋಶೆಗೆ--ನೀನು ಇಳಿದು ಹೋಗು; ನೀನು ಐಗುಪ್ತ ದೇಶದೊಳಗಿಂದ ಬರ ಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು ತಮಗೆ ಎರಕ ಹೊಯ್ದ ಕರುವನ್ನು ಮಾಡಿ ಕೊಂಡು ಅದನ್ನು ಆರಾಧಿಸುತ್ತಾ ಅದಕ್ಕೆ ಬಲಿ ಅರ್ಪಿಸಿ--ಓ ಇಸ್ರಾಯೇಲೇ, ನಿನ್ನನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿನ್ನ ದೇವರುಗಳು ಇವುಗಳೇ ಎಂದು ಹೇಳುತ್ತಾರೆ.
- Nehemiah 9:18 ನೆಹೆಮೀಯ 9:18ಅವರು ತಮಗೆ ಎರಕಹೊಯಿದ ಒಂದು ಕರುವನ್ನು ಮಾಡಿಕೊಂಡು -- ಐಗುಪ್ತದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರು ಇದೇ ಎಂದು ಹೇಳಿ ನಿನ್ನನ್ನು ಬಹು ಉದ್ರೇಕಗೊಳಿಸಿದಾಗಲೂ
- Deuteronomy 9:8 ಧರ್ಮೋಪದೇಶಕಾಂಡ 9:8ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು.
- 1 Corinthians 10:7 1 ಕೊರಿಂಥದವರಿಗೆ 10:7ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ.
- Acts 7:41 ಅಪೊಸ್ತಲರ ಕೃತ್ಯಗಳು 7:41ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಸ್ವಂತ ಕೈಗಳಿಂದ ಮಾಡಿದ ಕೆಲಸಗಳಲ್ಲಿ ಉಲ್ಲಾಸಪಟ್ಟರು.
- Deuteronomy 9:12–16 ಧರ್ಮೋಪದೇಶಕಾಂಡ 9:12–16ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು. ಇದಲ್ಲದೆ ಕರ್ತನು ನನಗೆ--ನಾನು ಈ ಜನವನ್ನು ನೋಡಿದ್ದೇನೆ; ಇಗೋ, ಇದು ಬಗ್ಗದ ಕುತ್ತಿಗೆಯುಳ್ಳ ಜನವೇ. ನನ್ನನ್ನು ಬಿಡು; ಆಗ ಅವರನ್ನು ನಾಶಮಾಡಿ ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು ನಿನ್ನನ್ನು ಅವರಿಗಿಂತ ಬಲವಾದ ಬಹು ಜನಾಂಗವಾಗ ಮಾಡುವೆನು ಎಂದು ಹೇಳಿದನು. ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು; ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು; ಒಡಂಬಡಿ ಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು. ನಾನು ನೋಡಿದಾಗ ಇಗೋ, ನೀವು ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಎರಕ ಹೊಯ್ದ ಕರುವನ್ನು ನಿಮಗೆ ಮಾಡಿ ಕೊಂಡು ಕರ್ತನು ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗ ಬಿಟ್ಟುಹೋಗಿದ್ದಿರಿ.
- Deuteronomy 9:21 ಧರ್ಮೋಪದೇಶಕಾಂಡ 9:21ಇದಲ್ಲದೆ ನೀವು ಮಾಡಿದ ಪಾಪವಾಗಿರುವ ಆ ಕರುವನ್ನು ತಕ್ಕೊಂಡು ಬೆಂಕಿಯಲ್ಲಿ ಸುಟ್ಟು ತುಳಿದು ಅದು ಧೂಳಿ ನಂತೆ ಪುಡಿಯಾಗುವ ವರೆಗೆ ಚೆನ್ನಾಗಿ ಅರೆದು ಅದರ ಧೂಳನ್ನು ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ನಾನು ಹಾಕಿದೆನು.