Proverbs · chapter 24 · verse 29
Proverbs 24:29 in Kannada
ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
Nanage avanu maadidante naanoo avanige maaduvenu; avanu maadiddakke sariyaagi muyyi teerisuvenu endu helabeda.
Proverbs 24:29 in English
- King James Version (KJV)
- Say not, I will do so to him as he hath done to me: I will render to the man according to his work.
- World English Bible (WEB)
- Don’t say, “I will do to him as he has done to me; I will repay the man according to his work.”
- American Standard Version (ASV)
- Say not, I will do so to him as he hath done to me; I will render to the man according to his work.
- Bible in Basic English (BBE)
- Say not, I will do to him as he has done to me; I will give the man the reward of his work.
- Darby Translation (DBY)
- Say not, I will do so to him as he hath done to me, I will render to the man according to his work.
- Webster's Bible (WBS)
- Say not, I will do so to him as he hath done to me: I will render to the man according to his work.
- Young's Literal Translation (YLT)
- Say not, 'As he did to me, so I do to him, I render to each according to his work.'
Read in context
- 27ಹೊರಗೆ ನಿನ್ನ ಕೆಲಸ ವನ್ನು ಸಿದ್ಧಪಡಿಸಿಕೊ; ಅದು ಹೊಲದಲ್ಲಿ ನಿನಗೋಸ್ಕರ ಸರಿಯಾಗುವಂತೆ ಮಾಡಿಕೊ; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.
- 28ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ತುಟಿಗಳಿಂದ ಮೋಸಮಾಡಬೇಡ.
- 29ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
- 30ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು;
- 31ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಯಿತು.
Cross references
- Proverbs 20:22 ಜ್ಞಾನೋಕ್ತಿಗಳು 20:22ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು.
- Romans 12:17–21 ರೋಮಾಪುರದವರಿಗೆ 12:17–21ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ. ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ. ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ. ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
- 1 Thessalonians 5:15 1 ಥೆಸಲೊನೀಕದವರಿಗೆ 5:15ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿ ಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತ ವನ್ನು ಮಾಡುವವರಾಗಿರ್ರಿ.
- Matthew 5:39–44 ಮತ್ತಾಯನು 5:39–44ಆದರೆ ನಾನು ನಿಮಗೆ ಹೇಳುವದೇನಂದರೆ--ನೀವು ಕೆಟ್ಟದ್ದನ್ನು ಎದುರಿಸಬೇಡಿರಿ; ಯಾವನಾದರೂ ನಿನ್ನ ಬಲ ಗೆನ್ನೆಯ ಮೇಲೆ ಹೊಡೆದರೆ ಮತ್ತೊಂದನ್ನು ಸಹ ಅವನಿಗೆ ತಿರುಗಿಸು. ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು. ಮತ್ತು ಯಾವನಾದರೂ ಒಂದು ಮೈಲು ಹೋಗುವಂತೆ ನಿನ್ನನ್ನು ಬಲವಂತ ಮಾಡಿದರೆ ಅವನೊಂದಿಗೆ ಎರಡು ಮೈಲು ಹೋಗು. ನಿನ್ನನ್ನು ಕೇಳುವವನಿಗೆ ಕೊಡು; ಮತ್ತು ನಿನ್ನಿಂದ ಕಡಾ ತಕ್ಕೊಳ್ಳಬೇಕೆಂದಿರುವವನಿಂದ ನೀನು ತಿರುಗಿಕೊಳ್ಳಬೇಡ. ನೀನು ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕು ಎಂದು ಹೇಳಿರು ವದನ್ನು ನೀವು ಕೇಳಿದ್ದೀರಿ. ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ.
- Proverbs 25:21–22 ಜ್ಞಾನೋಕ್ತಿಗಳು 25:21–22ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು. ಅವನ ತಲೆಯ ಮೇಲೆ ಬೆಂಕಿಯ ಕೆಂಡಗಳನ್ನು ಹಾಕುವಿ; ಕರ್ತನು ನಿನಗೆ ಪ್ರತಿಫಲ ಕೊಡುವನು.
- Judges 15:11 ನ್ಯಾಯಸ್ಥಾಪಕರು 15:11ಆಗ ಯೆಹೂದ ದಲ್ಲಿ ಮೂರು ಸಾವಿರ ಜನವು ಏಟಾಮ್ ಬಂಡೆಯ ಮೇಲಕ್ಕೆ ಹೋಗಿ ಸಂಸೋನನಿಗೆ--ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಯಾಕೆ ಮಾಡಿದಿ? ಅಂದರು.
- 2 Samuel 13:22–28 2 ಸಮುವೇಲನು 13:22–28ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು. ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು. ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು. ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು. ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು. ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು.