Psalms · chapter 119 · verse 172
Psalm 119:172 in Kannada
ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
Nanna naaligeyu ninna vaakyada vishayavaagi maatanaaduttade. Ninna aajnyegalellaa neetiye.
Psalm 119:172 in English
- King James Version (KJV)
- My tongue shall speak of thy word: for all thy commandments [are] righteousness.
- World English Bible (WEB)
- Let my tongue sing of your word, for all your commandments are righteousness.
- American Standard Version (ASV)
- Let my tongue sing of thy word; For all thy commandments are righteousness.
- Bible in Basic English (BBE)
- Let my tongue make songs in praise of your word; for all your teachings are righteousness.
- Darby Translation (DBY)
- My tongue shall speak aloud of thy *word; for all thy commandments are righteousness.
- Webster's Bible (WBS)
- My tongue shall speak of thy word: for all thy commandments [are] righteousness.
- Young's Literal Translation (YLT)
- My tongue doth sing of Thy saying, For all Thy commands [are] righteous.
Read in context
- 170ನನ್ನ ವಿಜ್ಞಾಪನೆಯು ನಿನ್ನ ಸಮ್ಮುಖಕ್ಕೆ ಬರಲಿ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಬಿಡಿಸು.
- 171ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.
- 172ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
- 173ನಿನ್ನ ಕೈ ನನ್ನ ಸಹಾಯಕ್ಕಾಗಿರಲಿ; ನಿನ್ನ ಕಟ್ಟಳೆ ಗಳನ್ನು ನಾನು ಆದುಕೊಂಡಿದ್ದೇನೆ.
- 174ಕರ್ತನೇ, ನಿನ್ನ ರಕ್ಷಣೆಗೆ ಆಶೆಪಟ್ಟಿದೇನೆ. ನಿನ್ನ ನ್ಯಾಯಪ್ರಮಾಣವು ನನ್ನ ಆನಂದವಾಗಿದೆ.
Cross references
- Ephesians 4:29 ಎಫೆಸದವರಿಗೆ 4:29ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.
- Romans 7:14 ರೋಮಾಪುರದವರಿಗೆ 7:14ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.
- Matthew 12:34–35 ಮತ್ತಾಯನು 12:34–35ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ. ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.
- Romans 7:12 ರೋಮಾಪುರದವರಿಗೆ 7:12ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ.
- Psalm 37:30 ಕೀರ್ತನೆಗಳು 37:30ನೀತಿವಂತನ ಬಾಯಿ ಜ್ಞಾನವನ್ನು ಉಚ್ಚರಿಸುವದು; ಅವನ ನಾಲಿಗೆ ನ್ಯಾಯ ವನ್ನು ನುಡಿಯುವದು.
- Psalm 119:142 ಕೀರ್ತನೆಗಳು 119:142ನಿನ್ನ ನೀತಿಯು ನಿತ್ಯವಾದ ನೀತಿಯೇ; ನಿನ್ನ ನ್ಯಾಯಪ್ರಮಾಣವು ಸತ್ಯವೇ.
- Psalm 119:138 ಕೀರ್ತನೆಗಳು 119:138ನಿನ್ನ ಸಾಕ್ಷಿ ಗಳನ್ನು ನೀತಿಯಾಗಿಯೂ ಬಹು ನಂಬಿಕೆಯುಳ್ಳವು ಗಳಾಗಿಯೂ ಆಜ್ಞಾಪಿಸಿದ್ದೀ.
- Psalm 78:4 ಕೀರ್ತನೆಗಳು 78:4ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.
- Colossians 4:6 ಕೊಲೊಸ್ಸೆಯವರಿಗೆ 4:6ನಿಮ್ಮ ಸಂಭಾಷಣೆ ಯಾವಾ ಗಲೂ ಕೃಪೆಯುಳ್ಳದ್ದಾಗಿಯೂ ಉಪ್ಪಿನಿಂದ ರುಚಿಯಾದ ದ್ದಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರ ಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.
- Psalm 119:86 ಕೀರ್ತನೆಗಳು 119:86ನಿನ್ನ ಆಜ್ಞೆಗಳೆಲ್ಲಾ ನಂಬಿ ಕೆಯುಳ್ಳವುಗಳು; ನನ್ನನ್ನು ಅನ್ಯಾಯವಾಗಿ ಹಿಂಸಿ ಸುತ್ತಾರೆ. ನನಗೆ ಸಹಾಯಮಾಡು.
- Psalm 40:9–10 ಕೀರ್ತನೆಗಳು 40:9–10ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ. ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- Psalm 119:13 ಕೀರ್ತನೆಗಳು 119:13ನನ್ನ ತುಟಿಗಳಿಂದ ನಿನ್ನ ನ್ಯಾಯವಿಧಿಗಳನ್ನೆಲ್ಲಾ ಸಾರಿದ್ದೇನೆ.