Psalms · chapter 143 · verse 3
Psalm 143:3 in Kannada
ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ.
Shatruvu nanna praanavannu hinsisi nanna jeevavannu nelakke jajji bahukaalada hinde sattavara haage, kattaleyalli naanu vaasisuvante maadiddaane.
Psalm 143:3 in English
- King James Version (KJV)
- For the enemy hath persecuted my soul; he hath smitten my life down to the ground; he hath made me to dwell in darkness, as those that have been long dead.
- World English Bible (WEB)
- For the enemy pursues my soul. He has struck my life down to the ground. He has made me live in dark places, as those who have been long dead.
- American Standard Version (ASV)
- For the enemy hath persecuted my soul; He hath smitten my life down to the ground: He hath made me to dwell in dark places, as those that have been long dead.
- Bible in Basic English (BBE)
- The evil man has gone after my soul; my life is crushed down to the earth: he has put me in the dark, like those who have long been dead.
- Darby Translation (DBY)
- For the enemy persecuteth my soul: he hath crushed my life down to the earth; he hath made me to dwell in dark places, as those that have been long dead.
- Webster's Bible (WBS)
- For the enemy hath persecuted my soul; he hath smitten my life down to the ground; he hath made me to dwell in darkness, as those that have been long dead.
- Young's Literal Translation (YLT)
- For an enemy hath pursued my soul, He hath bruised to the earth my life, He hath caused me to dwell in dark places, As the dead of old.
Read in context
- 1ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ವಿಜ್ಞಾಪನೆಗಳಿಗೆ ಕಿವಿ ಗೊಡು; ನಿನ್ನ ನಂಬಿಗಸ್ತಿಕೆಯಲ್ಲಿಯೂ ನೀತಿಯಲ್ಲಿಯೂ ನನಗೆ ಉತ್ತರಕೊಡು.
- 2ನಿನ್ನ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡ; ಜೀವಿತರಲ್ಲಿ ಒಬ್ಬನಾದರೂ ನಿನ್ನ ಮುಂದೆ ನೀತಿವಂತನಾಗುವದಿಲ್ಲ.
- 3ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ.
- 4ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
- 5ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.
Cross references
- Lamentations 3:6 ಪ್ರಲಾಪಗಳು 3:6ಆತನು ನನ್ನನ್ನು ಬಹು ಕಾಲದ ಹಿಂದೆ ಸತ್ತವರ ಹಾಗೆ ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾನೆ.
- Psalm 7:1–2 ಕೀರ್ತನೆಗಳು 7:1–2ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು; ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
- Psalm 7:5 ಕೀರ್ತನೆಗಳು 7:5ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ.
- 2 Samuel 2:22 2 ಸಮುವೇಲನು 2:22ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು.
- Psalm 88:4–6 ಕೀರ್ತನೆಗಳು 88:4–6ಕುಣಿಗೆ ಇಳಿಯುವವರ ಸಂಗಡ ಎಣಿಸಲ್ಪಟ್ಟಿದ್ದೇನೆ; ಬಲವಿಲ್ಲದ ಮನುಷ್ಯನ ಹಾಗಿದ್ದೇನೆ. ಕೊಲ್ಲಲ್ಪಟ್ಟು ಸಮಾಧಿಯಲ್ಲಿ ಮಲಗಿರುವವರನ್ನು ನೀನು ಇನ್ನು ಜ್ಞಾಪಕಮಾಡಿಕೊಳ್ಳದ ಹಾಗೆ ಸತ್ತವ ರಲ್ಲಿ ಬಿಡಲ್ಪಟ್ಟಿದ್ದೇನೆ; ಅವರು ನಿನ್ನ ಕೈಯಿಂದ ಕಡಿ ಯಲ್ಪಟ್ಟಿದ್ದಾರೆ. ಕೆಳಗಿನ ಆಳವಾದ ಕುಣಿಯಲ್ಲಿಯೂ ಕತ್ತಲೆಯಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದಿ.
- Psalm 142:6 ಕೀರ್ತನೆಗಳು 142:6ನನ್ನ ಕೂಗನ್ನು ಆಲೈಸು; ನಾನು ಬಹಳ ಕುಂದಿ ಹೋಗಿದ್ದೇನೆ. ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸು; ಅವರು ನನಗಿಂತ ಬಲವುಳ್ಳವರಾಗಿದ್ದಾರೆ.ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ.
