Psalms · chapter 27 · verse 11
Psalm 27:11 in Kannada
ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
O kartane, ninna maargavannu nanage bodhisu; nanna virodhigala nimitta samavaada haadiyalli nannannu nadisu.
Psalm 27:11 in English
- King James Version (KJV)
- Teach me thy way, O LORD, and lead me in a plain path, because of mine enemies.
- World English Bible (WEB)
- Teach me your way, LORD. Lead me in a straight path, because of my enemies.
- American Standard Version (ASV)
- Teach me thy way, O Jehovah; And lead me in a plain path, Because of mine enemies.
- Bible in Basic English (BBE)
- Make your way clear to me, O Lord, guiding me by the right way, because of my haters.
- Darby Translation (DBY)
- Teach me thy way, Jehovah, and lead me in an even path, because of mine enemies.
- Webster's Bible (WBS)
- Teach me thy way, O LORD, and lead me in a plain path, because of my enemies.
- Young's Literal Translation (YLT)
- Shew me, O Jehovah, Thy way, And lead me in a path of uprightness, For the sake of my beholders.
Read in context
- 9ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.
- 10ನನ್ನ ತಂದೆತಾಯಂದಿರು ನನ್ನನ್ನು ತೊರೆದುಬಿಟ್ಟರೂ ಕರ್ತನು ನನ್ನನ್ನು ಸೇರಿಸಿಕೊಳ್ಳುತ್ತಾನೆ.
- 11ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
- 12ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
- 13ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Cross references
- Psalm 25:4–5 ಕೀರ್ತನೆಗಳು 25:4–5ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
- Psalm 5:8 ಕೀರ್ತನೆಗಳು 5:8ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು.
- Psalm 86:11 ಕೀರ್ತನೆಗಳು 86:11ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
- Psalm 26:12 ಕೀರ್ತನೆಗಳು 26:12ನನ್ನ ಪಾದವು ಸಮಸ್ಥಳದಲ್ಲಿ ನಿಲ್ಲುತ್ತದೆ; ಸಭೆಗಳಲ್ಲಿ ನಾನು ಕರ್ತನನ್ನು ಸ್ತುತಿಸುವೆನು.
- Psalm 143:8–10 ಕೀರ್ತನೆಗಳು 143:8–10ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ. ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- Psalm 119:10 ಕೀರ್ತನೆಗಳು 119:10ನನ್ನ ಪೂರ್ಣಹೃದಯದಿಂದ ನಿನ್ನನ್ನು ಹುಡುಕಿದ್ದೇನೆ; ನಿನ್ನ ಆಜ್ಞೆಗಳಿಂದ ನಾನು ತಪ್ಪಿಹೋಗ ದಂತೆ ಮಾಡು.
- Proverbs 2:6–9 ಜ್ಞಾನೋಕ್ತಿಗಳು 2:6–9ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ.
- Psalm 64:6 ಕೀರ್ತನೆಗಳು 64:6ಅವರು ದ್ರೋಹಗಳನ್ನು ಹುಡುಕುತ್ತಾರೆ; ಎಚ್ಚರಿಕೆಯಿಂದ ಹುಡುಕಿದ್ದನ್ನು ಅವರು ಪೂರೈಸುತ್ತಾರೆ; ಅವರೆಲ್ಲರ ಅಂತರಗವೂ ಹೃದಯವೂ ಅಶೋದ್ಯವಾಗಿವೆ.
- Isaiah 30:20–21 ಯೆಶಾಯ 30:20–21ಕರ್ತನು ನಿಮಗೆ ಕಷ್ಟವನ್ನು, ಶ್ರಮೆಯನ್ನು, ಅನ್ನಪಾನಗಳನ್ನಾಗಿ ಕೊಟ್ಟರೂ ಇನ್ನೂ ನಿಮ್ಮ ಬೋಧಕರು ತಮ್ಮನ್ನು ಮರೆಮಾಡಿಕೊಳ್ಳುವದಿಲ್ಲ. ಆದರೆ ನಿಮ್ಮ ಕಣ್ಣುಗಳು ನಿಮ್ಮ ಬೋಧಕನನ್ನು ನೋಡು ತ್ತಿರುವವು. ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.
- Isaiah 35:8 ಯೆಶಾಯ 35:8ಅಲ್ಲಿ ರಾಜ ಮಾರ್ಗವಿರುವದು, ಅದು ಪರಿಶುದ್ಧ ಮಾರ್ಗವೆನಿಸಿಕೊಳ್ಳುವದು; ಯಾವ ಅಶು ದ್ಧನು ಅದರ ಮೇಲೆ ಹಾದುಹೋಗನು; ಅವರಿಗೋ ಸ್ಕರವೇ ಇರುವದು; ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Luke 3:4–6 ಲೂಕನು 3:4–6ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು.