Proverbs · chapter 3 · verse 11
Proverbs 3:11 in Kannada
ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;
Nanna magane, kartana shiksheyannu taatsaara maadabeda. Maatravallade aatana tidduvikege besara gollabeda;
Proverbs 3:11 in English
- King James Version (KJV)
- My son, despise not the chastening of the LORD; neither be weary of his correction:
- World English Bible (WEB)
- My son, don’t despise the LORD’s discipline, neither be weary of his correction;
- American Standard Version (ASV)
- My son, despise not the chastening of Jehovah; Neither be weary of his reproof:
- Bible in Basic English (BBE)
- My son, do not make your heart hard against the Lord's teaching; do not be made angry by his training:
- Darby Translation (DBY)
- My son, despise not the instruction of Jehovah, neither be weary of his chastisement;
- Webster's Bible (WBS)
- My son, despise not the chastening of the LORD; neither be weary of his correction:
- Young's Literal Translation (YLT)
- Chastisement of Jehovah, my son, despise not, And be not vexed with His reproof,
Read in context
- 9ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.
- 10ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು.
- 11ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;
- 12ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು.
- 13ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
Cross references
- Job 5:17 ಯೋಬನು 5:17ಇಗೋ, ದೇವರು ಗದರಿಸುವ ಮನುಷ್ಯನು ಭಾಗ್ಯ ವಂತನು; ಸರ್ವಶಕ್ತನ ಶಿಕ್ಷೆಯನ್ನು ಅಲಕ್ಷ್ಯಮಾಡ ಬೇಡ.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Hebrews 12:5–12 ಇಬ್ರಿಯರಿಗೆ 12:5–12ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ--ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಇಲ್ಲವೆ ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳ ಬೇಡ; ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸು ತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು. ನೀವು ಶಿಕ್ಷೆಯನ್ನು ತಾಳಿಕೊಂಡರೆ ದೇವರು ನಿಮ್ಮನ್ನು ಪುತ್ರರೆಂದು ನಡಿಸು ತ್ತಾನೆ. ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ? ನೀವು ಶಿಕ್ಷೆ ಹೊಂದುವವರೆಲ್ಲರೊಂದಿಗೆ ಪಾಲುಗಾರ ರಾಗಿರದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಪುತ್ರರಲ್ಲ. ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ ತಂದೆಗಳನ್ನು ಸನ್ಮಾನಿ ಸಿದೆವಷ್ಟೆ; ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಒಳಪಟ್ಟು ಜೀವಿಸಬೇಕಲ್ಲವೇ? ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ. ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ. ಹೀಗಿರುವದ ರಿಂದ ಜೋಲು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ.
- Psalm 94:12 ಕೀರ್ತನೆಗಳು 94:12ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು.
- Isaiah 40:30–31 ಯೆಶಾಯ 40:30–31ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು. ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
- 1 Corinthians 11:32 1 ಕೊರಿಂಥದವರಿಗೆ 11:32ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
- 2 Corinthians 4:16–17 2 ಕೊರಿಂಥದವರಿಗೆ 4:16–17ಈ ಕಾರಣದಿಂದ ನಾವು ಧೈರ್ಯಗೆಡುವದಿಲ್ಲ; ಆದರೆ ನಮ್ಮ ಹೊರಮನುಷ್ಯನು ನಾಶವಾಗುತಾ ಇದ್ದರೂ ನಮ್ಮ ಒಳಮನುಷ್ಯನು ದಿನೇದಿನೇ ಹೊಸಬ ನಾಗುತ್ತಾ ಇರುವನು. ಹೇಗಂದರೆ ಕ್ಷಣಮಾತ್ರ ವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ.ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು.
- 2 Corinthians 4:1 2 ಕೊರಿಂಥದವರಿಗೆ 4:1ಆದದರಿಂದ ನಾವು ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಡುವದಿಲ್ಲ.
- Proverbs 24:10 ಜ್ಞಾನೋಕ್ತಿಗಳು 24:10ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ.
- Hebrews 12:3 ಇಬ್ರಿಯರಿಗೆ 12:3ನೀವು ಮನಗುಂದಿದವರಾಗಿ ಬೇಸರಗೊಳ್ಳ ದಂತೆ ಆತನು ತಾನೇ ಪಾಪಿಗಳಿಂದ ಎಷ್ಟೋ ವಿರೋಧ ವನ್ನು ಸಹಿಸಿ ಕೊಂಡನೆಂಬದನ್ನು ನೀವು ಆಲೋಚಿಸಿರಿ.