- Psalm 17:9–13 ಕೀರ್ತನೆಗಳು 17:9–13ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು, ನನ್ನನ್ನು ಬಾಧಿ ಸುವ ದುಷ್ಟರಿಗೂ ನನ್ನನ್ನು ಸುತ್ತಿಕೊಳ್ಳುವ ಪ್ರಾಣ ಶತ್ರುಗಳಿಗೂ ಸಿಕ್ಕದಂತೆ ತಪ್ಪಿಸುವಿ. ಅವರು ತಮ್ಮ ಕೊಬ್ಬಿನಿಂದ ಸೊಕ್ಕೇರಿದ್ದಾರೆ; ತಮ್ಮ ಗರ್ವದ ಬಾಯಿ ಯಿಂದ ಮಾತನಾಡುತ್ತಾರೆ. ನಮ್ಮ ಹೆಜ್ಜೆಗಳಲ್ಲಿ ಈಗ ನಮ್ಮನ್ನು ಸುತ್ತಿಕೊಂಡಿದ್ದಾರೆ; ತಮ್ಮ ದೃಷ್ಟಿಯನ್ನು ಭೂಮಿಯ ಮೇಲೆ ಇಡುತ್ತಾರೆ. ಅವನು ತನ್ನ ಬೇಟೆಯ ದುರಾಶೆಯಿಂದಿರುವ ಸಿಂಹದ ಹಾಗೆಯೂ ಗುಪ್ತವಾದ ಸ್ಥಳಗಳಲ್ಲಿ ಹೊಂಚು ಹಾಕಿರುವ ಸಿಂಹದ ಮರಿಯ ಹಾಗೆಯೂ ಇದ್ದಾನೆ. ಓ ಕರ್ತನೇ, ಎದ್ದು ಅವನನ್ನು ನಿರಾಶೆಗೊಳಿಸಿ ಕೆಡವಿಬಿಡು. ದುಷ್ಟರ ಕೈಯೊಳಗಿಂದ ನಿನ್ನ ಕತ್ತಿಯ ಮೂಲಕ ನನ್ನನ್ನು ರಕ್ಷಿಸು.
- Psalm 54:3 ಕೀರ್ತನೆಗಳು 54:3ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.
- 2 Samuel 18:11 2 ಸಮುವೇಲನು 18:11ಅದಕ್ಕೆ ಯೋವಾ ಬನು ಅವನಿಗೆ--ಇಗೋ, ನೀನು ನೋಡಿ ಅವನನ್ನು ಯಾಕೆ ಅಲ್ಲಿ ನೆಲಕ್ಕೆ ಹೊಡೆದು ಬಿಡಲಿಲ್ಲ? ನಾನು ನಿನಗೆ ಹತ್ತು ಶೇಕೆಲ್ ಬೆಳ್ಳಿಯನ್ನೂ ಒಂದು ನಡು ಕಟ್ಟನ್ನೂ ಕೊಡುತ್ತಿದ್ದೆನು ಅಂದನು.
- Psalm 35:4 ಕೀರ್ತನೆಗಳು 35:4ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
- Ezekiel 37:11 ಯೆಹೆಜ್ಕೇಲನು 37:11ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ; ಇಗೋ, ನಮ್ಮ ಎಲುಬುಗಳು ಒಣಗಿಸಲ್ಪಟ್ಟಿವೆ ಮತ್ತು ನಮ್ಮ ನಿರೀಕ್ಷೆಯು ಕಳೆದುಹೋಗಿದೆ; ನಾವು ಶುದ್ಧವಾಗಿ ನಮ್ಮ ಭಾಗಗಳನ್ನು ಕತ್ತರಿಸಿಕೊಂಡಿದ್ದೇವೆ ಎಂದು ಅವರು ಹೇಳುವರು.
- Psalm 31:12–13 ಕೀರ್ತನೆಗಳು 31:12–13ಸತ್ತವನ ಹಾಗೆ ಮನಸ್ಸಿನೊಳಗಿಂದ ಮರೆತು ಬಿಡಲ್ಪಟ್ಟಿದ್ದೇನೆ; ನಾನು ಒಡೆದ ಬೋಕಿಯ ಹಾಗೆ ಇದ್ದೆನೆ. ನಾನು ಅನೇಕರ ಚಾಡಿಯನ್ನು ಕೇಳಿದ್ದೇನೆ; ಸುತ್ತಲೂ ಭಯ ಅದೆ; ನನಗೆ ವಿರೋಧ ವಾಗಿ ಆಲೋಚನೆ ಮಾಡಿ ನನ್ನ ಪ್ರಾಣ ತೆಗೆದು ಕೊಳ್ಳುವದಕ್ಕೆ ಅವರು ಯೋಚಿಸುತ್ತಾರೆ.