Psalms · chapter 118 · verse 18
Psalm 118:18 in Kannada
ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
Kartanu nannannu kathinavaagi shikshisidanu; maranakke nannannu oppisalilla.
Psalm 118:18 in English
- King James Version (KJV)
- The LORD hath chastened me sore: but he hath not given me over unto death.
- World English Bible (WEB)
- The LORD has punished me severely, but he has not given me over to death.
- American Standard Version (ASV)
- Jehovah hath chastened me sore; But he hath not given me over unto death.
- Bible in Basic English (BBE)
- The hand of Jah has been hard on me; but he has not given me up to death.
- Darby Translation (DBY)
- Jah hath chastened me sore; but he hath not given me over unto death.
- Webster's Bible (WBS)
- The LORD hath chastened me severely: but he hath not given me over to death.
- Young's Literal Translation (YLT)
- Jah hath sorely chastened me, And to death hath not given me up.
Read in context
- 16ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
- 17ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
- 18ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
- 19ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
- 20ಇದೇ ಕರ್ತನ ಬಾಗಲು, ನೀತಿವಂತರು ಅದರಲ್ಲಿ ಪ್ರವೇಶಿಸುವರು.
Cross references
- 1 Corinthians 11:32 1 ಕೊರಿಂಥದವರಿಗೆ 11:32ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
- 2 Corinthians 6:9 2 ಕೊರಿಂಥದವರಿಗೆ 6:9ಅಪರಿಚಿತರೆನಿಸಿಕೊಂಡರೂ ಪರಿಚಿತರೂ ಸಾಯುವವರಾಗಿ ತೋರಿದರೂ ಇಗೋ, ನಾವು ಬದುಕುವವರೂ ಆಗಿದ್ದೇವೆ; ಶಿಕ್ಷೆ ಹೊಂದುವ ವರಾಗಿದ್ದರೂ ಕೊಲ್ಲಲ್ಪಡದವರೂ
- Job 5:17–18 ಯೋಬನು 5:17–18ಇಗೋ, ದೇವರು ಗದರಿಸುವ ಮನುಷ್ಯನು ಭಾಗ್ಯ ವಂತನು; ಸರ್ವಶಕ್ತನ ಶಿಕ್ಷೆಯನ್ನು ಅಲಕ್ಷ್ಯಮಾಡ ಬೇಡ. ಆತನೇ ನೋಯಿಸುತ್ತಾನೆ, ಕಟ್ಟುವವನು ಆತನೇ; ಆತನು ಗಾಯ ಮಾಡುತ್ತಾನೆ; ಆತನ ಕೈಗಳು ಸ್ವಸ್ಥಮಾಡುತ್ತವೆ.
- Proverbs 3:11–12 ಜ್ಞಾನೋಕ್ತಿಗಳು 3:11–12ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ; ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು.
- Psalm 94:12–13 ಕೀರ್ತನೆಗಳು 94:12–13ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು. ದುಷ್ಟನಿಗಾಗಿ ಕುಣಿಯು ಅಗಿಯಲ್ಪಡುವ ವರೆಗೆ ಕಷ್ಟದ ದಿವಸಗಳಲ್ಲಿ ಅಂಥವನಿಗೆ ವಿಶ್ರಾಂತಿ ಯನ್ನು ಕೊಡುವನು.
- 2 Corinthians 1:9–11 2 ಕೊರಿಂಥದವರಿಗೆ 1:9–11ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು. ಆತನು ನಮ್ಮನ್ನು ಎಂಥಾ ಭಯಂಕರವಾದ ಮರಣದಿಂದ ತಪ್ಪಿಸಿದ್ದಾನೆ, ಮತ್ತು ತಪ್ಪಿಸುತ್ತಾನೆ, ಇನ್ನು ಮುಂದೆಯೂ ಆತನು ನಮ್ಮನ್ನು ತಪ್ಪಿಸುವನೆಂದು ನಾವು ಆತನಲ್ಲಿ ಭರವಸೆಯುಳ್ಳವರಾಗಿದ್ದೇವೆ. ಅನೇಕರ ಮೂಲಕ ನಮಗೆ ಅನುಗ್ರಹಿಸಲ್ಪಟ್ಟಂಥ ದಾನದ ನಿಮಿತ್ತವಾಗಿ ಬಹಳ ಜನರಿಂದ ನಮ್ಮ ಪರವಾಗಿ ಉಪಕಾರ ಸ್ತುತಿಯಾಗುವಂತೆ ನೀವು ಸಹ ಒಟ್ಟಾಗಿ ನಮಗೋಸ್ಕರ ಪ್ರಾರ್ಥನೆಯ ಸಹಾಯಮಾಡುತ್ತಿದ್ದೀರಿ.
- Psalm 66:10–12 ಕೀರ್ತನೆಗಳು 66:10–12ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ. ನೀನು ಬಲೆಯೊಳಗೆ ನಮ್ಮನ್ನು ಬರಮಾಡಿದ್ದಲ್ಲದೆ ನಮ್ಮ ಸೊಂಟಗಳ ಮೇಲೆ ವ್ಯಥೆಯನ್ನು ಹೊರಿಸಿದ್ದೀ; ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;
- Jonah 2:6 ಯೋನ 2:6ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
- Job 33:16–30 ಯೋಬನು 33:16–30ಆತನು ಮನುಷ್ಯರ ಕಿವಿಗಳನ್ನು ತೆರೆದು ಶಿಕ್ಷಣದ ಮಾತು ಗಳನ್ನು ಅವರಿಗೆ ಮುದ್ರೆಹಾಕುತ್ತಾನೆ. ಮನುಷ್ಯ ನನ್ನು ಅವನ ಉದ್ದೇಶದಿಂದ ತೊಲಗಿಸುವದಕ್ಕೂ ಮನುಷ್ಯನ ಗರ್ವವನ್ನು ಅಡಗಿಸುವದಕ್ಕೂ ಹಾಗೆ ಮಾಡುತ್ತಾನೆ. ಅವನ ಪ್ರಾಣವನ್ನು ಕುಣಿಯಿಂದ ಲೂ ಅವನ ಜೀವವನ್ನು ಕತ್ತಿಯಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ನೋವಿನಿಂದ ಶಿಕ್ಷಿಸ ಲ್ಪಡುತ್ತಾನೆ; ಅವನ ಎಲುಬುಗಳಿಗೆಲ್ಲಾ ಕಠಿಣವಾದ ನೋವು ಉಂಟು. ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ. ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ. ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ. ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ, ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು. ಆಗ ಅವನ ಶರೀರವು ಮಗುವಿನ ಶರೀರಕ್ಕಿಂತ ಮೃದುವಾಗಿರು ವದು; ಅವನು ತನ್ನ ಯೌವನ ದಿವಸಗಳಿಗೆ ತಿರುಗಿ ಕೊಳ್ಳುವನು. ಅವನು ದೇವರಿಗೆ ಬಿನ್ನಹ ಮಾಡು ವನು; ಆತನು ಅವನಿಗೆ ಕೃಪಾಳುವಾಗಿರುವನು. ಅವನು ಆತನ ಮುಖವನ್ನು ಸಂತೋಷದಿಂದ ನೋಡುವನು; ಆತನು ಮನುಷ್ಯನಿಗೆ ತನ್ನ ನೀತಿಯನ್ನು ಅನುಗ್ರಹಿ ಸುವನು. ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ; ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು. ಇಗೋ, ಇವೆಲ್ಲವುಗಳನ್ನು ಅನೇಕ ಸಾರಿ ಮನು ಷ್ಯನಿಗೆ ಮಾಡುತ್ತಾನೆ. ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.
- 2 Samuel 12:10 2 ಸಮುವೇಲನು 12:10ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ.
