Psalms · chapter 145 · verse 6
Psalm 145:6 in Kannada
ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
Ninna bhayankaravaada traanada vishaya vaagiyoo avaru heluvaru; ninna mahatvavannu naanu saaruvenu.
Psalm 145:6 in English
- King James Version (KJV)
- And [men] shall speak of the might of thy terrible acts: and I will declare thy greatness.
- World English Bible (WEB)
- Men will speak of the might of your awesome acts. I will declare your greatness.
- American Standard Version (ASV)
- And men shall speak of the might of thy terrible acts; And I will declare thy greatness.
- Bible in Basic English (BBE)
- Men will be talking of the power and fear of your acts; I will give word of your glory.
- Darby Translation (DBY)
- And they shall tell of the might of thy terrible acts; and thy great deeds will I declare.
- Webster's Bible (WBS)
- And [men] shall speak of the might of thy terrible acts: and I will declare thy greatness.
- Young's Literal Translation (YLT)
- And the strength of Thy fearful acts they tell, And Thy greatness I recount.
Read in context
- 4ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
- 5ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
- 6ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
- 7ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
- 8ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
Cross references
- Habakkuk 2:14 ಹಬಕ್ಕೂಕ 2:14ನೀರುಗಳು ಸಮುದ್ರವನ್ನು ಮುಚ್ಚುವ ಪ್ರಕಾರ ಭೂಮಿಯು ಕರ್ತನ ಮಹಿಮೆಯ ತಿಳುವಳಿಕೆಯಿಂದ ತುಂಬಿರುವದು.
- Daniel 3:28–29 ದಾನಿಯೇಲನು 3:28–29ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ--ಶದ್ರಕ್ ಮೇಷಕ್ ಅಬೇದ್ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ. ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
- Psalm 107:31–32 ಕೀರ್ತನೆಗಳು 107:31–32ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ. ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ.
- Psalm 22:31 ಕೀರ್ತನೆಗಳು 22:31ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.
- Psalm 113:3 ಕೀರ್ತನೆಗಳು 113:3ಸೂರ್ಯೋದಯ ದಿಂದ ಅದರ ಅಸ್ತಮಾನದ ವರೆಗೂ ಕರ್ತನ ಹೆಸರು ಸ್ತುತಿಸಲ್ಪಡತಕ್ಕದ್ದು.
- Psalm 22:27 ಕೀರ್ತನೆಗಳು 22:27ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
- Psalm 126:2–3 ಕೀರ್ತನೆಗಳು 126:2–3ಆಗ ನಮ್ಮ ಬಾಯಿ ನಗೆಯಿಂದಲೂ ನಾಲಿಗೆ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಅನ್ಯಜನರು--ಕರ್ತನು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿದರು. ಕರ್ತನು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ; ಆದಕಾರಣ ನಾವು ಸಂತೋಷಿಸುತ್ತಾ ಇದ್ದೇವೆ.
- Jeremiah 50:28 ಯೆರೆಮೀಯ 50:28ಅವರು ಚೀಯೋನಿನಲ್ಲಿ ನಮ್ಮ ದೇವರಾದ ಕರ್ತನ ಪ್ರತಿದಂಡನೆಯನ್ನೂ ಆತನ ಆಲಯದ ಪ್ರತಿ ದಂಡನೆ ಯನ್ನೂ ತಿಳಿಸುತ್ತಾ, ಬಾಬೆಲಿನ ದೇಶದಿಂದ ತಪ್ಪಿಸಿ ಕೊಂಡು ಓಡಿ ಹೋಗುವವರ ಸ್ವರವು!
- Psalm 92:1–2 ಕೀರ್ತನೆಗಳು 92:1–2ಕರ್ತನನ್ನು ಕೊಂಡಾಡುವದೂ; ಮಹೋನ್ನತನೇ, ನಿನ್ನ ಹೆಸರನ್ನು ಕೀರ್ತಿಸುವದೂ ಬೆಳಿಗ್ಗೆ ನಿನ್ನ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ಯಲ್ಲಿ ನಿನ್ನ ನಂಬಿಗಸ್ತಿಕೆಯನ್ನೂ
- Psalm 66:3 ಕೀರ್ತನೆಗಳು 66:3ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
- Psalm 22:22–23 ಕೀರ್ತನೆಗಳು 22:22–23ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ.
- Daniel 6:25–27 ದಾನಿಯೇಲನು 6:25–27ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ. ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು. ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.