Jeremiah · chapter 30 · verse 7
Jeremiah 30:7 in Kannada
ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.
Ayyo, aa dinavu bhayankaravaadaddu; adaranthaddu yaavadoo illa; adu yaakobanige ikkattina kaalave; aadaagyoo avanu adarinda rakshisalpaduvanu.
Jeremiah 30:7 in English
- King James Version (KJV)
- Alas! for that day [is] great, so that none [is] like it: it [is] even the time of Jacob’s trouble; but he shall be saved out of it.
- World English Bible (WEB)
- Alas, for that day is great, so that none is like it! It is even the time of Jacob’s trouble; but he will be saved out of it.
- American Standard Version (ASV)
- Alas! for that day is great, so that none is like it: it is even the time of Jacob’s trouble; but he shall be saved out of it.
- Bible in Basic English (BBE)
- Ha! for that day is so great that there is no day like it: it is the time of Jacob's trouble: but he will get salvation from it.
- Darby Translation (DBY)
- Alas! for that day is great, so that none is like it: it is even the time of Jacob's trouble; but he shall be saved out of it.
- Webster's Bible (WBS)
- Alas! for that day [is] great, so that none [is] like it: it [is] even the time of Jacob's trouble, but he shall be saved out of it.
- Young's Literal Translation (YLT)
- Woe! for great [is] that day, without any like it, Yea, a time of adversity it [is] to Jacob, Yet out of it he is saved.
Read in context
- 5ಕರ್ತನು ಹೀಗೆ ಹೇಳುತ್ತಾನೆ--ನಾವು ನಡುಗುವಿಕೆಯ ಮತ್ತು ಭಯದ ಸ್ವರವನ್ನು ಕೇಳಿದ್ದೇವೆಯೇ ಹೊರತು ಸಮಾಧಾನದ್ದಲ್ಲ.
- 6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
- 7ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.
- 8ಆ ದಿವಸದಲ್ಲಿ ಆಗುವದೇನಂದರೆ--ನಾನು ಅವನ ನೊಗವನ್ನು ನಿನ್ನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು; ನಿನ್ನ ಬಂಧನಗಳನ್ನು ಹರಿದುಬಿಡುವೆನು; ಅನ್ಯರು ಇನ್ನು ಅವನಿಂದ ಸೇವೆ ಮಾಡಿಸಿಕೊಳ್ಳುವದಿಲ್ಲವೆಂದು ಸೈನ್ಯ ಗಳ ಕರ್ತನು ಅನ್ನುತ್ತಾನೆ.
- 9ಆದರೆ ಅವರು ತಮ್ಮ ದೇವರಾದ ಕರ್ತನಿಗೂ ಅವರಿಗೋಸ್ಕರ ನಾನು ಎಬ್ಬಿ ಸುವ ಅವರ ಅರಸನಾದ ದಾವೀದನಿಗೂ ಸೇವೆ ಮಾಡು ವರು.
Cross references
- Daniel 12:1 ದಾನಿಯೇಲನು 12:1ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
- Malachi 4:1 ಮಲಾಕಿಯ 4:1ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Daniel 9:12 ದಾನಿಯೇಲನು 9:12ಆತನು ನಮಗೂ ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾನು ಹೇಳಿದ ಮಾತುಗಳನ್ನು ನೆರವೇರಿಸಿ; ನಮ್ಮ ಮೇಲೆ ದೊಡ್ಡ ಕೇಡು ಬರುವ ಹಾಗೆ ಮಾಡಿದ್ದಾನೆ; ಯೆರೂಸಲೇಮಿನಲ್ಲಿ ನಡೆದ ಹಾಗೆ ಪೂರ್ಣ ಆಕಾಶದ ಕೆಳಗೆಲ್ಲಾ (ಭೂಮಂಡಲದ ಮೇಲೆ) ಎಲ್ಲಿಯೂ ನಡೆಯಲಿಲ್ಲ.
- Zechariah 14:1–2 ಜೆಕರ್ಯ 14:1–2ಇಗೋ, ಕರ್ತನ ದಿನವು ಬರುತ್ತದೆ. ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ.
- Joel 2:11 ಯೋವೇಲ 2:11ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?
- Matthew 24:21–22 ಮತ್ತಾಯನು 24:21–22ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ, ಆಮೇಲೆ ಎಂದಿಗೂ ಆಗುವದಿಲ್ಲ. ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.
- Romans 11:26 ರೋಮಾಪುರದವರಿಗೆ 11:26ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- Mark 13:19 ಮಾರ್ಕನು 13:19ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
- Jeremiah 30:10 ಯೆರೆಮೀಯ 30:10ಆದದರಿಂದ ನನ್ನ ಸೇವಕನಾದ ಯಾಕೋ ಬನೇ, ಭಯಪಡಬೇಡ ಎಂದು ಕರ್ತನು ಅನ್ನುತ್ತಾನೆ; ಇಸ್ರಾಯೇಲೇ ಹೆದರಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಲ್ಲಿರುವನು; ಹೆದರಿಸುವವನಿಲ್ಲದೆ ಸೌಖ್ಯವಾಗಿರುವನು.
- Psalm 34:19 ಕೀರ್ತನೆಗಳು 34:19ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
- Zephaniah 1:14–18 ಚೆಫನ್ಯ 1:14–18ಕರ್ತನ ಮಹಾದಿನವು ಸವಿಾಪವಾಗಿದೆ, ಅದು ಬಹು ತ್ವರೆಪಡುತ್ತದೆ; ಕರ್ತನ ದಿನದ ಶಬ್ದವು ತ್ವರೆ ಪಡುತ್ತದೆ; ಶೂರನು ಅಲ್ಲಿ ಘೋರವಾಗಿ ಗೋಳಿಡು ವನು. ಆ ದಿನವು ರೌದ್ರದ ದಿನವು, ಇಕ್ಕಟ್ಟು ಸಂಕಟಗಳ ದಿನವು, ಹಾಳು ಪಾಳುಗಳ ದಿನವು, ಕತ್ತಲೆ ಮೊಬ್ಬುಗಳ ದಿನವು, ಮೇಘ ಮೋಡಗಳ ದಿನವು. ಅದರ ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಅರ್ಭಟಗಳ ದಿನವು. ಆಗ ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು; ಅವರು ಕುರುಡರ ಹಾಗೆ ನಡೆಯುವರು; ಕರ್ತನಿಗೆ ವಿರೋಧವಾಗಿ ಅವರು ಪಾಪಮಾಡಿದ್ದಾರೆ; ಅವರ ರಕ್ತವು ದೂಳಿನಂತೆಯೂ ಅವರ ಮಾಂಸವು ಗೊಬ್ಬರ ದಂತೆಯೂ ಸುರಿಯಲ್ಪಡುವದು.ಕರ್ತನ ರೌದ್ರದ ದಿನದಲ್ಲಿ ಅವರ ಬೆಳ್ಳಿಯಾದರೂ ಅವರ ಬಂಗಾರ ವಾದರೂ ಅವರನ್ನು ತಪ್ಪಿಸಲಾರವು; ಆತನ ಕೋಪದ ಬೆಂಕಿಯು ದೇಶವನ್ನೆಲ್ಲಾ ನುಂಗುವದು. ಕರ್ತನ ರೌದ್ರದ ದಿನದಲ್ಲಿ ಅವರ ಬೆಳ್ಳಿಯಾದರೂ ಅವರ ಬಂಗಾರ ವಾದರೂ ಅವರನ್ನು ತಪ್ಪಿಸಲಾರವು; ಆತನ ಕೋಪದ ಬೆಂಕಿಯು ದೇಶವನ್ನೆಲ್ಲಾ ನುಂಗುವದು.
- Hosea 1:11 ಹೋಶೇಯ 1:11ಆಗ ಯೆಹೂದದ ಮಕ್ಕಳು ಮತ್ತು ಇಸ್ರಾಯೇಲಿನ ಮಕ್ಕಳು ಒಟ್ಟುಗೂಡಿಕೊಂಡು ತಮಗೆ ಒಬ್ಬನನ್ನೇ ಶಿರಸ್ಸನ್ನಾಗಿ ನೇಮಕಮಾಡಿಕೊಳ್ಳುವರು; ದೇಶದೊಳಗಿಂದ ಹೊರಗೆ ಬರುವರು, ಯಾಕಂದರೆ ಇಜ್ರೇಲಿನ ಸುದಿನವು ಅತಿ ವಿಶೇಷವಾಗಿರುವದು ಅಂದನು.