Psalms · chapter 119 · verse 52
Psalm 119:52 in Kannada
ಓ ಕರ್ತನೇ, ಪೂರ್ವಕಾಲದಿಂದ ಬಂದಿ ರುವ ನಿನ್ನ ನ್ಯಾಯಗಳನ್ನು ಜ್ಞಾಪಕಮಾಡಿಕೊಂಡು ಆದರಣೆ ಹೊಂದಿದ್ದೇನೆ.
O kartane, poorvakaaladinda bandi ruva ninna nyaayagalannu jnyaapakamaadikondu aadarane hondiddene.
Psalm 119:52 in English
- King James Version (KJV)
- I remembered thy judgments of old, O LORD; and have comforted myself.
- World English Bible (WEB)
- I remember your ordinances of old, LORD, and have comforted myself.
- American Standard Version (ASV)
- I have remembered thine ordinances of old, O Jehovah, And have comforted myself.
- Bible in Basic English (BBE)
- I have kept the memory of your decisions from times past, O Lord; and they have been my comfort.
- Darby Translation (DBY)
- I remembered thy judgments of old, O Jehovah, and have comforted myself.
- Webster's Bible (WBS)
- I remembered thy judgments of old, O LORD; and have comforted myself.
- Young's Literal Translation (YLT)
- I remembered Thy judgments of old, O Jehovah, And I comfort myself.
Read in context
- 50ನನ್ನ ಸಂಕಷ್ಟದಲ್ಲಿ ಇದೇ ನನ್ನ ಆದರಣೆಯು; ಯಾಕಂದರೆ ನಿನ್ನ ವಾಕ್ಯವು ನನ್ನನ್ನು ಬದುಕಿಸಿತು.
- 51ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
- 52ಓ ಕರ್ತನೇ, ಪೂರ್ವಕಾಲದಿಂದ ಬಂದಿ ರುವ ನಿನ್ನ ನ್ಯಾಯಗಳನ್ನು ಜ್ಞಾಪಕಮಾಡಿಕೊಂಡು ಆದರಣೆ ಹೊಂದಿದ್ದೇನೆ.
- 53ನಿನ್ನ ನ್ಯಾಯಪ್ರಮಾಣ ವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ ಭಯ ಭ್ರಾಂತಿಯು ನನ್ನನ್ನು ಹಿಡಿದುಕೊಂಡಿತು.
- 54ನನ್ನ ಪ್ರವಾಸದ ಮನೆಯಲ್ಲಿ ನಿನ್ನ ನಿಯಮಗಳು ನನಗೆ ಕೀರ್ತನೆಗಳಾಗಿವೆ.
Cross references
- Psalm 77:11–12 ಕೀರ್ತನೆಗಳು 77:11–12ಕರ್ತನ ಕ್ರಿಯೆಗಳನ್ನು ನೆನಸಿ ನಿಶ್ಚಯವಾಗಿ ಪುರಾತನ ಅದ್ಭುತ ಗಳನ್ನು ಜ್ಞಾಪಿಸಿಕೊಳ್ಳುವೆನು. ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
- Psalm 105:5 ಕೀರ್ತನೆಗಳು 105:5ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
- Psalm 103:18 ಕೀರ್ತನೆಗಳು 103:18ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.
- 2 Peter 2:4–9 2 ಪೇತ್ರನು 2:4–9ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು. ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು; ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು. ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು. ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು. ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Deuteronomy 4:3–4 ಧರ್ಮೋಪದೇಶಕಾಂಡ 4:3–4ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ? ಆದರೆ ನಿಮ್ಮ ದೇವರಾದ ಕರ್ತನಿಗೆ ಅಂಟಿಕೊಂಡವರಾದ ನೀವೆಲ್ಲರು ಇಂದು ಬದುಕುತ್ತೀರಿ.
- Deuteronomy 1:35–36 ಧರ್ಮೋಪದೇಶಕಾಂಡ 1:35–36ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ. ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
- Numbers 16:3–35 ಅರಣ್ಯಕಾಂಡ 16:3–35ಅವರು ಮೋಶೆಗೂ ಆರೋನ ನಿಗೂ ವಿರೋಧವಾಗಿ ಕೂಡಿಕೊಂಡು--ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ; ಸಭೆಯೂ ಸಭೆ ಯಲ್ಲಿರುವ ಎಲ್ಲರೂ ಪರಿಶುದ್ಧರೇ, ಕರ್ತನು ಅವರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ನೀವು ನಿಮ್ಮನ್ನು ಸಭೆಗಿಂತ ಹೆಚ್ಚಾಗಿ ನೀವೇ ಹೆಚ್ಚಿಸಿಕೊಳ್ಳು ವದು ಯಾಕೆ ಎಂದು ಅವರಿಗೆ ಹೇಳಿದರು. ಮೋಶೆಯು ಇದನ್ನು ಕೇಳಿ ಬೋರಲು ಬಿದ್ದು ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ: ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ ಅವುಗಳ ಮೇಲೆ ಧೂಪವನ್ನು ಕರ್ತನ ಮುಂದೆ ಹಾಕಿರಿ; ಆಗ ಕರ್ತನು ಯಾವನನ್ನು ಆದುಕೊಳ್ಳುವನೋ ಅವನೇ ಪರಿ ಶುದ್ಧನಾಗಿರುವನು; ಲೇವಿಯ ಮಕ್ಕಳೇ, ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ ಎಂದು ಹೇಳಿದನು. ಮೋಶೆಯು ಕೋರಹನಿಗೆ--ಲೇವಿಯ ಕುಮಾ ರರೇ, ಈಗ ಕೇಳಿರಿ. ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ? ಈ ಕಾರಣದಿಂದ ನೀನೂ ನಿನ್ನ ಸಮಸ್ತ ಗುಂಪೂ ಕರ್ತನಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ; ನೀವು ಅವನಿಗೆ ವಿರೋಧವಾಗಿ ಗುಣುಗುಟ್ಟುವ ಹಾಗೆ ಆರೋನನು ಯಾರು ಎಂದು ಹೇಳಿದನು. ಆಗ ಮೋಶೆ ಎಲೀಯಾಬನ ಕುಮಾರರಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಿದನು. ಆದರೆ ಅವರು--ನಾವು ಬರುವದಿಲ್ಲ, ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ? ಇದಲ್ಲದೆ ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತಕ್ಕೊಂಡು ಬರಲಿಲ್ಲ; ಇಲ್ಲವೆ ಹೊಲಗಳನ್ನೂ ದ್ರಾಕ್ಷೇ ತೋಟಗಳನ್ನೂ ನಮಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ; ಈ ಮನುಷ್ಯರ ಕಣ್ಣುಗಳನ್ನು ಕಿತ್ತುಬಿಡುವಿಯೋ? ನಾವು ಬರುವದಿಲ್ಲ ಅಂದರು. ಆಗ ಮೋಶೆಯು ಬಹಳ ವಾಗಿ ಕೋಪಿಸಿಕೊಂಡು ಕರ್ತನಿಗೆ--ಅವರ ಬಲಿಯನ್ನು ನೀನು ಗೌರವಿಸಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ; ಇಲ್ಲವೆ ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ ಎಂದು ಹೇಳಿದನು. ಮೋಶೆಯು ಕೋರಹನಿಗೆ--ನೀನೂ ನಿನ್ನ ಸಮೂಹವೆಲ್ಲವೂ ಕರ್ತನ ಎದುರಿನಲ್ಲಿ ಇರಬೇಕು; ನೀನೂ ಅವರೂ ಆರೋನನೂ ನಾಳೆ ಬಂದು ಒಬ್ಬೊಬ್ಬನು ತನ್ನ ತನ್ನ ಧೂಪದ ಪಾತ್ರೆಯನ್ನು ತಕ್ಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ನಿಮ್ಮ ಧೂಪ ಪಾತ್ರೆಗಳನ್ನು ಕರ್ತನ ಎದುರಿಗೆ ತನ್ನಿರಿ. ನೀನೂ ಆರೋನನೂ ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಬನ್ನಿರಿ ಅಂದನು. ಆಗ ಅವರು ತಮ್ಮ ತಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ ಅದರ ಮೇಲೆ ಧೂಪವನ್ನು ಹಾಕಿ ಸಭೆಯ ಗುಡಾರದ ಬಾಗಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು. ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ಸಭೆಯ ಗುಡಾರದ ಬಾಗಲಿನ ಹತ್ತಿರ ಕೂಡಿಸಿದನು. ಆಗ ಕರ್ತನ ಮಹಿಮೆಯು ಸಮಸ್ತ ಸಭೆಗೆ ತೋರಿಬಂತು. ಕರ್ತನು ಮೋಶೆ ಆರೋನನ ಸಂಗಡ ಮಾತ ನಾಡಿ-- ಈ ಸಭೆಯ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರ ದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದು--ಓ ದೇವರೇ, ಎಲ್ಲಾ ಶರೀರಾತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀನು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳು ತ್ತೀಯೋ ಅಂದರು. ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ-- ಕೋರಹ ದಾತಾನ್ ಅಬೀರಾಮರ ನಿವಾಸದ ಸುತ್ತಲಿಂದ ದೂರಹೋಗಿರಿ ಎಂದು ನೀನು ಸಭೆಗೆ ಹೇಳು ಅಂದನು-- ಆಗ ಮೋಶೆಯು ಎದ್ದು ದಾತಾನ ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲ್ಯರ ಹಿರಿಯರೂ ಅವನ ಹಿಂದೆ ಹೋದರು. ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು. ಆಗ ಅವರು ಕೋರಹ ದಾತಾನ್ ಅಬೀರಾಮರ ಡೇರೆಗಳ ಸುತ್ತಲಿಂದ ದೂರಹೋದರು. ದಾತಾನ್ ಅಬೀರಾಮರೂ ಅವರ ತಮ್ಮ ಹೆಂಡತಿಯರೂ ಕುಮಾ ರರೂ ಚಿಕ್ಕ ಮಕ್ಕಳೂ ಹೊರಟು ತಮ್ಮ ಗುಡಾರಗಳ ಬಾಗಲುಗಳಲ್ಲಿ ನಿಂತುಕೊಂಡರು. ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ. ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ ಇಲ್ಲವೆ ಎಲ್ಲಾ ಮನುಷ್ಯರ ಹಾಗೆ ಶಿಕ್ಷೆ ಇವರಿಗೆ ಪ್ರಾಪ್ತವಾದರೆ ಕರ್ತನು ನನ್ನನ್ನು ಕಳುಹಿಸಲಿಲ್ಲ. ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು. ಇದಾದ ಮೇಲೆ ಅವನು ಹೇಳಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು. ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು. ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- Psalm 77:5 ಕೀರ್ತನೆಗಳು 77:5ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು.
- Exodus 14:29–30 ವಿಮೋಚನಕಾಂಡ 14:29–30ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು. ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.
- Psalm 143:5 ಕೀರ್ತನೆಗಳು 143:5ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.