- 2 Samuel 13:1–39 2 ಸಮುವೇಲನು 13:1–39ತರುವಾಯ ಏನಾಯಿತಂದರೆ, ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸೌಂದರ್ಯವತಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗನಾದ ಅಮ್ನೋನನು ಪ್ರೀತಿಮಾಡಿದನು. ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ತಾಪಪಟ್ಟು ಅಸ್ವಸ್ಥನಾದನು; ಅವಳು ಕನ್ನಿಕೆಯಾಗಿದ್ದಳು; ಆದದರಿಂದ ಅವಳನ್ನು ಏನಾದರೂ ಮಾಡುವದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು. ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮ್ಮನ ಮಗನಾದ ಯೋನಾದಾಬನೆಂಬ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಮಹಾ ಕುಯುಕ್ತಿಯುಳ್ಳವನಾಗಿ ದ್ದನು. ಇವನು ಅವನಿಗೆ--ಅರಸನ ಮಗನಾದ ನೀನು ದಿನದಿನಕ್ಕೆ ಯಾಕೆ ಕ್ಷೀಣನಾಗಿ ಹೋಗುತ್ತೀ? ನನಗೆ ತಿಳಿಸುವದಿಲ್ಲವೋ ಅಂದನು. ಅದಕ್ಕೆ ಅಮ್ನೋನನು ಅವನಿಗೆ--ನಾನು ನನ್ನ ಸಹೋದರನಾಗಿರುವ ಅಬ್ಷಾ ಲೋಮನ ಸಹೋದರಿಯಾದ ತಾಮಾರಳನ್ನು ಪ್ರೀತಿ ಮಾಡುತ್ತೇನೆ ಅಂದನು. ಆಗ ಯೋನಾದಾಬನು ಅವನಿಗೆ--ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ--ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ ನನಗೆ ಆಹಾರ ಕೊಡಲಿ ಎಂದು ಹೇಳು ಅಂದನು. ಅವನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿದನು. ಅರಸನು ತನ್ನನ್ನು ನೋಡುವದಕ್ಕೆ ಬಂದಾಗ ಅಮ್ನೋನನು ಅರಸನಿಗೆ--ನೀನು ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣುಮುಂದೆ ಎರಡು ಭಕ್ಷ್ಯಗಳನ್ನು ಮಾಡುವದಕ್ಕೆ ಬರಲಿ ಅಂದನು. ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ--ನೀನು ನಿನ್ನ ಸಹೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೆ ಅಡಿಗೆಯನ್ನು ಮಾಡು ಅಂದನು. ಹಾಗೆಯೇ ತನ್ನ ಸಹೋದರನಾದ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದುಕೊಂಡು ಅವನ ಕಣ್ಣು ಮುಂದೆ ಹಿಸಿಕಿ ನಾದಿ ಭಕ್ಷ್ಯಗಳನ್ನು ಮಾಡಿ ಪಾತ್ರೆ ತಕ್ಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು--ನಾನು ಉಣ್ಣುವದಿಲ್ಲ ಎಂದು ಹೇಳಿ ನನ್ನ ಬಳಿಯಿಂದ ಎಲ್ಲಾ ಜನರನ್ನು ಕಳುಹಿಸಿಬಿಡಿರಿ ಅಂದನು. ಹಾಗೆಯೇ ಎಲ್ಲರೂ ಅವನನ್ನು ಬಿಟ್ಟು ಹೊರಗೆ ಹೋದರು. ಆಗ ಅಮ್ನೋನನು--ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತೆಗೆದುಕೊಂಡು ಬಾ ಅಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತನ್ನ ಸಹೋದರನಾದ ಅಮ್ನೋನನ ಬಳಿಗೆ ತಕ್ಕೊಂಡು ಬಂದಳು. ಆದರೆ ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ ಅವನು ಅವಳನ್ನು ಹಿಡಿದು ಅವಳಿಗೆ--ನನ್ನ ಸಹೋ ದರಿಯೇ, ನನ್ನ ಸಂಗಡ ಮಲಗು; ಬಾ ಅಂದನು. ಅದಕ್ಕವಳು--ನನ್ನ ಸಹೋದರನೇ, ಬೇಡ; ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ಇಸ್ರಾಯೇಲಿನಲ್ಲಿ ಇಂಥಾ ಕಾರ್ಯಮಾಡಕೂಡದು; ಇಂಥಾ ಬುದ್ಧಿಹೀನ ವಾದ ಕೆಲಸ ಮಾಡಬೇಡ. ನಾನಾದರೋ ನನ್ನ ನಿಂದೆಯನ್ನು ಎಲ್ಲಿಗೆ ಹೋಗಮಾಡಲಿ; ಇದಲ್ಲದೆ ನೀನು ಇಸ್ರಾಯೇಲಿನಲ್ಲಿ ಬುದ್ಧಿಹೀನರೊಳಗೆ ಒಬ್ಬನ ಹಾಗೆ ಇರುವಿ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು; ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ ಅಂದಳು. ಅವನು ಅವಳ ಮಾತನ್ನು ಕೇಳಲೊಲ್ಲದೆ ತಾನು ಅವಳಿಗಿಂತ ಬಲವುಳ್ಳವನಾಗಿದ್ದದರಿಂದ ಅವಳನ್ನು ಕುಂದಿಸಿ ಅವಳ ಸಂಗಡ ಮಲಗಿದನು. ಆಗ ಅಮ್ನೊನನು ಅವಳನ್ನು ಅತ್ಯಂತ ಹಗೆಮಾಡಿದನು; ಅವನು ಅವಳನ್ನು ಹಗೆಮಾಡಿದ ಹಗೆಯು ಮೊದಲು ಮಾಡಿದ ಪ್ರೀತಿಗಿಂತ ಅಧಿಕವಾಗಿತ್ತು; ಆದದರಿಂದ ಅಮ್ನೋನನು ಅವಳಿಗೆ--ಎದ್ದು ಹೋಗು ಅಂದನು. ಆಗ ಅವಳು ಅವನಿಗೆ--ಇದಕ್ಕೆ ಕಾರಣವಿಲ್ಲ; ನನಗೆ ಮಾಡಿದ ಆ ಕೆಟ್ಟತನಕ್ಕಿಂತ ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಮತ್ತೂ ಅಧಿಕವಾಗಿದೆ ಅಂದಳು. ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ ತನ್ನನ್ನು ಸೇವಿಸುವ ತನ್ನ ದಾಸರನ್ನು ಕರೆದು--ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ ಬಾಗಲು ಮುಚ್ಚಿ ಬೀಗಹಾಕು ಅಂದನು. ಅವಳು ವಿವಿಧವಾದ ವಸ್ತ್ರವನ್ನು ಉಟ್ಟಿದ್ದಳು; ಯಾಕಂದರೆ ಅರಸನ ಕುಮಾರ್ತೆಯರಾದ ಕನ್ಯಾಸ್ತ್ರೀಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಅವನ ಸೇವಕನು ಅವಳನ್ನು ಹೊರಗೆ ಕಳುಹಿಸಿ ಬಾಗಲು ಮುಚ್ಚಿ ಬೀಗಹಾಕಿದನು. ಆಗ ತನ್ನ ತಲೆಯಮೇಲೆ ಬೂದಿಯನ್ನು ಹಾಕಿಕೊಂಡು ತಾನು ಧರಿಸಿಕೊಂಡಿದ್ದ ವಿವಿಧವಾದ ವಸ್ತ್ರವನ್ನು ಹರಿದು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಅಳುತ್ತಾ ಹೋದಳು. ಆಗ ಅವಳ ಸಹೋದರನಾದ ಅಬ್ಷಾಲೋಮನು ಅವಳಿಗೆ --ನಿನ್ನ ಸಹೋದರನಾದ ಅಮ್ನೋನನು ನಿನ್ನ ಸಂಗಡ ಇದ್ದನೋ? ನನ್ನ ಸಹೋದರಿಯೇ, ಈಗ ಮೌನ ವಾಗಿರು; ಅವನು ನಿನ್ನ ಸಹೋದರನು; ಈ ಕಾರ್ಯ ವನ್ನು ನಿನ್ನ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂದನು. ಹಾಗೆಯೇ ತಾಮಾರಳು ತನ್ನ ಸಹೋದರನಾದ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿದ್ದಳು. ಅರಸನಾದ ದಾವೀದನು ಇವುಗಳನೆಲ್ಲಾ ಕೇಳಿದಾಗ ಬಹುಕೋಪಗೊಂಡನು. ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು. ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು. ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು. ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು. ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು. ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು. ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು. ಆದರೆ ಅವರು ದಾರಿಯಲ್ಲಿರುವಾಗ--ಅಬ್ಷಾ ಲೋಮನು ಅರಸನ ಮಕ್ಕಳನ್ನೆಲ್ಲಾ ಕೊಂದು ಹಾಕಿ ದ್ದಾನೆ, ಒಬ್ಬನಾದರೂ ಉಳಿಯಲಿಲ್ಲ ಎಂದು ದಾವೀ ದನಿಗೆ ವರ್ತಮಾನ ಬಂತು. ಆಗ ಅರಸನು ಎದ್ದು ತನ್ನ ವಸ್ತ್ರಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು; ಅವನ ಸೇವಕರೆಲ್ಲರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಅವನ ಸುತ್ತಲೂ ನಿಂತರು. ಆದರೆ ದಾವೀದನ ಸಹೋದರನಾದ ಶಿಮ್ಮನ ಮಗನಾಗಿ ರುವ ಯೋನಾದಾಬನು ದಾವೀದನಿಗೆ--ಒಡೆಯನೇ, ನನ್ನ ಅರಸನ ಮಕ್ಕಳಾದ ಯೌವನಸ್ಥರೆಲ್ಲರನ್ನು ಕೊಂದುಹಾಕಿದರೆಂದು ನೆನಸಬೇಡ; ಅಮ್ನೋನನು ಮಾತ್ರವೇ ಸತ್ತನು; ಅಬ್ಷಾಲೋಮನು ತನ್ನ ಸಹೋ ದರಿಯಾದ ತಾಮಾರಳನ್ನು ಅಮ್ನೋನನು ಬಲವಂತ ಮಾಡಿದ ದಿನ ಮೊದಲುಗೊಂಡು ಈ ಕಾರ್ಯವನ್ನು ಮಾಡುವದಕ್ಕೆ ತನ್ನ ಮನಸ್ಸಿನಲ್ಲಿ ಸ್ಥಿರಮಾಡಿದ್ದನು; ಆದದರಿಂದ ಅರಸನಾದ ನನ್ನ ಒಡೆಯನೇ ಅರಸನ ಮಕ್ಕಳೆಲ್ಲರು ಸತ್ತರೆಂಬುವ ಮಾತನ್ನು ನಿನ್ನ ಮನಸ್ಸಿನ ಲ್ಲಿಡಬೇಡ; ಯಾಕಂದರೆ ಅಮ್ನೋನನು ಒಬ್ಬನೇ ಸತ್ತನು ಅಂದನು. ಆದರೆ ಅಬ್ಷಾಲೋಮನು ಓಡಿ ಹೋದನು; ಆಗ ಕಾವಲುಗಾರನು ತನ್ನ ಕಣ್ಣುಗಳ ನ್ನೆತ್ತಿ ನೋಡುವಾಗ ಇಗೋ, ಅವನ ಹಿಂಭಾಗದಲ್ಲಿ ಬೆಟ್ಟದ ಪಾರ್ಶ್ವದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು. ಆಗ ಯೋನಾದಾಬನು ಅರಸನಿಗೆಇಗೋ, ಅರಸನ ಮಕ್ಕಳು ಬರುತ್ತಿದ್ದಾರೆ; ನಿನ್ನ ಸೇವ ಕನು ಹೇಳಿದ ಹಾಗೆಯೇ ಆಯಿತು ಅಂದನು. ಅವನು ಮಾತನಾಡಿ ತೀರಿಸಿದಾಗ ಇಗೋ, ಅರಸನ ಮಕ್ಕಳು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಎಲ್ಲಾ ಸೇವಕರೂ ಬಹಳವಾಗಿ ಅತ್ತರು. ಆದರೆ ಅಬ್ಷಾ ಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅವ್ಮೆಾಹೂದನ ಮಗನಾದ ತಲ್ಮೈಯನ ಬಳಿಗೆ ಹೋದನು. ದಾವೀದನು ದಿನಂಪ್ರತಿ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು. ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿ ಹೋಗಿ ಅಲ್ಲಿ ಮೂರು ವರುಷ ಇದ್ದನು.ಆದರೆ ದಾವೀದನು ಅಬ್ಷಾಲೋಮನ ಬಳಿಗೆ ಹೋಗುವ ದಕ್ಕೆ ಆಸೆಪಡುತ್ತಿದ್ದನು. ಯಾಕಂದರೆ ಅಮ್ನೋನನು ಸತ್ತುಹೋದದರಿಂದ ಅರಸನಾದ ದಾವೀದನು ಅವನಿ ಗೋಸ್ಕರ ಆದರಣೆಹೊಂದಿದನು. ಆದರೆ ದಾವೀದನು ಅಬ್ಷಾಲೋಮನ ಬಳಿಗೆ ಹೋಗುವ ದಕ್ಕೆ ಆಸೆಪಡುತ್ತಿದ್ದನು. ಯಾಕಂದರೆ ಅಮ್ನೋನನು ಸತ್ತುಹೋದದರಿಂದ ಅರಸನಾದ ದಾವೀದನು ಅವನಿ ಗೋಸ್ಕರ ಆದರಣೆಹೊಂದಿದನು.
- Hebrews 12:10–11 ಇಬ್ರಿಯರಿಗೆ 12:10–11ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ. ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ.