Psalms · chapter 30 · verse 5
Psalm 30:5 in Kannada
ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
Aatana kopavu kshanamaatra. Aatana kataakshavu jeevave; raatriyalli duhkhavu tangabahudaadaroo beligge aanandavu baruvadu.
Psalm 30:5 in English
- King James Version (KJV)
- For his anger [endureth but] a moment; in his favour [is] life: weeping may endure for a night, but joy [cometh] in the morning.
- World English Bible (WEB)
- For his anger is but for a moment. His favor is for a lifetime. Weeping may stay for the night, but joy comes in the morning.
- American Standard Version (ASV)
- For his anger is but for a moment; His favor is for a life-time: Weeping may tarry for the night, But joy [cometh] in the morning.
- Bible in Basic English (BBE)
- For his wrath is only for a minute; in his grace there is life; weeping may be for a night, but joy comes in the morning.
- Darby Translation (DBY)
- For a moment [is passed] in his anger, a life in his favour; at even weeping cometh for the night, and at morn there is rejoicing.
- Webster's Bible (WBS)
- For his anger [endureth but] a moment; in his favor [is] life: weeping may endure for a night, but joy [cometh] in the morning.
- Young's Literal Translation (YLT)
- For — a moment [is] in His anger, Life [is] in His good-will, At even remaineth weeping, and at morn singing.
Read in context
- 3ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
- 4ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
- 5ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
- 6ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು.
- 7ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
Cross references
- Isaiah 54:7–8 ಯೆಶಾಯ 54:7–8ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು. ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ.
- 2 Corinthians 4:17 2 ಕೊರಿಂಥದವರಿಗೆ 4:17ಹೇಗಂದರೆ ಕ್ಷಣಮಾತ್ರ ವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ.ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು.
- Psalm 126:5–6 ಕೀರ್ತನೆಗಳು 126:5–6ಕಣ್ಣೀರಿ ನಿಂದ ಬಿತ್ತುವವರು ಉತ್ಸಾಹದಲ್ಲಿ ಕೊಯ್ಯುವರು. ಅಮೂಲ್ಯವಾದ ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವನುತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು. ತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು.
- Matthew 5:4 ಮತ್ತಾಯನು 5:4ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
- John 16:20–22 ಯೋಹಾನನು 16:20–22ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು. ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ. ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
- Isaiah 26:20 ಯೆಶಾಯ 26:20ನನ್ನ ಜನರೇ, ಬನ್ನಿರಿ, ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಲನ್ನು ಮುಚ್ಚಿಕೊಳ್ಳಿರಿ; ಸ್ವಲ್ಪ ಹೊತ್ತು ಅಡಗಿಕೊಂಡು ರೋಷವು ಹಾದುಹೋಗುವ ತನಕ ಇರ್ರಿ.ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.
- Psalm 103:9 ಕೀರ್ತನೆಗಳು 103:9ಆತನು ಸದಾಕಾಲಕ್ಕೂ ಗದರಿಸುವದಿಲ್ಲ; ನಿತ್ಯವೂ ಕೋಪಿ ಸುವಾತನಲ್ಲ;
- Psalm 16:11 ಕೀರ್ತನೆಗಳು 16:11ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
- Psalm 63:3 ಕೀರ್ತನೆಗಳು 63:3ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.
- Psalm 59:16 ಕೀರ್ತನೆಗಳು 59:16ಆದರೆ ನಾನು ನಿನ್ನ ಬಲದ ವಿಷಯವಾಗಿ ಹಾಡುವೆನು; ಹೌದು, ಹೊತ್ತಾರೆ ನಿನ್ನ ಕೃಪೆಗಾಗಿ ಉತ್ಸಾಹಪಡುವೆನು; ನೀನು ನನಗೆ ದುರ್ಗ ವಾಗಿಯೂ ನನ್ನ ಇಕ್ಕಟ್ಟಿನ ದಿವಸದಲ್ಲಿ ಆಶ್ರಯ ವಾಗಿಯೂ ಇದ್ದೀ.ಓ ನನ್ನ ಬಲವೇ, ನಿನ್ನನ್ನು ಕೀರ್ತಿಸುವೆನು; ದೇವರು ನನ್ನ ದುರ್ಗವೂ ಕರುಣೆ ಯುಳ್ಳ ನನ್ನ ದೇವರೂ ಆಗಿದ್ದಾನೆ.
- Psalm 6:6–9 ಕೀರ್ತನೆಗಳು 6:6–9ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ. ದುಃಖದಿಂದ ನನ್ನ ಕಣ್ಣು ಬತ್ತಿ ಹೋಗಿದೆ. ನನ್ನ ಸಕಲ ವೈರಿಗಳಿಂದ ಅದು ಡೊಗರುಬಿದ್ದಿದೆ. ಅಕ್ರಮ ಮಾಡುವವರೇ, ನನ್ನ ಬಳಿಯಿಂದ ತೊಲ ಗಿರಿ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ; ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ; ಕರ್ತನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ.
- Psalm 46:5 ಕೀರ್ತನೆಗಳು 46:5ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು.