Psalms · chapter 12 · verse 4
Psalm 12:4 in Kannada
ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ.
Avaru--namma naaligeyinda naavu balagolluvevu; namma tutigalu nammave; namage prabhuvu yaaru annuttaare.
Psalm 12:4 in English
- King James Version (KJV)
- Who have said, With our tongue will we prevail; our lips [are] our own: who [is] lord over us?
- World English Bible (WEB)
- who have said, “With our tongue we will prevail. Our lips are our own. Who is lord over us?”
- American Standard Version (ASV)
- Who have said, With our tongue will we prevail; Our lips are our own: who is lord over us?
- Bible in Basic English (BBE)
- They have said, With our tongues will we overcome; our lips are ours: who is lord over us?
- Darby Translation (DBY)
- Who have said, With our tongue will we prevail, our lips are our own: who [is] lord over us?
- Webster's Bible (WBS)
- Who have said, With our tongue will we prevail; our lips [are] our own: who [is] lord over us?
- Young's Literal Translation (YLT)
- Who said, 'By our tongue we do mightily: Our lips [are] our own; who [is] lord over us?'
Read in context
- 2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- 3ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು.
- 4ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ.
- 5ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- 6ಕರ್ತನ ವಾಕ್ಯಗಳು ಶುದ್ಧವಾಕ್ಯಗಳಾಗಿವೆ: ಮಣ್ಣಿನ ಕುಲುಮೆಯಲ್ಲಿ ಏಳು ಸಾರಿ ಕರಗಿ ಪುಟಕ್ಕೆ ಹಾಕಿದ ಬೆಳ್ಳಿಯಂತೆ ಇವೆ.
Cross references
- James 3:5–6 ಯಾಕೋಬನು 3:5–6ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ. ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ.
- Exodus 5:2 ವಿಮೋಚನಕಾಂಡ 5:2ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.
- 2 Thessalonians 2:4 2 ಥೆಸಲೊನೀಕದವರಿಗೆ 2:4ಅವನು ದೇವರೆಂದು ಕರೆಯ ಲ್ಪಟ್ಟಾತನನ್ನು ಇಲ್ಲವೆ ಆರಾಧನೆ ಹೊಂದುವಾತನನ್ನು ವಿರೋಧಿಸಿ ಎಲ್ಲವುಗಳ ಮೇಲೆ ತನ್ನನ್ನು ತಾನೇ ಘನತೆಗೇರಿಸಿಕೊಂಡು ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ.
- Job 21:14–15 ಯೋಬನು 21:14–15ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ. ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
- Jeremiah 18:18 ಯೆರೆಮೀಯ 18:18ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು.
- Daniel 3:15 ದಾನಿಯೇಲನು 3:15ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.
- Jeremiah 2:31 ಯೆರೆಮೀಯ 2:31ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
- Genesis 3:5 ಆದಿಕಾಂಡ 3:5ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು.