Psalms · chapter 139 · verse 4
Psalm 139:4 in Kannada
ಇಗೋ, ಓ ಕರ್ತನೇ, ನನ್ನ ನಾಲಿಗೆಯಲ್ಲಿ ನಿನಗೆ ತಿಳಿಯದ ಮಾತು ಒಂದಾದರೂ ಇಲ್ಲ.
Igo, o kartane, nanna naaligeyalli ninage tiliyada maatu ondaadaroo illa.
Psalm 139:4 in English
- King James Version (KJV)
- For [there is] not a word in my tongue, [but], lo, O LORD, thou knowest it altogether.
- World English Bible (WEB)
- For there is not a word on my tongue, but behold, LORD, you know it altogether.
- American Standard Version (ASV)
- For there is not a word in my tongue, But, lo, O Jehovah, thou knowest it altogether.
- Bible in Basic English (BBE)
- For there is not a word on my tongue which is not clear to you, O Lord.
- Darby Translation (DBY)
- For there is not yet a word on my tongue, [but] lo, O Jehovah, thou knowest it altogether.
- Webster's Bible (WBS)
- For [there is] not a word on my tongue, [but] lo, O LORD, thou knowest it altogether.
- Young's Literal Translation (YLT)
- For there is not a word in my tongue, Lo, O Jehovah, Thou hast known it all!
Read in context
- 2ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ;
- 3ನಾನು ನಡೆಯುವದನ್ನೂ ಮಲಗುವದನ್ನೂ ನೀನು ಶೋಧಿಸಿದ್ದೀ; ನನ್ನ ಮಾರ್ಗಗಳೆಲ್ಲಾ ನಿನಗೆ ಗೊತ್ತಾಗಿವೆ.
- 4ಇಗೋ, ಓ ಕರ್ತನೇ, ನನ್ನ ನಾಲಿಗೆಯಲ್ಲಿ ನಿನಗೆ ತಿಳಿಯದ ಮಾತು ಒಂದಾದರೂ ಇಲ್ಲ.
- 5ನೀನು ಹಿಂದೆಯೂ ಮುಂದೆಯೂ ನನ್ನನ್ನು ಸುತ್ತಿಕೊಂಡು ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದೀ.
- 6ಇಂಥ ತಿಳುವಳಿಕೆಯು ನನಗೆ ಅತಿ ಅದ್ಭುತವಾಗಿದೆ; ಅದು ನನಗೆ ನಿಲುಕದಷ್ಟು ಉನ್ನತವಾಗಿದೆ.
Cross references
- Hebrews 4:12–13 ಇಬ್ರಿಯರಿಗೆ 4:12–13ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
- Psalm 19:14 ಕೀರ್ತನೆಗಳು 19:14ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.
- Psalm 50:19–21 ಕೀರ್ತನೆಗಳು 50:19–21ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ. ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
- Job 42:3 ಯೋಬನು 42:3ಆಲೋಚನೆಯನ್ನು ತಿಳುವಳಿಕೆ ಇಲ್ಲದೆ ಮರೆಮಾಡುವವನಾರು? ಆದದರಿಂದ ನಾನು ಗ್ರಹಿ ಸದೆ ಇದ್ದವುಗಳನ್ನು ನಾನು ತಿಳಿಯದಂಥ, ನನಗೆ ಆಶ್ಚರ್ಯವಾದವುಗಳನ್ನು ಉಚ್ಚರಿಸಿದೆನು.
- Matthew 12:35–37 ಮತ್ತಾಯನು 12:35–37ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ. ಆದರೆ ನಾನು ನಿಮಗೆ ಹೇಳುವದೇನಂದರೆ-- ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು. ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯಾಗುವಿ ಎಂದು ಹೇಳಿದನು.
- Job 42:6–8 ಯೋಬನು 42:6–8ಆದದರಿಂದ ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು. ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ. ಹಾಗಾದರೆ ಈಗ ಏಳು ಎತ್ತುಗಳೂ ಏಳು ಹೋತಗಳೂ ನಿಮ ಗೋಸ್ಕರ ತಕ್ಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಬನ್ನಿರಿ; ಅವುಗಳನ್ನು ನಿಮಗೋಸ್ಕರ ದಹನ ಬಲಿಯಾಗಿ ಅರ್ಪಿಸಿರಿ; ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥನೆ ಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ಮಾಡದ ಹಾಗೆ ಅವನ ಪ್ರಾರ್ಥನೆಯನ್ನು ಅಂಗೀಕರಿಸುವೆನು. ಯಾಕಂ ದರೆ ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾ ಡಲಿಲ್ಲ.
- Jeremiah 29:23 ಯೆರೆಮೀಯ 29:23ಅವರು ತಮ್ಮ ನೆರೆಯವರ ಹೆಂಡತಿಯರ ಸಂಗಡ ವ್ಯಭಿಚಾರ ಮಾಡಿ ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ ಇಸ್ರಾಯೇಲಿನಲ್ಲಿ ನೀಚತನವನ್ನು ನಡಿಸಿದರು; ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- James 1:26 ಯಾಕೋಬನು 1:26ನಿಮ್ಮಲ್ಲಿ ಭಕ್ತನೆಂದೆ ಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನ ವಾಗಿದೆ.ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆ ಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.
- Malachi 3:13–16 ಮಲಾಕಿಯ 3:13–16ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ. ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ. ಈಗ ನಾವು ಗರ್ವಿಷ್ಠ ರನ್ನು ಭಾಗ್ಯವಂತರೆಂದನ್ನುತ್ತೇವೆ; ಹೌದು, ದುಷ್ಟತ್ವ ಮಾಡುವವರು ಅಭಿವೃದ್ಧಿಯಾಗುತ್ತಾರೆ; ಹೌದು, ದೇವರನ್ನು ಪರೀಕ್ಷಿಸುವವರೇ ರಕ್ಷಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದೀರಿ. ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು.
- James 3:2–10 ಯಾಕೋಬನು 3:2–10ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. ಇಗೋ, ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವು ಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ. ಹಡಗುಗಳನ್ನು ಸಹ ನೋಡಿರಿ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿ ಕೊಂಡು ಹೋಗುತ್ತವೆ. ಆದಾಗ್ಯೂ ಬಹು ಸಣ ಚುಕಾಣಿಯಿಂದ ಅವುಗಳನ್ನು ನಡಿಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ. ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ. ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ. ಮನುಷ್ಯ ಜಾತಿಯು ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು. ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋ ಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾ ಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ. ಅದೇ ನಾಲಿಗೆಯಿಂದ ತಂದೆಯಾದ ದೇವರನ್ನು ಕೊಂಡಾಡುತ್ತೇವೆ; ಆದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ. ಅದೇ ಬಾಯಿಂದ ಆಶೀರ್ವಾದ ಮತ್ತು ಶಾಪ ಬರುತ್ತವೆ; ನನ್ನ ಸಹೋದರರೇ, ಇವುಗಳು ಹೀಗಿರಬಾರದು.
- Job 8:2 ಯೋಬನು 8:2ಎಷ್ಟರ ವರೆಗೆ ನೀನು ಇವುಗಳನ್ನು ನುಡಿಯುವಿ? ಎಷ್ಟರ ವರೆಗೆ ನಿನ್ನ ಬಾಯಿಯ ಮಾತುಗಳು ಬಿರುಗಾಳಿಯಂತಿರುವವು?
- Job 38:2 ಯೋಬನು 38:2ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?