Psalms · chapter 20 · verse 1
Psalm 20:1 in Kannada
ಕರ್ತನು ಇಕ್ಕಟ್ಟಿನ ದಿವಸದಲ್ಲಿ ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ಹೆಸರು ನಿನ್ನನ್ನು ಕಾಪಾಡಲಿ.
Kartanu ikkattina divasadalli ninna praarthaneyannu kelali; yaakobana devara hesaru ninnannu kaapaadali.
Psalm 20:1 in English
- King James Version (KJV)
- To the chief Musician, A Psalm of David. The LORD hear thee in the day of trouble; the name of the God of Jacob defend thee;
- World English Bible (WEB)
- For the Chief Musician. A Psalm by David. May the LORD answer you in the day of trouble. May the name of the God of Jacob set you up on high,
- American Standard Version (ASV)
- For the Chief Musician. A Psalm of David. Jehovah answer thee in the day of trouble; The name of the God of Jacob set thee up on high;
- Bible in Basic English (BBE)
- To the chief music-maker. A Psalm. Of David. May the Lord give ear to you in the day of trouble; may you be placed on high by the name of the God of Jacob;
- Darby Translation (DBY)
- To the chief Musician. A Psalm of David. Jehovah answer thee in the day of trouble; the name of the God of Jacob protect thee;
- Webster's Bible (WBS)
- To the chief Musician, A Psalm of David. The LORD hear thee in the day of trouble; the name of the God of Jacob defend thee.
- Young's Literal Translation (YLT)
- To the Overseer. — A Psalm of David. Jehovah doth answer thee, In a day of adversity, The name of the God of Jacob doth set thee on high,
Read in context
- 1ಕರ್ತನು ಇಕ್ಕಟ್ಟಿನ ದಿವಸದಲ್ಲಿ ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ಹೆಸರು ನಿನ್ನನ್ನು ಕಾಪಾಡಲಿ.
- 2ಪರಿಶುದ್ಧ ಸ್ಥಳದೊಳಗಿಂದ ನಿನಗೆ ಸಹಾಯ ಕಳುಹಿಸಲಿ; ಚೀಯೋ ನಿನಿಂದ ನಿನ್ನನ್ನು ಬಲಪಡಿಸಲಿ.
- 3ನಿನ್ನ ಅರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿ ನಿನ್ನ ದಹನಬಲಿಯನ್ನು ಅಂಗೀಕರಿಸಲಿ. ಸೆಲಾ.
Cross references
- Proverbs 18:10 ಜ್ಞಾನೋಕ್ತಿಗಳು 18:10ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ.
- Psalm 138:7 ಕೀರ್ತನೆಗಳು 138:7ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ ನೀನು ನನ್ನನ್ನು ಬದುಕಿಸಿ ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈಯನ್ನು ಚಾಚುತ್ತೀ; ನಿನ್ನ ಬಲಗೈ ನನ್ನನ್ನು ರಕ್ಷಿಸುತ್ತದೆ.ಕರ್ತನು ನನಗಿ ರುವದನ್ನು ಸಿದ್ದಿಗೆ ತರುತ್ತಾನೆ; ಕರ್ತನೇ, ನಿನ್ನ ಕೃಪೆಯು ಎಂದೆಂದಿಗೂ ಅದೆ; ನಿನ್ನ ಸ್ವಂತ ಕೈಕೆಲಸಗಳನ್ನು ತೊರೆದುಬಿಡಬೇಡ.
- Psalm 91:14–15 ಕೀರ್ತನೆಗಳು 91:14–15ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು. ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
- Psalm 46:11 ಕೀರ್ತನೆಗಳು 46:11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Isaiah 50:10 ಯೆಶಾಯ 50:10ನಿಮ್ಮೊಳಗೆ ಕರ್ತನಿಗೆ ಭಯಪಟ್ಟು ಆತನ ಸೇವ ಕನ ಸ್ವರವನ್ನು ಕೇಳಿ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆ ಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು ತನ್ನ ದೇವರ ಮೇಲೆ ಆತುಕೊಳ್ಳಲಿ.ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿ ಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವದು ಇದೇ; ನೀವು ದುಃಖದಲ್ಲಿ ಬಿದ್ದುಕೊಂಡಿರುವಿರಿ.
- Hebrews 5:7 ಇಬ್ರಿಯರಿಗೆ 5:7ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು.
- Psalm 46:1 ಕೀರ್ತನೆಗಳು 46:1ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
- Matthew 26:38–39 ಮತ್ತಾಯನು 26:38–39ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು. ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
- Psalm 83:18 ಕೀರ್ತನೆಗಳು 83:18ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
- Jeremiah 30:7 ಯೆರೆಮೀಯ 30:7ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.
- Psalm 60:11 ಕೀರ್ತನೆಗಳು 60:11ಇಕ್ಕಟ್ಟಿನಲ್ಲಿ ನಮಗೆ ಸಹಾಯ ಮಾಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.ದೇವ ರಿಂದ ಪರಾಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
- Psalm 9:10 ಕೀರ್ತನೆಗಳು 9:10ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.