Psalms · chapter 135 · verse 9
Psalm 135:9 in Kannada
ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
Aiguptave, ninna madhyadalli soochaka kaaryagalannoo adbhutakaaryagalannoo pharohanigoo avana sakala sevakarigoo virodhavaagi kaluhisidanu.
Psalm 135:9 in English
- King James Version (KJV)
- [Who] sent tokens and wonders into the midst of thee, O Egypt, upon Pharaoh, and upon all his servants.
- World English Bible (WEB)
- He sent signs and wonders into the middle of you, Egypt, on Pharaoh, and on all his servants.
- American Standard Version (ASV)
- Who sent signs and wonders into the midst of thee, O Egypt, Upon Pharaoh, and upon all his servants;
- Bible in Basic English (BBE)
- He sent signs and wonders among you, O Egypt, on Pharaoh, and on all his servants.
- Darby Translation (DBY)
- Who sent signs and miracles into the midst of thee, O Egypt, upon Pharaoh and upon all his servants;
- Webster's Bible (WBS)
- [Who] sent tokens and wonders into the midst of thee, O Egypt, upon Pharaoh, and upon all his servants.
- Young's Literal Translation (YLT)
- He sent tokens and wonders into thy midst, O Egypt, On Pharaoh and on all his servants.
Read in context
- 7ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
- 8ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು.
- 9ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
- 10ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು.
- 11ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.
Cross references
- Psalm 136:15 ಕೀರ್ತನೆಗಳು 136:15ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Deuteronomy 6:22 ಧರ್ಮೋಪದೇಶಕಾಂಡ 6:22ಕರ್ತನು ನಮ್ಮ ಕಣ್ಣುಗಳ ಮುಂದೆ ಐಗುಪ್ತದಲ್ಲಿ ಫರೋಹನ ಮೇಲೆಯೂ ಅವನ ಎಲ್ಲಾ ಮನೆಯವರ ಮೇಲೆಯೂ ಬಹು ಕಠಿಣವಾದ ಬಾಧೆಗಳಿಂದ ಅದ್ಭುತ ಗಳನ್ನೂ ಸೂಚನೆಗಳನ್ನೂ ತೋರಿಸಿದನು.
- Psalm 78:43–50 ಕೀರ್ತನೆಗಳು 78:43–50ಐಗುಪ್ತದಲ್ಲಿ ಆದ ಸೂಚಕ ಕಾರ್ಯಗಳನ್ನೂ ಸೋನ್ ಬೈಲಿನಲ್ಲಿ ನಡಿಸಿದ ಅದ್ಭುತ ಗಳನ್ನೂ ಮಾಡಿದ ದಿವಸವನ್ನೂ ಆತನ ಕೈಯನ್ನೂ ಅವರು ಜ್ಞಾಪಕಮಾಡಿಕೊಳ್ಳಲಿಲ್ಲ. ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು. ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು. ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು. ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು. ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ
- Exodus 7:1–15 ವಿಮೋಚನಕಾಂಡ 7:1–15ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ. ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಮಾತನಾಡಬೇಕು; ಇಸ್ರಾಯೇಲ್ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು. ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ ನನ್ನ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಐಗುಪ್ತದೇಶದಲ್ಲಿ ಹೆಚ್ಚಿಸುವೆನು. ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು. ನಾನು ಐಗುಪ್ತದ ಮೇಲೆ ನನ್ನ ಕೈಯನ್ನಿಟ್ಟು ಅವರೊಳ ಗಿಂದ ಇಸ್ರಾಯೇಲ್ ಮಕ್ಕಳನ್ನು ಹೊರಗೆ ಬರಮಾಡಿ ದಾಗ ನಾನೇ ಕರ್ತನೆಂದು ಐಗುಪ್ತ್ಯರಿಗೆ ತಿಳಿದು ಬರುವದು ಎಂದು ಹೇಳಿದನು. ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು. ಅವರು ಫರೋಹನ ಮುಂದೆ ಮಾತನಾಡು ವಾಗ ಮೋಶೆಯು ಎಂಭತ್ತು ವರುಷದವನಾಗಿದ್ದನು, ಆರೋನನು ಎಂಭತ್ತುಮೂರು ವರುಷದವನಾಗಿದ್ದನು. ಆಗ ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ-- ಫರೋಹನು ನಿಮಗೆ--ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರೆಂದು ಹೇಳುವಾಗ ಮೋಶೆ ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಫರೋಹನ ಮುಂದೆ ಬಿಸಾಡು ಎಂದು ಹೇಳಬೇಕು; ಆಗ ಅದು ಸರ್ಪವಾಗುವದು ಎಂದು ಹೇಳಿದನು. ಮೋಶೆ ಆರೋನರೂ ಫರೋಹನ ಬಳಿಗೆ ಹೋಗಿ ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮುಂದೆಯೂ ಅವನ ಸೇವಕರ ಮುಂದೆಯೂ ಬಿಸಾಡಿ ದಾಗ ಅದು ಸರ್ಪವಾಯಿತು. ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು. ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ. ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು. ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು
- Acts 7:36 ಅಪೊಸ್ತಲರ ಕೃತ್ಯಗಳು 7:36ಅವನು ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರ ದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತ ಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದ ಮೇಲೆ ಅವರನ್ನು ನಡೆಸಿಕೊಂಡು ಬಂದನು.
- Isaiah 51:9–10 ಯೆಶಾಯ 51:9–10ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ? ಸಮುದ್ರವನ್ನೂ ದೊಡ್ಡ ಅಗಾಧದ ನೀರನ್ನು ಬತ್ತಿಸಿ, ವಿಮುಕ್ತರಾದವರು ಹಾದು ಹೋಗುವದಕ್ಕೆ ಸಮು ದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
- Deuteronomy 4:34 ಧರ್ಮೋಪದೇಶಕಾಂಡ 4:34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?
- Jeremiah 32:20–21 ಯೆರೆಮೀಯ 32:20–21ನೀನು ಈ ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ. ನಿನ್ನ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ ಲಕ್ಷಣಗಳಿಂ ದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಮಹಾಭಯದಿಂದಲೂ ಐಗುಪ್ತದೇಶದೊಳ ಗಿಂದ ಹೊರಗೆ ತಂದಿದ್ದೀ.
- Nehemiah 9:10 ನೆಹೆಮೀಯ 9:10ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
- Psalm 105:27–29 ಕೀರ್ತನೆಗಳು 105:27–29ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು. ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ. ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು.