Matthew · chapter 5 · verse 3
Matthew 5:3 in Kannada
ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.
Aatmadalli badavaraagiruvavaru dhanyaru; yaakandare paralokaraajyavu avaradu.
Matthew 5:3 in English
- King James Version (KJV)
- Blessed [are] the poor in spirit: for theirs is the kingdom of heaven.
- World English Bible (WEB)
- “Blessed are the poor in spirit, for theirs is the Kingdom of Heaven.
- American Standard Version (ASV)
- Blessed are the poor in spirit: for theirs is the kingdom of heaven.
- Bible in Basic English (BBE)
- Happy are the poor in spirit: for the kingdom of heaven is theirs.
- Darby Translation (DBY)
- Blessed [are] the poor in spirit, for theirs is the kingdom of the heavens.
- Webster's Bible (WBS)
- Blessed [are] the poor in spirit: for theirs is the kingdom of heaven.
- Young's Literal Translation (YLT)
- 'Happy the poor in spirit — because theirs is the reign of the heavens.
Read in context
- 1ಮತ್ತು ಆತನು ಜನಸಮೂಹಗಳನ್ನು ನೋಡಿದವನಾಗಿ ಪರ್ವತವನ್ನೇರಿದನು; ಅಲ್ಲಿ ಆತನು ಕೂತುಕೊಂಡಾಗ ಆತನ ಶಿಷ್ಯರು ಆತನ ಬಳಿಗೆ ಬಂದರು.
- 2ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ --
- 3ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.
- 4ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
- 5ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.
Cross references
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
- Proverbs 29:23 ಜ್ಞಾನೋಕ್ತಿಗಳು 29:23ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
- Psalm 34:18 ಕೀರ್ತನೆಗಳು 34:18ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
- Proverbs 16:19 ಜ್ಞಾನೋಕ್ತಿಗಳು 16:19ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ.
- Luke 18:14 ಲೂಕನು 18:14ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- 2 Chronicles 7:14 2 ಪೂರ್ವಕಾಲವೃತ್ತಾಂತ 7:14ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.
- Psalm 51:17 ಕೀರ್ತನೆಗಳು 51:17ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- James 2:5 ಯಾಕೋಬನು 2:5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
- Luke 6:20–26 ಲೂಕನು 6:20–26ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ. ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ. ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು. ಆ ದಿನದಲ್ಲಿ ನೀವು ಸಂತೋಷ ಪಡಿರಿ. ಉಲ್ಲಾಸದಿಂದ ಕುಣಿದಾಡಿರಿ; ಯಾಕಂದರೆ ಇಗೋ, ಪರಲೋಕದಲ್ಲಿ ನಿಮ್ಮ ಬಹುಮಾನವು ದೊಡ್ಡದು; ಅವರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು. ಆದರೆ ಐಶ್ವರ್ಯವಂತರೇ, ನಿಮಗೆ ಅಯ್ಯೋ! ನೀವು ನಿಮ್ಮ ಆದರಣೆಯನ್ನು ಹೊಂದಿದ್ದೀರಿ. ತೃಪ್ತಿಯಿಂದಿರುವವರೇ, ನಿಮಗೆ ಅಯ್ಯೋ! ಯಾಕಂದರೆ ನಿಮಗೆ ಹಸಿವೆಯಾಗುವದು. ಈಗ ನಗುವವರೇ, ನಿಮಗೆ ಅಯ್ಯೋ! ನೀವು ಶೋಕಿಸಿ ಅಳುವಿರಿ. ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೇದಾಗಿ ಮಾತನಾಡಿದರೆ ನಿಮಗೆ ಅಯ್ಯೋ! ಅವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.
- Isaiah 61:1 ಯೆಶಾಯ 61:1ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
- 2 Chronicles 34:27 2 ಪೂರ್ವಕಾಲವೃತ್ತಾಂತ 34:27ನೀನು ಈ ಸ್ಥಳಕ್ಕೆ ವಿರೋಧ ವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ಆತನ ಮುಂದೆ ನಿನ್ನನ್ನು ತಗ್ಗಿಸಿಕೊಂಡಿ. ನಿನ್ನನ್ನು ನನ್ನ ಮುಂದೆ ತಗ್ಗಿಸಿ ಕೊಂಡು ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದರಿಂದ ನಾನು ಅವನ ಮೊರೆಯನ್ನು ಕೇಳಿದೆನೆಂದು ಕರ್ತನು ಹೇಳುತ್ತಾನೆ.