Acts · chapter 7 · verse 41
Acts 7:41 in Kannada
ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಸ್ವಂತ ಕೈಗಳಿಂದ ಮಾಡಿದ ಕೆಲಸಗಳಲ್ಲಿ ಉಲ್ಲಾಸಪಟ್ಟರು.
Aa dinagalalli avaru ondu basavanannu maadi aa vigrahakke baliyannarpisi tamma svanta kaigalinda maadida kelasagalalli ullaasapattaru.
Acts 7:41 in English
- King James Version (KJV)
- And they made a calf in those days, and offered sacrifice unto the idol, and rejoiced in the works of their own hands.
- World English Bible (WEB)
- They made a calf in those days, and brought a sacrifice to the idol, and rejoiced in the works of their hands.
- American Standard Version (ASV)
- And they made a calf in those days, and brought a sacrifice unto the idol, and rejoiced in the works of their hands.
- Bible in Basic English (BBE)
- And they made the image of a young ox in those days, and made an offering to it, and had joy in the work of their hands.
- Darby Translation (DBY)
- And they made a calf in those days, and offered sacrifice to the idol, and rejoiced in the works of their own hands.
- Webster's Bible (WBS)
- And they made a calf in those days, and offered sacrifice to the idol, and rejoiced in the works of their own hands.
- Young's Literal Translation (YLT)
- 'And they made a calf in those days, and brought a sacrifice to the idol, and were rejoicing in the works of their hands,
Read in context
- 39ಆದರೆ ನಮ ಪಿತೃಗಳು ಅವನ ಮಾತುಗಳಿಗೆ ವಿಧೇಯರಾಗದೆ ಅವನನ್ನು ತಳ್ಳಿಬಿಟ್ಟು ತಮ್ಮ ಹೃದಯಗಳಲ್ಲಿ ಹಿಂದಕ್ಕೆ ಐಗುಪ್ತದ ಕಡೆಗೆ ತಿರುಗಿಕೊಂಡು
- 40ಅವರು ಆರೋನ ನಿಗೆ--ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ; ಆದದರಿಂದ ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರು ಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು.
- 41ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಸ್ವಂತ ಕೈಗಳಿಂದ ಮಾಡಿದ ಕೆಲಸಗಳಲ್ಲಿ ಉಲ್ಲಾಸಪಟ್ಟರು.
- 42ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರಗಣ ವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ-- ಓ ಇಸ್ರಾಯೇಲ್ ಮನೆತನದವರೇ, ನೀವು ಅರಣ್ಯದಲ್ಲಿ ನಾಲ್ವತ್ತು ವರುಷ ಪ್ರಾಣಿಗಳನ್ನು ಕೊಂದು ಬಲಿಗಳನ್ನು ನನಗೆ ಅರ್ಪಿಸುತ್ತಿದ್ದಿರೆ
- 43ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು.
Cross references
- Psalm 106:19–21 ಕೀರ್ತನೆಗಳು 106:19–21ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು. ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು. ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ
- Nehemiah 9:18 ನೆಹೆಮೀಯ 9:18ಅವರು ತಮಗೆ ಎರಕಹೊಯಿದ ಒಂದು ಕರುವನ್ನು ಮಾಡಿಕೊಂಡು -- ಐಗುಪ್ತದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರು ಇದೇ ಎಂದು ಹೇಳಿ ನಿನ್ನನ್ನು ಬಹು ಉದ್ರೇಕಗೊಳಿಸಿದಾಗಲೂ
- Hosea 9:1 ಹೋಶೇಯ 9:1ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.
- Revelation 9:20 ಪ್ರಕಟನೆ 9:20ಈ ಉಪದ್ರವಗಳಿಂದ ಕೊಲ್ಲಲ್ಪಡದೆ ಉಳಿದ ಮನುಷ್ಯರು ದೆವ್ವಗಳನ್ನೂ ಬಂಗಾರದ ವಿಗ್ರಹಗಳನ್ನೂ ಬೆಳ್ಳಿಯ, ಹಿತ್ತಾಳೆಯ, ಕಲ್ಲಿನ ಮತ್ತು ಮರದ ವಿಗ್ರಹ ಗಳನ್ನೂ ಅಂದರೆ ನೋಡಲಾರದ ಕೇಳಲಾರದ ಇಲ್ಲವೆ ನಡೆಯಲಾರದವುಗಳನ್ನು ಆರಾಧಿಸದಂತೆ ಮಾನ ಸಾಂತರಪಡದೆ ಹೋದರು.ಇದಲ್ಲದೆ ತಾವು ಮಾಡುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳಿ ಗಾಗಿಯೂ ಮಾನಸಾಂತರಪಡಲಿಲ್ಲ.
- Hosea 9:10 ಹೋಶೇಯ 9:10ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.
- Habakkuk 2:18–20 ಹಬಕ್ಕೂಕ 2:18–20ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ. ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Deuteronomy 9:12–18 ಧರ್ಮೋಪದೇಶಕಾಂಡ 9:12–18ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು. ಇದಲ್ಲದೆ ಕರ್ತನು ನನಗೆ--ನಾನು ಈ ಜನವನ್ನು ನೋಡಿದ್ದೇನೆ; ಇಗೋ, ಇದು ಬಗ್ಗದ ಕುತ್ತಿಗೆಯುಳ್ಳ ಜನವೇ. ನನ್ನನ್ನು ಬಿಡು; ಆಗ ಅವರನ್ನು ನಾಶಮಾಡಿ ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು ನಿನ್ನನ್ನು ಅವರಿಗಿಂತ ಬಲವಾದ ಬಹು ಜನಾಂಗವಾಗ ಮಾಡುವೆನು ಎಂದು ಹೇಳಿದನು. ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು; ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು; ಒಡಂಬಡಿ ಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು. ನಾನು ನೋಡಿದಾಗ ಇಗೋ, ನೀವು ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಎರಕ ಹೊಯ್ದ ಕರುವನ್ನು ನಿಮಗೆ ಮಾಡಿ ಕೊಂಡು ಕರ್ತನು ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗ ಬಿಟ್ಟುಹೋಗಿದ್ದಿರಿ. ಆಗ ನಾನು ಆ ಎರಡು ಹಲಗೆಗಳನ್ನು ತಕ್ಕೊಂಡು ನನ್ನ ಎರಡು ಕೈಗಳಿಂದ ಬಿಸಾಡಿ ನಿಮ್ಮ ಕಣ್ಣು ಮುಂದೆ ಒಡೆದು ಹಾಕಿದೆನು. ಆ ಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನುಮಾಡಿ ಆತನಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿ ತಿನ್ನದೆ, ನೀರು ಕುಡಿಯದೆ, ಕರ್ತನ ಮುಂದೆ ನಾನು ಬಿದ್ದಿದ್ದೆನು.
- Isaiah 2:8–9 ಯೆಶಾಯ 2:8–9ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು. ನೀಚನು ಹಿಗ್ಗಿಕೊಳ್ಳುತ್ತಾನೆ, ಉತ್ತಮನು ತಗ್ಗಿಸಿಕೊಳ್ಳು ತ್ತಾನೆ; ಆದಕಾರಣ ಅವರನ್ನು ಮನ್ನಿಸಬೇಡ.
- Exodus 32:2–8 ವಿಮೋಚನಕಾಂಡ 32:2–8ಅದಕ್ಕೆ ಆರೋನನು ಅವರಿಗೆ--ನಿಮ್ಮ ಹೆಂಡತಿಯರ ಮತ್ತು ನಿಮ್ಮ ಕುಮಾರ ಕುಮಾರ್ತೆಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಕಿತ್ತು ನನ್ನ ಬಳಿಗೆ ತನ್ನಿರಿ ಅಂದನು. ಆಗ ಜನರೆಲ್ಲರು ತಮ್ಮ ಕಿವಿಗಳಲ್ಲಿದ್ದ ಚಿನ್ನದ ವಾಲೆಗಳನ್ನು ಕಿತ್ತು ಆರೋನನ ಬಳಿಗೆ ತಂದರು. ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಉಳಿಯಿಂದ ರೂಪಿಸಿ ಎರಕಹೊಯ್ದ ಕರುವಾಗಿ ಮಾಡಿದನು. ಆಗ ಅವರು--ಓ ಇಸ್ರಾ ಯೇಲೇ, ನಿನ್ನನ್ನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ದೇವರುಗಳು ಇವೇ ಆಗಿರಲಿ ಅಂದರು. ಆರೋನನು ಅದನ್ನು ನೋಡಿ ಅದರ ಮುಂದೆ ಯಜ್ಞವೇದಿಯನ್ನು ಕಟ್ಟಿದನು. ಆರೋನನು--ನಾಳೆ ಕರ್ತನಿಗೆ ಹಬ್ಬ ಎಂದು ಪ್ರಕಟಿಸಿದನು. ಮರುದಿನ ದಲ್ಲಿ ಅವರು ಬೆಳಿಗ್ಗೆ ಎದ್ದು ದಹನಬಲಿಗಳನ್ನು ಅರ್ಪಿಸಿ ಸಮಾಧಾನದ ಬಲಿಗಳನ್ನು ತಂದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡು, ಎದ್ದು ಕುಣಿದಾಡಿದರು. ಆಗ ಕರ್ತನು ಮೋಶೆಗೆ--ನೀನು ಇಳಿದು ಹೋಗು; ನೀನು ಐಗುಪ್ತ ದೇಶದೊಳಗಿಂದ ಬರ ಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು ತಮಗೆ ಎರಕ ಹೊಯ್ದ ಕರುವನ್ನು ಮಾಡಿ ಕೊಂಡು ಅದನ್ನು ಆರಾಧಿಸುತ್ತಾ ಅದಕ್ಕೆ ಬಲಿ ಅರ್ಪಿಸಿ--ಓ ಇಸ್ರಾಯೇಲೇ, ನಿನ್ನನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿನ್ನ ದೇವರುಗಳು ಇವುಗಳೇ ಎಂದು ಹೇಳುತ್ತಾರೆ.
- Isaiah 44:9–20 ಯೆಶಾಯ 44:9–20ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Exodus 32:17–20 ವಿಮೋಚನಕಾಂಡ 32:17–20ಜನರು ಕೂಗುತ್ತಿದ್ದ ಶಬ್ದವನ್ನು ಯೆಹೋಶುವನು ಕೇಳಿದಾಗ ಮೋಶೆಗೆ--ಪಾಳೆಯದಲ್ಲಿ ಯುದ್ಧದ ಶಬ್ದವು ಇದೆ ಎಂದು ಹೇಳಿದನು. ಅದಕ್ಕೆ ಮೋಶೆಯು--ಅದು ಜಯಧ್ವನಿಯು ಅಲ್ಲ, ಅಪ ಜಯದ ಧ್ವನಿಯೂ ಅಲ್ಲ, ಆದರೆ ಹಾಡುವವರ ಧ್ವನಿ ಯನ್ನು ನಾನು ಕೇಳುತ್ತೇನೆ ಅಂದನು. ಇದಾದ ಮೇಲೆ ಮೋಶೆಯು ಪಾಳೆಯದ ಸವಿಾಪಕ್ಕೆ ಬಂದು ಆ ಕರುವನ್ನೂ ಅವರ ನಾಟ್ಯವನ್ನೂ ನೋಡಿ ಕೋಪ ಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬಿಸಾಡಿ ಬೆಟ್ಟದ ಅಡಿಯಲ್ಲಿ ಅವುಗಳನ್ನು ಒಡೆದುಬಿಟ್ಟನು. ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್ ಮಕ್ಕಳು ಕುಡಿಯುವಂತೆ ಮಾಡಿದನು.
Original words (Greek)
- And · G2532καί kaí
- calf · G3447μοσχοποιέω moschopoiéō
- in · G1722ἐν en
- those · G1565ἐκεῖνος ekeînos
- days · G2250ἡμέρα hēméra
- and · G2532καί kaí
- offered · G321ἀνάγω anágō
- sacrifice · G2378θυσία thysía
- idol · G1497εἴδωλον eídōlon
- and · G2532καί kaí
- rejoiced · G2165εὐφραίνω euphraínō
- in · G1722ἐν en
- works · G2041ἔργον érgon
- own · G846αὐτός autós
- hands · G5495χείρ cheír