Psalms · chapter 147 · verse 1
Psalm 147:1 in Kannada
ಕರ್ತನನ್ನು ಸ್ತುತಿಸಿರಿ; ನಮ್ಮ ದೇವರನ್ನು ಕೀರ್ತಿಸುವದು ಒಳ್ಳೇದು; ಸ್ತೋತ್ರವು ರಮ್ಯವೂ ಯೋಗ್ಯವೂ ಆಗಿದೆ.
Kartanannu stutisiri; namma devarannu keertisuvadu olledu; stotravu ramyavoo yogyavoo aagide.
Psalm 147:1 in English
- King James Version (KJV)
- Praise ye the LORD: for [it is] good to sing praises unto our God; for [it is] pleasant; [and] praise is comely.
- World English Bible (WEB)
- Praise the LORD, for it is good to sing praises to our God; for it is pleasant and fitting to praise him.
- American Standard Version (ASV)
- Praise ye Jehovah; For it is good to sing praises unto our God; For it is pleasant, [and] praise is comely.
- Bible in Basic English (BBE)
- Give praise to the Lord; for it is good to make melody to our God; praise is pleasing and beautiful.
- Darby Translation (DBY)
- Praise ye Jah! for it is good. Sing psalms of our God; for it is pleasant: praise is comely.
- Webster's Bible (WBS)
- Praise ye the LORD: for [it is] good to sing praises to our God; for [it is] pleasant; [and] praise is comely.
- Young's Literal Translation (YLT)
- Praise ye Jah! For [it is] good to praise our God, For pleasant — comely [is] praise.
Read in context
- 1ಕರ್ತನನ್ನು ಸ್ತುತಿಸಿರಿ; ನಮ್ಮ ದೇವರನ್ನು ಕೀರ್ತಿಸುವದು ಒಳ್ಳೇದು; ಸ್ತೋತ್ರವು ರಮ್ಯವೂ ಯೋಗ್ಯವೂ ಆಗಿದೆ.
- 2ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
- 3ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
Cross references
- Psalm 135:3 ಕೀರ್ತನೆಗಳು 135:3ಕರ್ತನನ್ನು ಸ್ತುತಿಸಿರಿ; ಕರ್ತನು ಒಳ್ಳೆಯವನು; ಆತನ ಹೆಸರಿಗೆ ಸ್ತುತಿಗಳನ್ನು ಹಾಡಿರಿ; ಅದು ರಮ್ಯ ವಾದದ್ದು.
- Psalm 42:4 ಕೀರ್ತನೆಗಳು 42:4ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.
- Psalm 92:1 ಕೀರ್ತನೆಗಳು 92:1ಕರ್ತನನ್ನು ಕೊಂಡಾಡುವದೂ; ಮಹೋನ್ನತನೇ, ನಿನ್ನ ಹೆಸರನ್ನು ಕೀರ್ತಿಸುವದೂ
- Psalm 33:1 ಕೀರ್ತನೆಗಳು 33:1ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ.
- Revelation 5:9–14 ಪ್ರಕಟನೆ 5:9–14ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ; ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು. ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು. ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು. ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ--ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು. ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- Psalm 63:3–5 ಕೀರ್ತನೆಗಳು 63:3–5ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು. ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು. ನಾನು ರಾತ್ರಿ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುವಾಗ
- Revelation 19:1–6 ಪ್ರಕಟನೆ 19:1–6ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Psalm 122:1–4 ಕೀರ್ತನೆಗಳು 122:1–4ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು. ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ. ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ. ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.