Psalms · chapter 23 · verse 3
Psalm 23:3 in Kannada
ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.
Nanna praanavannu punarjeevisa maaduttaane. Neetiya daarigalalli tanna hesarina nimitta nannannu nadisuttaane.
Psalm 23:3 in English
- King James Version (KJV)
- He restoreth my soul: he leadeth me in the paths of righteousness for his name’s sake.
- World English Bible (WEB)
- He restores my soul. He guides me in the paths of righteousness for his name’s sake.
- American Standard Version (ASV)
- He restoreth my soul: He guideth me in the paths of righteousness for his name’s sake.
- Bible in Basic English (BBE)
- He gives new life to my soul: he is my guide in the ways of righteousness because of his name.
- Darby Translation (DBY)
- He restoreth my soul; he leadeth me in paths of righteousness for his name's sake.
- Webster's Bible (WBS)
- He restoreth my soul: he leadeth me in the paths of righteousness for his name's sake.
- Young's Literal Translation (YLT)
- My soul He refresheth, He leadeth me in paths of righteousness, For His name's sake,
Read in context
- 1ಕರ್ತನು ನನ್ನ ಕುರುಬನು; ಕೊರತೆಪಡೆನು.
- 2ಆತನು ಹಸರುಗಾವಲುಗಳಲ್ಲಿ ನನ್ನನ್ನು ತಂಗುವಂತೆ ಮಾಡುತ್ತಾನೆ. ಶಾಂತವಾದ ನೀರುಗಳ ಪಕ್ಕದಲ್ಲಿ ನನ್ನನ್ನು ನಡಿಸುತ್ತಾನೆ.
- 3ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.
- 4ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
- 5ನನ್ನ ವೈರಿಗಳ ಎದುರಿನಲ್ಲಿ ನನ್ನ ಮುಂದೆ ಮೇಜನ್ನು ಸಿದ್ಧಮಾಡುತ್ತೀ; ನೀನು ನನ್ನ ತಲೆಯನ್ನು ಎಣ್ಣೆಯಿಂದ ಅಭಿಷೇಕಿಸುತ್ತೀ; ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.
Cross references
- Isaiah 42:16 ಯೆಶಾಯ 42:16ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡಿಸುವೆನು; ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವದಿಲ್ಲ.
- Psalm 31:3 ಕೀರ್ತನೆಗಳು 31:3ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.
- Psalm 19:7 ಕೀರ್ತನೆಗಳು 19:7ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
- Psalm 51:10 ಕೀರ್ತನೆಗಳು 51:10ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.
- Psalm 143:8–10 ಕೀರ್ತನೆಗಳು 143:8–10ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ. ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- Psalm 5:8 ಕೀರ್ತನೆಗಳು 5:8ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು.
- Psalm 51:12 ಕೀರ್ತನೆಗಳು 51:12ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.
- Job 33:30 ಯೋಬನು 33:30ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.
- Proverbs 8:20 ಜ್ಞಾನೋಕ್ತಿಗಳು 8:20ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ.
- Proverbs 4:11 ಜ್ಞಾನೋಕ್ತಿಗಳು 4:11ಜ್ಞಾನದ ಮಾರ್ಗದಲ್ಲಿ ನಾನು ನಿನಗೆ ಬೋಧಿಸಿದೆನು; ಸರಿಯಾದ ದಾರಿಗಳಲ್ಲಿ ನಾನು ನಿನ್ನನ್ನು ನಡಿಸಿದೆನು.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Psalm 79:9 ಕೀರ್ತನೆಗಳು 79:9ಓ ನಮ್ಮ ರಕ್ಷಣೆಯ ದೇವರೇ, ನಿನ್ನ ಹೆಸರಿನ ಘನದ ನಿಮಿತ್ತ ನಮಗೆ ಸಹಾಯ ಮಾಡು; ನಿನ್ನ ಹೆಸರಿಗಾಗಿ ನಮ್ಮನ್ನು ಬಿಡಿಸಿ ನಮ್ಮ ಪಾಪಗಳನ್ನು ತೊಳೆದುಬಿಡು.