Psalms · chapter 71 · verse 17
Psalm 71:17 in Kannada
ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
O devare, nanna yauvanadinda nanage neenu kalisiddee; ee varegoo ninna adbhuta kaaryagalannu tilisuvenu.
Psalm 71:17 in English
- King James Version (KJV)
- O God, thou hast taught me from my youth: and hitherto have I declared thy wondrous works.
- World English Bible (WEB)
- God, you have taught me from my youth. Until now, I have declared your wondrous works.
- American Standard Version (ASV)
- O God, thou hast taught me from my youth; And hitherto have I declared thy wondrous works.
- Bible in Basic English (BBE)
- O God, you have been my teacher from the time when I was young; and I have been talking of your works of wonder even till now.
- Darby Translation (DBY)
- O God, thou hast taught me from my youth, and hitherto have I proclaimed thy marvellous works:
- Webster's Bible (WBS)
- O God, thou hast taught me from my youth: and hitherto have I declared thy wondrous works.
- Young's Literal Translation (YLT)
- God, Thou hast taught me from my youth, And hitherto I declare Thy wonders.
Read in context
- 15ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
- 16ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
- 17ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
- 18ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- 19ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
Cross references
- Psalm 119:9 ಕೀರ್ತನೆಗಳು 119:9ಯೌವನಸ್ಥನು ಯಾವದರಿಂದ ತನ್ನ ನಡತೆಯನ್ನು ಶುಚಿಮಾಡಿಕೊಳ್ಳುವನು? ನಿನ್ನ ವಾಕ್ಯವನ್ನು ಕೈಕೊಳ್ಳು ವದರಿಂದಲೇ.
- Psalm 119:102 ಕೀರ್ತನೆಗಳು 119:102ನಿನ್ನ ನ್ಯಾಯವಿಧಿಗಳಿಂದ ನಾನು ತೊಲಗಲಿಲ್ಲ; ನೀನು ನನ್ನನ್ನು ಬೋಧಿಸಿದ್ದೀ.
- Psalm 71:5 ಕೀರ್ತನೆಗಳು 71:5ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.
- Deuteronomy 4:5 ಧರ್ಮೋಪದೇಶಕಾಂಡ 4:5ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.
- Psalm 26:7 ಕೀರ್ತನೆಗಳು 26:7ನನ್ನ ಕೈಗಳನ್ನು ನಿರ್ಮಲ ತ್ವದಲ್ಲಿ ತೊಳೆದು, ನಿನ್ನ ಬಲಿಪೀಠವನ್ನು ಸುತ್ತುವೆನು.
- 1 Samuel 17:36–37 1 ಸಮುವೇಲನು 17:36–37ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು. ಇದಲ್ಲದೆ ದಾವೀದನು--ನನ್ನನ್ನು ಸಿಂಹದ ಕೈಗೂ ಕರಡಿಯ ಕೈಗೂ ತಪ್ಪಿಸಿ ಬಿಟ್ಟ ಕರ್ತನು ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವನು ಅಂದನು. ಆಗ ಸೌಲನು ದಾವೀದ ನಿಗೆ--ನೀನು ಹೋಗು; ಕರ್ತನು ನಿನ್ನ ಸಂಗಡ ಇರಲಿ ಅಂದನು.
- Psalm 66:16 ಕೀರ್ತನೆಗಳು 66:16ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
- 2 Samuel 4:9 2 ಸಮುವೇಲನು 4:9ಆಗ ದಾವೀದನು ಬೇರೋತಿನ ಮಗನಾ ಗಿರುವ ರಿಮ್ಮೋನನ ಮಕ್ಕಳಾದ ರೇಕಾಬಿಗೂ ಅವನ ಸಹೋದರನಾದ ಬಾಣನಿಗೂ ಪ್ರತ್ಯುತ್ತರವಾಗಿ--ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದಾಣೆ, ತನ್ನ ಕಣ್ಣಿಗೆ ಸುವರ್ತಮಾನವನ್ನು ತಂದವನು ಎಂದು ಕಾಣಿಸಿಕೊಂಡವನಾಗಿ ನಾನು ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡು ವೆನೆಂದು ನೆನಸಿ
- 2 Samuel 22:1–51 2 ಸಮುವೇಲನು 22:1–51ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ-- ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ. ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ. ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ. ಮರಣದಲೆಗಳು ನನ್ನನ್ನು ಆವರಿಸಿಕೊಂಡವು; ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು; ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ಉರ್ಲುಗಳು ನನ್ನನ್ನು ಎದುರುಗೊಂಡವು; ನನ್ನ ಇಕ್ಕಟ್ಟಿನಲ್ಲಿ ಕರ್ತ ನನ್ನು ಕರೆದೆನು; ನನ್ನ ದೇವರನ್ನು ಕರೆದೆನು. ಆತನು ತನ್ನ ಮಂದಿರದೊಳಗಿಂದ ನನ್ನ ಶಬ್ದವನ್ನು ಕೇಳಿದನು; ನನ್ನ ಮೊರೆಯು ಆತನ ಕಿವಿಗೆ ಮುಟ್ಟಿತು. ಆಗ ಭೂಮಿಯು ಕದಲಿ ಕಂಪಿಸಿತು; ಆಕಾಶದ ಅಸ್ತಿವಾರಗಳು ನಡುಗಿ ಕದಲಿದವು; ಯಾಕಂದರೆ ಆತನು ಕೋಪ ಗೊಂಡನು. ಆತನ ಮೂಗಿನಿಂದ ಹೊಗೆ ಏರಿತು, ಆತನ ಬಾಯಿಯೊಳಗಿಂದ ಬೆಂಕಿ ಹೊರಟು ದಹಿಸಿತು; ಕೆಂಡಗಳು ಅದರಿಂದ ಉರಿದವು. ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು; ಆತನು ಕೆರೂಬಿಯ ಮೇಲೆ ಕೂತು ಹಾರಿದನು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿ ಕೊಂಡನು. ಕತ್ತಲನ್ನೂ ಕತ್ತಲಾದ ನೀರುಗಳನ್ನೂ ಆಕಾಶದ ಕಾರ್ಮೋಡಗಳನ್ನೂ ತನ್ನ ಸುತ್ತಲೂ ಡೇರೆ ಗಳಾಗಿ ಮಾಡಿಕೊಂಡನು. ಆತನ ಮುಂದಿನ ಪ್ರಕಾಶದಿಂದ ಬೆಂಕಿಯ ಕೆಂಡಗಳು ಉರಿಯಲ್ಪಟ್ಟವು. ಕರ್ತನು ಆಕಾಶದಿಂದ ಗುಡುಗಿದನು. ಮಹೋ ನ್ನತನು ತನ್ನ ಶಬ್ದವನ್ನು ಕೊಟ್ಟನು; ತನ್ನ ಬಾಣ ಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚನ್ನು ಕಳುಹಿಸಿ ಅವರನ್ನು ಗಲಿಬಿಲಿ ಮಾಡಿ ದನು. ಆಗ ಕರ್ತನ ಗದರಿಕೆಯಿಂದಲೂ ಆತನ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ನೆಲೆ ಗಳು ಕಾಣಲ್ಪಟ್ಟವು; ಭೂಲೋಕದ ಅಸ್ತಿವಾರಗಳು ಬೈಲಾದವು. ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ವಿಸ್ತಾರವಾದ ನೀರುಗಳೊಳಗಿಂದ ನನ್ನನ್ನು ಎಳೆದನು. ನನ್ನ ಬಲವುಳ್ಳ ಶತ್ರುವಿಗೂ ನನ್ನ ಹಗೆಯವರಿಗೂ ನನ್ನನ್ನು ತಪ್ಪಿಸಿದನು; ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು. ನನ್ನನ್ನು ವಿಶಾಲ ಸ್ಥಳಕ್ಕೆ ಹೊರಗೆ ತಂದನು; ಆತನು ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ತಪ್ಪಿಸಿಬಿಟ್ಟನು. ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು. ಕರ್ತನ ಮಾರ್ಗಗಳನ್ನು ಕೈಕೊಂಡೆನು; ನಾನು ನನ್ನ ದೇವರನ್ನು ತೊರೆದುಬಿಡುವ ದುಷ್ಟತ್ವಮಾಡಲಿಲ್ಲ. ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ. ಆತನ ಮುಂದೆ ಸಂಪೂರ್ಣನಾಗಿದ್ದು ಅಕ್ರಮದಿಂದ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು. ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು. ಕೃಪೆಯುಳ್ಳವನಿಗೆ ಕೃಪೆಯುಳ್ಳವ ನಾಗಿರುವಿ; ಸಂಪೂರ್ಣನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ. ಶುದ್ಧನಿಗೆ ಶುದ್ಧನಾಗಿರುವಿ, ಮೂರ್ಖನ ಸಂಗಡ ಹೋರಾಡುವಿ. ನೀನು ದೀನರನ್ನು ರಕ್ಷಿಸುವಿ; ಗರ್ವಿಗಳನ್ನು ತಗ್ಗಿಸುವ ಹಾಗೆ ನಿನ್ನ ಕಣ್ಣುಗಳು ಅವರ ಮೇಲೆ ಅವೆ. ಓ ಕರ್ತನೇ, ನನ್ನ ದೀಪವು ನೀನೇ; ಕರ್ತನು ನನ್ನ ಕತ್ತಲನ್ನು ಪ್ರಕಾಶಿಸುವಂತೆ ಮಾಡುವನು. ನಿನ್ನಿಂದ ಸೈನ್ಯದ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದನು. ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ. ಕರ್ತನಲ್ಲದೆ ದೇವರು ಯಾರು? ನಮ್ಮ ದೇವರಲ್ಲದೆ ಬಂಡೆಯು ಯಾರು? ದೇವರು ನನ್ನ ಬಲವೂ ನನ್ನ ಪರಾಕ್ರಮವೂ ಆಗಿದ್ದಾನೆ; ನನ್ನ ಮಾರ್ಗವನ್ನು ಸಂಪೂರ್ಣಮಾಡುತ್ತಾನೆ. ನನ್ನ ಕಾಲುಗಳನ್ನು ಜಿಂಕೆಗಳ ಹಾಗೆ ಮಾಡಿ ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾನೆ. ನನ್ನ ಕೈಗಳಿಗೆ ಯುದ್ಧ ಕಲಿಸುತ್ತಾನೆ. ನನ್ನ ತೋಳುಗಳು ಕಬ್ಬಿಣದ ಬಿಲ್ಲನ್ನು ಬೊಗ್ಗಿಸುತ್ತವೆ. ನೀನು ನಿನ್ನ ರಕ್ಷಣೆಯ ಗುರಾಣಿ ಯನ್ನು ನನಗೆ ಕೊಟ್ಟೆ; ನಿನ್ನ ಸೌಮ್ಯತೆಯು ನನ್ನನ್ನು ಹೆಚ್ಚಿಸಿತು. ನನ್ನ ಹೆಜ್ಜೆಗಳನ್ನು ನನ್ನ ಕೆಳಗೆ ವಿಶಾಲ ಮಾಡಿದ್ದರಿಂದ ನನ್ನ ಕಾಲುಗಳು ಜಾರಲಿಲ್ಲ. ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ. ಅವರನ್ನು ಸಂಹರಿಸಿಬಿಟ್ಟೆನು. ಗಾಯಮಾಡಿ ದೆನು. ಆದದರಿಂದ ಅವರು ಏಳದೆ ಹೋಗಿ, ನನ್ನ ಪಾದಗಳ ಕೆಳಗೆ ಬಿದ್ದರು. ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ. ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ. ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ. ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು. ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು. ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು. ದೇಶಾಂತದವರು ಬಾಡಿಹೋಗುವರು; ತಮ್ಮನ್ನು ಮುಚ್ಚಿಕೊಂಡ ಸ್ಥಳ ಗಳಿಂದ ನಡುಗುತ್ತಾ ಬರುವರು. ಕರ್ತನು ಜೀವಿತ ನಾಗಿದ್ದಾನೆ; ನನ್ನ ಬಂಡೆಗೆ ಸ್ತುತಿಯಾಗಲಿ; ನನ್ನ ರಕ್ಷಣೆಯ ಬಂಡೆಯಾದ ದೇವರು ಉನ್ನತನಾಗಲಿ. ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ಜನರನ್ನು ನನಗೆ ಅಧೀನಪಡಿಸುತ್ತಾನೆ. ಆತನು ನನ್ನ ಶತ್ರುಗಳಿಂದ ನನ್ನನ್ನು ಹೊರಗೆ ತರು ತ್ತಾನೆ. ನೀನು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀ; ಬಲಾತ್ಕಾರದ ಮನುಷ್ಯನಿಂದ ತಪ್ಪಿ ಸುತ್ತೀ. ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ. ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
- 1 Chronicles 16:4–36 1 ಪೂರ್ವಕಾಲವೃತ್ತಾಂತ 16:4–36ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು. ಅವರು ಯಾರಂದರೆ, ಮುಖ್ಯಸ್ಥನಾದ ಆಸಾಫನೂ ಅವನ ತರುವಾಯ ಜೆಕರ್ಯನೂ ಯೆಗೀಯೇಲನೂ ಶೆವಿಾರಾಮೋತನೂ ಯೆಹೀಯೇಲನೂ ಮತ್ತಿತ್ಯನೂ ಎಲೀಯಾಬನೂ ಬೆನಾಯನೂ ಒಬೇದೆದೋಮನೂ ಯೇಗಿಯೇಲನೂ. ಇವರು ವೀಣೆಗಳನ್ನೂ ಕಿನ್ನರಿ ಗಳನ್ನೂ ಬಾರಿಸುತ್ತಿದ್ದರು; ಆದರೆ ಆಸಾಫನು ತಾಳ ಗಳನ್ನು ಬಾರಿಸುತ್ತಿದ್ದನು. ಇದಲ್ಲದೆ ಯಾಜಕರಾದ ಬೆನಾಯನೂ ಯೆಹಜೀಯೇಲನೂ ದೇವರ ಒಡಂಬ ಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು. ಆಗ ಅದೇ ದಿವಸದಲ್ಲಿ ಕರ್ತನನ್ನು ಕೊಂಡಾಡುವದಕ್ಕೆ ದಾವೀದನು ಮೊದಲು ಆಸಾಫನಿಗೂ ಅವನ ಸಹೋದರರಿಗೂ ಈ ಸಂಗೀತವನ್ನು ಕೊಟ್ಟನು;-- ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ. ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ. ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ. ಕರ್ತನನ್ನು ಹುಡುಕುವವರ ಹೃದ ಯವು ಸಂತೋಷಿಸಲಿ. ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ. ಆತನು ಮಾಡಿದ ಅದ್ಭುತ ಗಳನ್ನೂ ಮಹತ್ಕಾರ್ಯಗಳನ್ನು ಆತನ ನ್ಯಾಯನಿರ್ಣ ಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. ಆತನ ಸೇವ ಕನಾದ ಇಸ್ರಾಯೇಲಿನ ಸಂತಾನವೇ, ಆತನು ಆದು ಕೊಂಡ ಯಾಕೋಬನ ಮಕ್ಕಳೇ, ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ. ಆತನ ಒಡಂಬಡಿಕೆ ಯನ್ನು ಸಾವಿರ ತಲಾಂತರಗಳಿಗೆ ಆತನು ಆಜ್ಞಾಪಿ ಸಿದ ಮಾತನ್ನು ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸಾಕನಿಗೆ ಇಟ್ಟ ಆಣೆಯನ್ನು ಇದನ್ನು ನಿತ್ಯವೂ ಜ್ಞಾಪಕಮಾಡಿಕೊಳ್ಳಿರಿ. ಅದನ್ನು ಯಾಕೋಬನಿಗೆ ನೇಮಕವಾಗಿಯೂ ಇಸ್ರಾಯೇಲಿಗೆ ನಿತ್ಯ ಒಡಂಬಡಿಕೆಯಾಗಿಯೂ ಸ್ಥಾಪಿಸಿ ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು. ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ. ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಮತ್ತೊಂದಕ್ಕೂ ಹೋಗುತ್ತಿದ್ದರು. ಆತನು ಯಾರಿಂದಲೂ ಅವರಿಗೆ ಅನ್ಯಾಯ ಮಾಡ ಗೊಡಿಸಲಿಲ್ಲ; ಹೌದು, ಅವರಿಗೋಸ್ಕರ ಅರಸುಗಳನ್ನು ಗದರಿಸಿದನು. ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ; ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ. ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ. ಜನಾಂಗಗಳಲ್ಲಿ ಆತನ ಘನವನ್ನೂ ಎಲ್ಲಾ ಜನಗಳಲ್ಲಿ ಆತನ ಅದ್ಭುತಗಳನ್ನೂ ಪ್ರಕಟಿಸಿರಿ. ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ; ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು. ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ. ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ, ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ. ಸಮಸ್ತ ಭೂಮಿಯೇ, ಆತನ ಮುಂದೆ ನಡುಗು. ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆಕಾಶ ಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಕರ್ತನು ಆಳುತ್ತಾನೆಂದು ಜನಾಂಗಗಳಲ್ಲಿ ಹೇಳಲಿ. ಸಮುದ್ರವೂ ಅದರ ಪರಿಪೂರ್ಣತ್ವವೂ ಘೋಷಿಸಲಿ; ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹ ಪಡಲಿ. ಆಗ ಕರ್ತನ ಮುಂದೆಯೇ ಅಡವಿಯ ಮರಗಳೆಲ್ಲಾ ಉತ್ಸಾಹ ಧ್ವನಿಮಾಡಲಿ; ಆತನು ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ. ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು;ಆತನ ಕೃಪೆಯು ಯುಗಯುಗಕ್ಕೂ ಅವೆ. ನಮ್ಮ ರಕ್ಷಣೆಯ ದೇವರೇ, ನಾವು ನಿನ್ನ ಪರಿಶುದ್ಧ ಹೆಸ ರನ್ನು ಕೊಂಡಾಡಿ ನಿನ್ನ ಸ್ತೋತ್ರದಲ್ಲಿ ಹೆಚ್ಚಳ ಪಡುವ ಹಾಗೆ ನಮ್ಮನ್ನು ರಕ್ಷಿಸು; ಜನಾಂಗಗಳೊಳಗಿಂದ ನಮ್ಮನ್ನು ತೆಗೆದು ಕೂಡಿಸು. ಇಸ್ರಾಯೇಲಿನ ಕರ್ತ ನಾದ ದೇವರು ಯುಗಯುಗಾಂತರಗಳಲ್ಲಿ ಸ್ತುತಿ ಸಲ್ಪಡಲಿ ಎಂದು ಹೇಳಿರಿ. ಸಮಸ್ತ ಜನರು ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು.