Psalms · chapter 22 · verse 14
Psalm 22:14 in Kannada
ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.
Naanu neerina haage hoyyalpattiddene; nanna elubugalellaa keelu tappive; nanna hruda yavu menada haage nanna karulugala madhyadalli karagihogide.
Psalm 22:14 in English
- King James Version (KJV)
- I am poured out like water, and all my bones are out of joint: my heart is like wax; it is melted in the midst of my bowels.
- World English Bible (WEB)
- I am poured out like water. All my bones are out of joint. My heart is like wax. It is melted within me.
- American Standard Version (ASV)
- I am poured out like water, And all my bones are out of joint: My heart is like wax; It is melted within me.
- Bible in Basic English (BBE)
- I am flowing away like water, and all my bones are out of place: my heart is like wax, it has become soft in my body.
- Darby Translation (DBY)
- I am poured out like water, and all my bones are out of joint: my heart is become like wax; it is melted in the midst of my bowels.
- Webster's Bible (WBS)
- I am poured out like water, and all my bones are out of joint: my heart is like wax; it is melted in the midst of my bowels.
- Young's Literal Translation (YLT)
- As waters I have been poured out, And separated themselves have all my bones, My heart hath been like wax, It is melted in the midst of my bowels.
Read in context
- 12ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ.
- 13ಹರಿದು ಬಿಡುವಂಥ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿ ತೆರೆದಿ ದ್ದಾರೆ.
- 14ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.
- 15ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.
- 16ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
Cross references
- Psalm 22:17 ಕೀರ್ತನೆಗಳು 22:17ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ.
- Job 30:16 ಯೋಬನು 30:16ಆದರೆ ಈಗ ನನ್ನ ಪ್ರಾಣವು ನನ್ನಲ್ಲಿ ಹೊಯ್ಯಲ್ಪಡುವದು; ದೀನತ್ವದ ದಿವಸಗಳು ನನ್ನನ್ನು ಹಿಡಿದವೆ.
- Psalm 31:10 ಕೀರ್ತನೆಗಳು 31:10ನನ್ನ ಜೀವವು ಚಿಂತೆ ಯಿಂದಲೂ ನನ್ನ ವರುಷಗಳು ನಿಟ್ಟುಸುರಿನಿಂದಲೂ ತೀರಿಹೋಗಿವೆ; ನನ್ನ ಶಕ್ತಿಯು ನನ್ನ ಅಪರಾಧದಿಂದ ಕುಂದಿ ಎಲುಬುಗಳು ಕ್ಷೀಣವಾಗಿವೆ.
- Daniel 5:6 ದಾನಿಯೇಲನು 5:6ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
- Job 23:16 ಯೋಬನು 23:16ದೇವರು ನನ್ನ ಹೃದಯವನ್ನು ಮೆತ್ತಗೆ ಮಾಡಿದ್ದಾನಲ್ಲಾ; ಸರ್ವಶಕ್ತನು ನನ್ನನ್ನು ತಲ್ಲಣಪಡಿಸಿ ದ್ದಾನಲ್ಲಾ.ಕತ್ತಲೆಯ ಮುಂದೆ ನಾನು ಕಡಿಯಲ್ಪಡ ಲಿಲ್ಲ; ಅಂಧಕಾರವನ್ನು ನನ್ನ ಮುಂದೆ ಅಡಗಿಸಿದ್ದಾನೆ.
- Joshua 7:5 ಯೆಹೋಶುವ 7:5ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
- John 12:27 ಯೋಹಾನನು 12:27ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು.
- Mark 14:33–34 ಮಾರ್ಕನು 14:33–34ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ-- ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
- Luke 22:44 ಲೂಕನು 22:44ಆತನು ವೇದನೆಯಲ್ಲಿದ್ದು ಬಹಳ ಆಸಕ್ತಿ ಯಿಂದ ಪ್ರಾರ್ಥಿಸಿದನು. ಆತನ ಬೆವರು ನೆಲಕ್ಕೆ ಬೀಳುತ್ತಿರುವ ದೊಡ್ಡ ರಕ್ತದ ಹನಿಗಳೋಪಾದಿಯಲ್ಲಿತ್ತು.
- Matthew 26:38 ಮತ್ತಾಯನು 26:38ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.
- Nahum 2:10 ನಹೂಮ 2:10ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.
- Psalm 68:2 ಕೀರ್ತನೆಗಳು 68:2ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.