Psalms · chapter 35 · verse 12
Psalm 35:12 in Kannada
ನನ್ನ ಪ್ರಾಣವನ್ನು ಕೆಡಿಸುವದಕ್ಕೆ ಮೇಲಿಗೆ ಬದಲಾಗಿ ಕೇಡನ್ನು ನನಗೆ ಮಾಡಿದರು.
Nanna praanavannu kedisuvadakke melige badalaagi kedannu nanage maadidaru.
Psalm 35:12 in English
- King James Version (KJV)
- They rewarded me evil for good [to] the spoiling of my soul.
- World English Bible (WEB)
- They reward me evil for good, to the bereaving of my soul.
- American Standard Version (ASV)
- They reward me evil for good, [To] the bereaving of my soul.
- Bible in Basic English (BBE)
- They gave me back evil for good, troubling my soul.
- Darby Translation (DBY)
- They reward me evil for good, [to] the bereavement of my soul.
- Webster's Bible (WBS)
- They rewarded me evil for good [to] the spoiling of my soul.
- Young's Literal Translation (YLT)
- They pay me evil for good, bereaving my soul,
Read in context
- 10ಕರ್ತನೇ, ಬಡವನನ್ನು ಅವನಿಗಿಂತ ಬಲಿಷ್ಠರಿಂದ ಹೌದು, ದರಿದ್ರರನ್ನೂ ಕೊರತೆಯುಳ್ಳವರನ್ನೂ ಸುಲುಕೊಳ್ಳುವವನಿಂದ ಬಿಡಿ ಸುವವನಾದ ನಿನ್ನ ಹಾಗೆ ಯಾರು ಎಂದು ನನ್ನ ಎಲು ಬುಗಳೆಲ್ಲಾ ಹೇಳುವವು.
- 11ಸುಳ್ಳು ಸಾಕ್ಷಿಗಳು ಎದ್ದು ನಾನು ತಿಳಿಯದವುಗಳನ್ನು ನನ್ನ ಮೇಲೆ ಹೊರಿಸಿ ದರು.
- 12ನನ್ನ ಪ್ರಾಣವನ್ನು ಕೆಡಿಸುವದಕ್ಕೆ ಮೇಲಿಗೆ ಬದಲಾಗಿ ಕೇಡನ್ನು ನನಗೆ ಮಾಡಿದರು.
- 13ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
- 14ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
Cross references
- John 10:32 ಯೋಹಾನನು 10:32ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.
- Jeremiah 18:20 ಯೆರೆಮೀಯ 18:20ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಅವರು ನನ್ನ ಪ್ರಾಣಕ್ಕೆ ಕುಣಿಯನ್ನು ಅಗೆದಿದ್ದಾರೆ; ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವದಕ್ಕೂ ನಿನ್ನ ಉಗ್ರವನ್ನು ಅವರಿಂದ ತಿರುಗಿಸುವದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
- Psalm 38:20 ಕೀರ್ತನೆಗಳು 38:20ಒಳ್ಳೇದಕ್ಕೆ ಬದಲಾಗಿ ಕೇಡನ್ನು ಸಲ್ಲಿಸುವವರು ನನ್ನ ಶತ್ರುಗಳಾಗಿದ್ದಾರೆ. ನಾನು ಒಳ್ಳೇ ದನ್ನು ಅನುಸರಿಸುವವನಾಗಿದ್ದೇನೆ.
- Proverbs 17:13 ಜ್ಞಾನೋಕ್ತಿಗಳು 17:13ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ.
- Luke 23:21–23 ಲೂಕನು 23:21–23ಆದರೆ ಅವರು--ಅವನನ್ನು ಶಿಲುಬೆಗೆ ಹಾಕಿಸು, ಅವನನ್ನು ಶಿಲುಬೆಗೆ ಹಾಕಿಸು ಎಂದು ಕೂಗುತ್ತಾ ಹೇಳಿದರು. ಆದರೆ ಅವನು ಮೂರನೆಯ ಸಾರಿ ಅವ ರಿಗೆ--ಯಾಕೆ? ಈತನು ಕೆಟ್ಟದ್ದೇನು ಮಾಡಿದ್ದಾನೆ? ಈತನಲ್ಲಿ ಮರಣಕ್ಕೆ ಕಾರಣವಾದದ್ದೇನೂ ನನಗೆ ಕಾಣ ಲಿಲ್ಲ; ಆದದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ ಅಂದನು. ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.
- Psalm 109:3–5 ಕೀರ್ತನೆಗಳು 109:3–5ಹಗೆಯ ಮಾತು ಗಳಿಂದ ಅವರು ನನ್ನನ್ನು ಸುತ್ತಿಕೊಂಡು ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧಮಾಡಿದ್ದಾರೆ. ನನ್ನ ಪ್ರೀತಿಗೆ ಬದಲಾಗಿ ನನ್ನನ್ನು ಎದುರಿಸುತ್ತಾರೆ; ಆದರೆ ನಾನು ಪ್ರಾರ್ಥನೆಯಲ್ಲಿಯೇ ಇದ್ದೇನೆ. ನನ್ನ ಮೇಲಿಗೆ ಬದಲಾಗಿ ಕೇಡನ್ನೂ ಪ್ರೀತಿಗೆ ಬದಲಾಗಿ ಹಗೆಯನ್ನೂ ನನಗೆ ವಿರೋಧ ವಾಗಿ ಮಾಡಿದ್ದಾರೆ.
- 1 Samuel 20:31–33 1 ಸಮುವೇಲನು 20:31–33ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು. ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು. ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದದರಿಂದ ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದ್ದಾನೆಂದು ಯೋನಾತಾ ನನು ತಿಳುಕೊಂಡನು.
- 1 Samuel 19:15 1 ಸಮುವೇಲನು 19:15ತಿರಿಗಿ ಸೌಲನು ದಾವೀದನನ್ನು ನೋಡುವದಕ್ಕೋಸ್ಕರ ದೂತರನ್ನು ಕಳುಹಿಸಿ--ಅವ ನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.
- 1 Samuel 19:4–5 1 ಸಮುವೇಲನು 19:4–5ಹಾಗೆಯೇ ಯೋನಾತಾನನು ತನ್ನ ತಂದೆಯಾದ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೇದನ್ನು ಮಾತನಾಡಿ ಅವನಿಗೆ--ಅರಸನು ತನ್ನ ಸೇವಕನಾದ ದಾವೀದನಿಗೆ ವಿರೋಧವಾಗಿ ಪಾಪಮಾಡದೆ ಇರಲಿ, ಅವನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ; ಅವನ ಕ್ರಿಯೆಗಳು ನಿನಗೆ ಬಹಳ ಉತ್ತಮವಾಗಿವೆ; ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.
- 1 Samuel 22:13–14 1 ಸಮುವೇಲನು 22:13–14ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು. ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.