Psalms · chapter 146 · verse 4
Psalm 146:4 in Kannada
ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ.
Avana usiru hogalu avanu mannige hintiruguvanu; ade dinadalli avana sankalpa galellaa naashavaaguttave.
Psalm 146:4 in English
- King James Version (KJV)
- His breath goeth forth, he returneth to his earth; in that very day his thoughts perish.
- World English Bible (WEB)
- His spirit departs, and he returns to the earth. In that very day, his thoughts perish.
- American Standard Version (ASV)
- His breath goeth forth, he returneth to his earth; In that very day his thoughts perish.
- Bible in Basic English (BBE)
- Man's breath goes out, he is turned back again to dust; in that day all his purposes come to an end.
- Darby Translation (DBY)
- His breath goeth forth, he returneth to his earth; in that very day his purposes perish.
- Webster's Bible (WBS)
- His breath goeth forth, he returneth to his earth; in that very day his thoughts perish.
- Young's Literal Translation (YLT)
- His spirit goeth forth, he returneth to his earth, In that day have his thoughts perished.
Read in context
- 2ನನ್ನ ಪ್ರಾಣವಿರುವ ವರೆಗೂ ಕರ್ತನನ್ನು ಸ್ತುತಿಸುವೆನು; ನನ್ನ ಜೀವಮಾನವೆಲ್ಲಾ ನನ್ನ ದೇವರನ್ನು ಕೀರ್ತಿ ಸುವೆನು.
- 3ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ;
- 4ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ.
- 5ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.
- 6ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.
Cross references
- Ecclesiastes 12:7 ಪ್ರಸಂಗಿ 12:7ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗು ವದು.
- Psalm 104:29 ಕೀರ್ತನೆಗಳು 104:29ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ.
- Genesis 2:7 ಆದಿಕಾಂಡ 2:7ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.
- Genesis 3:19 ಆದಿಕಾಂಡ 3:19ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.
- 1 Corinthians 2:6 1 ಕೊರಿಂಥದವರಿಗೆ 2:6ಆದರೂ ಪರಿಪೂರ್ಣರಾದವರಲ್ಲಿ ಜ್ಞಾನವನ್ನೇ ನಾವು ಹೇಳುತ್ತೇವೆ; ಆದಾಗ್ಯೂ ಅದು ಇಹಲೋಕದ ಜ್ಞಾನವಲ್ಲ ಇಲ್ಲವೆ ಇಲ್ಲದೆ ಹೋಗುವ ಇಹ ಲೋಕಾಧಿಪತಿಗಳ ಜ್ಞಾನವೂ ಅಲ್ಲ.
- Job 27:3 ಯೋಬನು 27:3ನನ್ನ ಶ್ವಾಸವು ನನ್ನಲ್ಲಿಯೂ ದೇವರ ಆತ್ಮವು ನನ್ನ ಮೂಗಿ ನಲ್ಲಿಯೂ ಇರುವ ಸರ್ವಕಾಲದ ವರೆಗೂ
- Psalm 33:10 ಕೀರ್ತನೆಗಳು 33:10ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ.
- Daniel 5:23 ದಾನಿಯೇಲನು 5:23ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- Job 14:10 ಯೋಬನು 14:10ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು?
- Job 14:21 ಯೋಬನು 14:21ಅವನ ಮಕ್ಕಳು ಘನತೆಗೆ ಬರುತ್ತಾರೆ; ಅದು ಅವನಿಗೆ ತಿಳಿಯುವದಿಲ್ಲ; ಅವರು ಹೀನರಾಗುತ್ತಾರೆ, ಅವನು ಗ್ರಹಿಸಿಕೊಳ್ಳುವದಿಲ್ಲ.ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು.
- Job 17:11 ಯೋಬನು 17:11ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.
- Isaiah 2:22 ಯೆಶಾಯ 2:22ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು?