Psalms · chapter 118 · verse 17
Psalm 118:17 in Kannada
ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
Naanu saayade baduki, kartana kaaryagalannu prakatisuvenu.
Psalm 118:17 in English
- King James Version (KJV)
- I shall not die, but live, and declare the works of the LORD.
- World English Bible (WEB)
- I will not die, but live, and declare the LORD’s works.
- American Standard Version (ASV)
- I shall not die, but live, And declare the works of Jehovah.
- Bible in Basic English (BBE)
- Life and not death will be my part, and I will give out the story of the works of the Lord.
- Darby Translation (DBY)
- I shall not die, but live, and declare the works of Jah.
- Webster's Bible (WBS)
- I shall not die, but live, and declare the works of the LORD.
- Young's Literal Translation (YLT)
- I do not die, but live, And recount the works of Jah,
Read in context
- 15ರಕ್ಷಣೆಯ ಉತ್ಸಾಹದ ಧ್ವನಿಯು ನೀತಿವಂತರ ಗುಡಾರಗಳಲ್ಲಿ ಅದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
- 16ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
- 17ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
- 18ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
- 19ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
Cross references
- John 11:4 ಯೋಹಾನನು 11:4ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.
- Psalm 71:17–18 ಕೀರ್ತನೆಗಳು 71:17–18ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- Isaiah 38:16–20 ಯೆಶಾಯ 38:16–20ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ. ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು. ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು. ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು.
- Psalm 6:5 ಕೀರ್ತನೆಗಳು 6:5ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
- Psalm 73:28 ಕೀರ್ತನೆಗಳು 73:28ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ.
- Habakkuk 1:12 ಹಬಕ್ಕೂಕ 1:12ನನ್ನ ದೇವರಾದ ಕರ್ತನೇ, ನನ್ನ ಪರಿಶುದ್ಧನೇ, ನೀನು ಅನಾದಿಯಿಂದ ಇರುತ್ತೀಯಲ್ಲವೋ? ನಾವು ಸಾಯುವದಿಲ್ಲ. ಓ ಕರ್ತನೇ, ನ್ಯಾಯತೀರ್ಪಿಗೆ ಅವ ರನ್ನು ನೇಮಿಸಿದ್ದೀ; ಓ ಪರಾಕ್ರಮಿಯಾದ ದೇವರೇ, ಶಿಕ್ಷೆಗೆ ಅವರನ್ನು ಸ್ಥಾಪಿಸಿದ್ದೀ.
- Romans 14:7–9 ರೋಮಾಪುರದವರಿಗೆ 14:7–9ನಮ್ಮಲ್ಲಿ ಒಬ್ಬನಾದರೂ ತನಗಾಗಿ ಬದುಕುವದೂ ಇಲ್ಲ, ತನಗಾಗಿ ಸಾಯುವದೂ ಇಲ್ಲ. ನಾವು ಬದುಕಿದರೆ ಕರ್ತನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತ ನವರೇ. ಸತ್ತವರಿಗೂ ಜೀವಿಸುವವರಿಗೂ ಒಡೆಯ ನಾಗಿರಬೇಕೆಂತಲೇ ಕ್ರಿಸ್ತನು ಸತ್ತು ಎದ್ದು ಜೀವಿತ ನಾದನು.
- Psalm 145:4 ಕೀರ್ತನೆಗಳು 145:4ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
- Psalm 107:22 ಕೀರ್ತನೆಗಳು 107:22ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
- Psalm 40:5 ಕೀರ್ತನೆಗಳು 40:5ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
- Psalm 40:10 ಕೀರ್ತನೆಗಳು 40:10ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- Jeremiah 51:10 ಯೆರೆಮೀಯ 51:10ಕರ್ತನು ನಮ್ಮ ನೀತಿಯನ್ನು ಹೊರಗೆ ತಂದಿದ್ದಾನೆ; ಬನ್ನಿ, ನಮ್ಮ ದೇವರಾದ ಕರ್ತನ ಕ್ರಿಯೆಯನ್ನು, ಚೀಯೋನಿನಲ್ಲಿ ಸಾರಿ ಹೇಳೋಣ.