Psalms · chapter 119 · verse 61
Psalm 119:61 in Kannada
ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು; ಆದರೂ ನಿನ್ನ ನ್ಯಾಯಪ್ರಮಾಣವನ್ನು ನಾನು ಮರೆತುಬಿಡಲಿಲ್ಲ.
Dushtara paashagalu nannannu suttikondavu; aadaroo ninna nyaayapramaanavannu naanu maretubidalilla.
Psalm 119:61 in English
- King James Version (KJV)
- The bands of the wicked have robbed me: [but] I have not forgotten thy law.
- World English Bible (WEB)
- The ropes of the wicked bind me, but I won’t forget your law.
- American Standard Version (ASV)
- The cords of the wicked have wrapped me round; [But] I have not forgotten thy law.
- Bible in Basic English (BBE)
- The cords of evil-doers are round me; but I have kept in mind your law.
- Darby Translation (DBY)
- The bands of the wicked have wrapped me round: I have not forgotten thy law.
- Webster's Bible (WBS)
- The bands of the wicked have robbed me: [but] I have not forgotten thy law.
- Young's Literal Translation (YLT)
- Cords of the wicked have surrounded me, Thy law I have not forgotten.
Read in context
- 59ನನ್ನ ಮಾರ್ಗಗಳನ್ನು ಯೋಚಿಸಿಕೊಂಡು ನಿನ್ನ ಸಾಕ್ಷಿಗಳ ಕಡೆಗೆ ನನ್ನ ಪಾದ ಗಳನ್ನು ತಿರುಗಿಸಿದ್ದೇನೆ.
- 60ನಿನ್ನ ಆಜ್ಞೆಗಳನ್ನು ಕೈಕೊಳ್ಳು ವದಕ್ಕೆ ತಡಮಾಡದೆ ತ್ವರೆಪಟ್ಟಿದ್ದೇನೆ.
- 61ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು; ಆದರೂ ನಿನ್ನ ನ್ಯಾಯಪ್ರಮಾಣವನ್ನು ನಾನು ಮರೆತುಬಿಡಲಿಲ್ಲ.
- 62ನಿನ್ನ ನೀತಿಯ ನ್ಯಾಯವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡುವದಕ್ಕೆ ಮಧ್ಯರಾತ್ರಿಯಲ್ಲಿ ಏಳುತ್ತೇನೆ.
- 63ನಿನಗೆ ಭಯಪಡುವವರೆಲ್ಲರಿಗೂ ನಿನ್ನ ಕಟ್ಟಳೆಗ ಳನ್ನು ಕೈಕೊಳ್ಳುವವರಿಗೂ, ನಾನು ಸಂಗಡಿಗನಾಗಿದ್ದೇನೆ.
Cross references
- Romans 12:17–21 ರೋಮಾಪುರದವರಿಗೆ 12:17–21ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ. ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ. ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ. ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
- Psalm 119:176 ಕೀರ್ತನೆಗಳು 119:176ತಪ್ಪಿಹೋದ ಕುರಿಯ ಹಾಗೆ ತೊಳಲ್ಲಿದ್ದೇನೆ; ನಿನ್ನ ಸೇವಕನನ್ನು ಹುಡುಕು; ನಿನ್ನ ಆಜ್ಞೆಗಳನ್ನು ಮರೆತುಬಿಡೆನು.
- Hosea 6:9 ಹೋಶೇಯ 6:9ಕಳ್ಳರ ಗುಂಪು ಮನುಷ್ಯನಿಗೋಸ್ಕರ ಕಾಯುವ ಪ್ರಕಾರ ಯಾಜಕರ ಗುಂಪು ಒಪ್ಪಿಗೆಯಿಂದ ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.
- Proverbs 24:29 ಜ್ಞಾನೋಕ್ತಿಗಳು 24:29ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
- Job 1:17 ಯೋಬನು 1:17ಅವನು ಇನ್ನೂ ಮಾತ ನಾಡುತ್ತಿರಲು ಮತ್ತೊಬ್ಬನು ಬಂದು--ಕಸ್ದೀಯರು ಮೂರು ದಂಡುಗಳನ್ನು ಕಟ್ಟಿ, ಒಂಟೆಗಳ ಮೇಲೆ ಬಿದ್ದು, ಅವುಗಳನ್ನು ತಕ್ಕೊಂಡು ಸಂಹರಿಸಿದರು; ಹೌದು, ಸೇವಕರನ್ನು ಕತ್ತಿಯಿಂದ ಹೊಡೆದರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿ ಕೊಂಡೆನು ಅಂದನು.
- Psalm 119:95 ಕೀರ್ತನೆಗಳು 119:95ದುಷ್ಟರು ನನ್ನನ್ನು ನಾಶಮಾಡುವದಕ್ಕೆ ನನಗಾಗಿ ಕಾದುಕೊಳ್ಳುತ್ತಾರೆ. ನಿನ್ನ ಸಾಕ್ಷಿಗಳನ್ನು ಗ್ರಹಿಸಿ ಕೊಳ್ಳುತ್ತೇನೆ.
- Psalm 3:1 ಕೀರ್ತನೆಗಳು 3:1ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.
- 1 Samuel 26:9–11 1 ಸಮುವೇಲನು 26:9–11ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು. ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು. ನಾನು ನನ್ನ ಕೈಯನ್ನು ಕರ್ತನ ಅಭಿಷಿಕ್ತನ ಮೇಲೆ ಹಾಕದಹಾಗೆ ಕರ್ತನು ನನಗೆ ಆಟಂಕಮಾಡಲಿ. ಆದರೆ ನೀನು ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೋ;
- Psalm 140:5 ಕೀರ್ತನೆಗಳು 140:5ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
- 1 Samuel 24:9–11 1 ಸಮುವೇಲನು 24:9–11ದಾವೀದನು ಸೌಲನಿಗೆ--ಇಗೋ, ದಾವೀದನು ನಿನಗೆ ಕೇಡುಮಾಡ ಹುಡುಕು ತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಯಾಕೆ ಕೇಳುತ್ತಿದ್ದೀ? ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು. ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
- 1 Samuel 30:3–5 1 ಸಮುವೇಲನು 30:3–5ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು. ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು. ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲಿನವಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಒಯ್ಯ ಲ್ಪಟ್ಟರು.