Psalms · chapter 86 · verse 11
Psalm 86:11 in Kannada
ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
O kartane, ninna maargavannu nanage bodhisu; ninna satyadalli nadedukolluvenu; ninna hesarige bhayapaduva haage nanna hrudayavannu aikyapadisu.
Psalm 86:11 in English
- King James Version (KJV)
- Teach me thy way, O LORD; I will walk in thy truth: unite my heart to fear thy name.
- World English Bible (WEB)
- Teach me your way, LORD. I will walk in your truth. Make my heart undivided to fear your name.
- American Standard Version (ASV)
- Teach me thy way, O Jehovah; I will walk in thy truth: Unite my heart to fear thy name.
- Bible in Basic English (BBE)
- Make your way clear to me, O Lord; I will go on my way in your faith: let my heart be glad in the fear of your name.
- Darby Translation (DBY)
- Teach me thy way, Jehovah; I will walk in thy truth: unite my heart to fear thy name.
- Webster's Bible (WBS)
- Teach me thy way, O LORD; I will walk in thy truth: unite my heart to fear thy name.
- Young's Literal Translation (YLT)
- Show me, O Jehovah, Thy way, I walk in Thy truth, My heart doth rejoice to fear Thy name.
Read in context
- 9ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
- 10ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
- 11ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
- 12ನನ್ನ ದೇವರಾದ ಓ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
- 13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
Cross references
- Jeremiah 32:38–39 ಯೆರೆಮೀಯ 32:38–39ಅವರು ನನಗೆ ಜನರಾಗಿರುವರು; ನಾನು ಅವರಿಗೆ ದೇವರಾಗಿರುವೆನು. ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- Psalm 25:4–5 ಕೀರ್ತನೆಗಳು 25:4–5ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
- Psalm 5:8 ಕೀರ್ತನೆಗಳು 5:8ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು.
- Psalm 143:8–10 ಕೀರ್ತನೆಗಳು 143:8–10ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ. ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- Psalm 119:33 ಕೀರ್ತನೆಗಳು 119:33ಓ ಕರ್ತನೇ, ನಿನ್ನ ನಿಯಮಗಳ ಮಾರ್ಗವನ್ನು ನನಗೆ ಬೋಧಿಸು; ಅದನ್ನು ಕಡೇ ವರೆಗೂ ಕೈ ಕೊಳ್ಳುವೆನು.
- Job 34:32 ಯೋಬನು 34:32ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- Psalm 25:12 ಕೀರ್ತನೆಗಳು 25:12ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.
- Psalm 27:11 ಕೀರ್ತನೆಗಳು 27:11ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
- Psalm 26:3 ಕೀರ್ತನೆಗಳು 26:3ನಿನ್ನ ಪ್ರೀತಿಯೂ ಕೃಪೆಯೂ ನನ್ನ ಕಣ್ಣುಗಳ ಮುಂದೆ ಅವೆ; ನಾನು ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.
- 2 John 1:4 2 ಯೋಹಾನನು 1:4ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು.
- John 17:20–21 ಯೋಹಾನನು 17:20–21ಆದರೆ ಇವರಿಗೊಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನ ಮೇಲೆ ನಂಬಿಕೆಯಿಡುವವರಿಗೋ ಸ್ಕರವೂ ಕೇಳಿಕೊಳ್ಳುತ್ತೇನೆ. ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ.
- Colossians 3:22–23 ಕೊಲೊಸ್ಸೆಯವರಿಗೆ 3:22–23ಸೇವಕರೇ, ಶಾರೀರಕವಾದ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯ ರಾಗಿರ್ರಿ; ಮನುಷ್ಯರನ್ನು ಮೆಚ್ಚುಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ದೇವರಿಗೆ ಭಯಪಡುವ ವರಾಗಿ ಸರಳ ಹೃದಯದಿಂದ ಕೆಲಸಮಾಡಿರಿ. ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ;