Psalms · chapter 119 · verse 134
Psalm 119:134 in Kannada
ಮನುಷ್ಯರ ಬಲಾತ್ಕಾರದಿಂದ ನನ್ನನ್ನು ತಪ್ಪಿಸು; ಆಗ ನಿನ್ನ ಕಟ್ಟಳೆಗಳನ್ನು ನಾನು ಕೈಕೊಳ್ಳುವೆನು.
Manushyara balaatkaaradinda nannannu tappisu; aaga ninna kattalegalannu naanu kaikolluvenu.
Psalm 119:134 in English
- King James Version (KJV)
- Deliver me from the oppression of man: so will I keep thy precepts.
- World English Bible (WEB)
- Redeem me from the oppression of man, so I will observe your precepts.
- American Standard Version (ASV)
- Redeem me from the oppression of man: So will I observe thy precepts.
- Bible in Basic English (BBE)
- Make me free from the cruel rule of man; then I will keep your orders.
- Darby Translation (DBY)
- Deliver me from the oppression of man; and I will keep thy precepts.
- Webster's Bible (WBS)
- Deliver me from the oppression of man: so will I keep thy precepts.
- Young's Literal Translation (YLT)
- Ransom me from the oppression of man, And I observe Thy precepts,
Read in context
- 132ನೀನು ನನ್ನ ಕಡೆಗೆ ದೃಷ್ಟಿಸಿ ನಿನ್ನ ಹೆಸರನ್ನು ಪ್ರೀತಿಸುವವರಿಗೆ ಮಾಡುವ ಪ್ರಕಾರ ನನ್ನನ್ನು ಕರುಣಿಸು.
- 133ನನ್ನ ಹೆಜ್ಜೆಗಳನ್ನು ನಿನ್ನ ವಾಕ್ಯದಲ್ಲಿ ದೃಢಪಡಿಸು; ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡ ದಿರಲಿ.
- 134ಮನುಷ್ಯರ ಬಲಾತ್ಕಾರದಿಂದ ನನ್ನನ್ನು ತಪ್ಪಿಸು; ಆಗ ನಿನ್ನ ಕಟ್ಟಳೆಗಳನ್ನು ನಾನು ಕೈಕೊಳ್ಳುವೆನು.
- 135ನಿನ್ನ ಮುಖವನ್ನು ನಿನ್ನ ಸೇವಕನ ಮೇಲೆ ಪ್ರಕಾಶಿಸ ಮಾಡು ಮತ್ತು ನಿನ್ನ ನಿಯಮಗಳನ್ನು ನನಗೆ ಕಲಿಸು.
- 136ಅವರು ನಿನ್ನ ನ್ಯಾಯಪ್ರಮಾಣವನ್ನು ಕೈ ಕೊಳ್ಳದ ನಿಮಿತ್ತ ಹೊಳೆಗಳಂತೆ ನನ್ನ ಕಣ್ಣೀರು ಹರಿಯುತ್ತದೆ.
Cross references
- Psalm 56:1–2 ಕೀರ್ತನೆಗಳು 56:1–2ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ. ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
- Psalm 119:122 ಕೀರ್ತನೆಗಳು 119:122ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.
- Luke 1:74–75 ಲೂಕನು 1:74–75ನಾವು ನಮ್ಮ ಶತ್ರುಗಳ ಕೈಯಿಂದ ಬಿಡಿಸಲ್ಪಟ್ಟು ಭಯವಿಲ್ಲದವರಾಗಿ ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.
- Ezekiel 11:17–20 ಯೆಹೆಜ್ಕೇಲನು 11:17–20ಆದದರಿಂದ ನೀನು ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆಹೇಳುತ್ತಾನೆ--ನಾನು ನಿಶ್ಚ ಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ ನೀವು ಚದ ರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ; ಇಸ್ರಾ ಯೇಲ್ ದೇಶವನ್ನು ನಿಮಗೆ ಕೊಡುತ್ತೇನೆ. ಅವರು ಅಲ್ಲಿಗೆ ಬಂದು ಎಲ್ಲಾ ಹೇಸಿಗೆಯ ಸಂಗತಿಗಳನ್ನೂ ಎಲ್ಲಾ ಅಸಹ್ಯವಾದವುಗಳನ್ನೂ ಅಲ್ಲಿಂದ ತೆಗೆದು ಹಾಕುವರು; ಅವರಿಗೆ ಒಂದು ಹೃದಯವನ್ನು ಕೊಡು ವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು; ಅವರೊಳಗಿಂದ ಕಠಿಣ ಹೃದಯವನ್ನು ಹೊರಗೆ ತೆಗೆದು ಮೃದು ಹೃದಯವನ್ನು ಕೊಡುವೆನು. ಆಗ ಅವರು ನನ್ನ ನಿಯಮಗಳಲ್ಲಿ ನಡೆದುಕೊಂಡು ನನ್ನ ನಿಯಮಗ ಳನ್ನು ಕೈಕೊಂಡು ನಡೆಯುವರು. ಅವರು ನನ್ನ ಜನರಾಗು ವರು, ನಾನು ಅವರ ದೇವರಾಗುವೆನು.
- Ezekiel 36:24–27 ಯೆಹೆಜ್ಕೇಲನು 36:24–27ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು. ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.
- Psalm 142:6 ಕೀರ್ತನೆಗಳು 142:6ನನ್ನ ಕೂಗನ್ನು ಆಲೈಸು; ನಾನು ಬಹಳ ಕುಂದಿ ಹೋಗಿದ್ದೇನೆ. ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸು; ಅವರು ನನಗಿಂತ ಬಲವುಳ್ಳವರಾಗಿದ್ದಾರೆ.ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ.
- Psalm 56:13 ಕೀರ್ತನೆಗಳು 56:13ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
- Acts 9:31 ಅಪೊಸ್ತಲರ ಕೃತ್ಯಗಳು 9:31ಹೀಗಿರಲಾಗಿ ಯೂದಾಯ ಗಲಿಲಾಯ ಸಮಾ ರ್ಯ ಸೀಮೆಗಳಲ್ಲಿದ್ದ ಸಭೆಗಳು ಭಕ್ತಿವೃದ್ಧಿ ಹೊಂದಿದವು; ಕರ್ತನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಆದರಣೆ ಹೊಂದಿ ಹೆಚ್ಚುತ್ತಾ ಬಂದವು.
- Psalm 105:43–45 ಕೀರ್ತನೆಗಳು 105:43–45ಆತನು ತನ್ನ ಜನರನ್ನು ಆನಂದದಿಂದಲೂ ತಾನು ಆದುಕೊಂಡವರನ್ನು ಉತ್ಸಾ ಹದಿಂದಲೂ ಹೊರಗೆ ಬರಮಾಡಿದನು, ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ. ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.