Psalms · chapter 119 · verse 66
Psalm 119:66 in Kannada
ಒಳ್ಳೆಯ ವಿವೇಚನೆ ಯನ್ನೂ ತಿಳುವಳಿಕೆಗಳನ್ನೂ ನನಗೆ ಕಲಿಸು; ನಿನ್ನ ಆಜ್ಞೆಗಳಲ್ಲಿ ನಂಬಿಕೆ ಇಟ್ಟಿದ್ದೇನೆ.
Olleya vivechane yannoo tiluvalikegalannoo nanage kalisu; ninna aajnyegalalli nambike ittiddene.
Psalm 119:66 in English
- King James Version (KJV)
- Teach me good judgment and knowledge: for I have believed thy commandments.
- World English Bible (WEB)
- Teach me good judgment and knowledge, for I believe in your commandments.
- American Standard Version (ASV)
- Teach me good judgment and knowledge; For I have believed in thy commandments.
- Bible in Basic English (BBE)
- Give me knowledge and good sense; for I have put my faith in your teachings.
- Darby Translation (DBY)
- Teach me good discernment and knowledge; for I have believed in thy commandments.
- Webster's Bible (WBS)
- Teach me good judgment and knowledge: for I have believed thy commandments.
- Young's Literal Translation (YLT)
- The goodness of reason and knowledge teach me, For in Thy commands I have believed.
Read in context
- 64ಕರ್ತನೇ, ಭೂಮಿಯು ನಿನ್ನ ಕರುಣೆಯಿಂದ ತುಂಬಿದೆ; ನಿನ್ನ ನಿಯಮಗಳನ್ನು ನನಗೆ ಕಲಿಸು.
- 65ಓ ಕರ್ತನೇ, ನಿನ್ನ ವಾಕ್ಯದ ಪ್ರಕಾರ ನಿನ್ನ ಸೇವಕ ನಿಗೆ ಒಳ್ಳೇದನ್ನು ಮಾಡಿದ್ದೀ.
- 66ಒಳ್ಳೆಯ ವಿವೇಚನೆ ಯನ್ನೂ ತಿಳುವಳಿಕೆಗಳನ್ನೂ ನನಗೆ ಕಲಿಸು; ನಿನ್ನ ಆಜ್ಞೆಗಳಲ್ಲಿ ನಂಬಿಕೆ ಇಟ್ಟಿದ್ದೇನೆ.
- 67ನಾನು ಶ್ರಮೆಪಡು ವದಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಆದರೆ ಈಗ ನಿನ್ನ ವಾಕ್ಯವನ್ನು ಕೈಕೊಂಡಿದ್ದೇನೆ.
- 68ನೀನು ಒಳ್ಳೆಯ ವನೂ ಒಳ್ಳೇದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಯಮಗಳನ್ನು ನನಗೆ ಬೋಧಿಸು.
Cross references
- Philippians 1:9 ಫಿಲಿಪ್ಪಿಯವರಿಗೆ 1:9ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ನೀವು ಜ್ಞಾನ ಮತ್ತು ಪೂರ್ಣ ವಿವೇಕಗಳಿಂದ ಕೂಡಿದವರಾಗಿರಬೇಕೆಂತಲೂ
- Proverbs 2:1–9 ಜ್ಞಾನೋಕ್ತಿಗಳು 2:1–9ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ.
- 1 Kings 3:9 1 ಅರಸುಗಳು 3:9ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
- James 3:13–18 ಯಾಕೋಬನು 3:13–18ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ. ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯ ಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧ ವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು. ಹೊಟ್ಟೇಕಿಚ್ಚೂ ಜಗಳವೂ ಇರುವ ಕಡೆ ಗಲಿಬಿಲಿಯೂ ಸಕಲವಿಧವಾದ ಕೆಟ್ಟ ಕೃತ್ಯವೂ ಇರುವವು. ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ. ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- Psalm 119:34 ಕೀರ್ತನೆಗಳು 119:34ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.
- Psalm 119:160 ಕೀರ್ತನೆಗಳು 119:160ಆದಿ ಯಿಂದಲೂ ನಿನ್ನ ವಾಕ್ಯವು ಸತ್ಯವೇ; ನಿನ್ನ ನೀತಿಯ ನ್ಯಾಯವಿಧಿಗಳೆಲ್ಲಾ ನಿತ್ಯವಾಗಿವೆ.
- Matthew 13:11 ಮತ್ತಾಯನು 13:11ಆತನು ಪ್ರತ್ಯುತ್ತರವಾಗಿ ಅವ ರಿಗೆ--ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ.
- Isaiah 11:2–4 ಯೆಶಾಯ 11:2–4ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು; ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು; ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
- Psalm 119:128 ಕೀರ್ತನೆಗಳು 119:128ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
- Psalm 119:172 ಕೀರ್ತನೆಗಳು 119:172ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
- Proverbs 8:20 ಜ್ಞಾನೋಕ್ತಿಗಳು 8:20ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ.
- Psalm 72:1–2 ಕೀರ್ತನೆಗಳು 72:1–2ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು. ನಿನ್ನ ಜನರಿಗೆ ನೀತಿಯಿಂದಲೂ ದೀನರಿಗೆ ನ್ಯಾಯದಿಂದಲೂ ಆತನು ತೀರ್ಪು ಮಾಡು ವನು.