Psalms · chapter 145 · verse 8
Psalm 145:8 in Kannada
ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
Kartanu krupaaluvoo antahkaranavoo deerghashaantiyoo mahaakaruneyullavanoo aagiddaane.
Psalm 145:8 in English
- King James Version (KJV)
- The LORD [is] gracious, and full of compassion; slow to anger, and of great mercy.
- World English Bible (WEB)
- The LORD is gracious, merciful, slow to anger, and of great loving kindness.
- American Standard Version (ASV)
- Jehovah is gracious, and merciful; Slow to anger, and of great lovingkindness.
- Bible in Basic English (BBE)
- The Lord is full of grace and pity; not quickly angry, but great in mercy.
- Darby Translation (DBY)
- Jehovah is gracious and merciful; slow to anger, and of great loving-kindness.
- Webster's Bible (WBS)
- The LORD [is] gracious, and full of compassion; slow to anger, and of great mercy.
- Young's Literal Translation (YLT)
- Gracious and merciful [is] Jehovah, Slow to anger, and great in kindness.
Read in context
- 6ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
- 7ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
- 8ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
- 9ಕರ್ತನು ಸರ್ವರಿಗೂ ಒಳ್ಳೆಯವನು; ಆತನ ಅಂತಃಕರಣವು ಆತನ ಎಲ್ಲಾ ಕೆಲಸಗಳ ಮೇಲೆ ಅದೆ.
- 10ಓ ಕರ್ತನೇ, ನಿನ್ನ ಕೆಲಸಗಳೆಲ್ಲಾ ನಿನ್ನನ್ನು ಕೊಂಡಾಡುವವು; ನಿನ್ನ ಪರಿಶುದ್ಧರು ನಿನ್ನನ್ನು ಸ್ತುತಿಸುವರು.
Cross references
- Numbers 14:18 ಅರಣ್ಯಕಾಂಡ 14:18ಕರ್ತನು ದೀರ್ಘಶಾಂತನೂ ಮಹಾಕೃಪೆಯುಳ್ಳವನೂ ಅಕ್ರಮವನ್ನೂ ದ್ರೋಹವನ್ನೂ ಮನ್ನಿಸುವಾತನೂ ಅಪರಾಧಿಯನ್ನು ನಿರಪರಾಧಿಯೆಂದು ಎಣಿಸದವನೂ ಮೂರನೇ ನಾಲ್ಕನೇ ತಲೆಗಳ ವರೆಗೂ ಪಿತೃಗಳ ಅಕ್ರಮವನ್ನು ಮಕ್ಕಳಲ್ಲಿ ವಿಚಾರಿಸುವಾತನೂ ಎಂದು ನೀನು ಹೇಳಿದ್ದೀಯಲ್ಲಾ?
- Psalm 103:8 ಕೀರ್ತನೆಗಳು 103:8ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.
- Psalm 86:5 ಕೀರ್ತನೆಗಳು 86:5ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
- Psalm 116:5 ಕೀರ್ತನೆಗಳು 116:5ಕರ್ತನು ಕೃಪೆಯೂ ನೀತಿಯೂ ಉಳ್ಳವನು; ಹೌದು, ನಮ್ಮ ದೇವರು ಅಂತಃಕರಣವುಳ್ಳವನು.
- Psalm 100:5 ಕೀರ್ತನೆಗಳು 100:5ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.
- Romans 5:20–21 ರೋಮಾಪುರದವರಿಗೆ 5:20–21ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು. ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
- Micah 7:18–20 ಮೀಕ 7:18–20ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ. ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Exodus 34:6–7 ವಿಮೋಚನಕಾಂಡ 34:6–7ಕರ್ತನು ಅವನೆದುರಿಗೆ ಹಾದು ಹೋಗುತ್ತಾ--ಕರ್ತನು, ಕರ್ತನಾದ ದೇವರು, ಕರುಣಾಳುವೂ ಕೃಪಾಳುವೂ ದೀರ್ಘಶಾಂತನೂ ಒಳ್ಳೇತನದಲ್ಲಿ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ ಸಾವಿರ (ತಲೆಗಳ) ವರೆಗೂ ಕರುಣೆ ತೋರಿಸುವಾತನೂ ದೋಷಾಪರಾಧ ವನ್ನೂ ಪಾಪವನ್ನೂ ಕ್ಷಮಿಸುವಾತನೂ ಅಪರಾಧಿ ಯನ್ನು ನಿರಪರಾಧಿಯೆಂದು ಎಣಿಸದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆ ಗಳವರೆಗೂ ವಿಚಾರಿಸುವಾತನೂ ಎಂದು ಪ್ರಕಟಿಸಿ ಕೊಂಡನು.
- Ephesians 2:4 ಎಫೆಸದವರಿಗೆ 2:4ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ
- Ephesians 1:8 ಎಫೆಸದವರಿಗೆ 1:8ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
- Jonah 4:2 ಯೋನ 4:2ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು.