Psalms · chapter 38 · verse 12
Psalm 38:12 in Kannada
ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
Nanna praanavannu hudukuvavaru bale odduttaare; nanna kedannu hudukuvavaru kedina maatugalannaaduttaare; dinavellaa mosagalannu kalpisuttaare.
Psalm 38:12 in English
- King James Version (KJV)
- They also that seek after my life lay snares [for me:] and they that seek my hurt speak mischievous things, and imagine deceits all the day long.
- World English Bible (WEB)
- They also who seek after my life lay snares. Those who seek my hurt speak mischievous things, and meditate deceits all day long.
- American Standard Version (ASV)
- They also that seek after my life lay snares [for me]; And they that seek my hurt speak mischievous things, And meditate deceits all the day long.
- Bible in Basic English (BBE)
- Those who have a desire to take my life put nets for me; those who are designing my destruction say evil things against me, all the day their minds are full of deceit.
- Darby Translation (DBY)
- And they that seek after my life lay snares [for me]; and they that seek my hurt speak mischievous things, and meditate deceits all the day long.
- Webster's Bible (WBS)
- They also that seek after my life lay snares [for me] : and they that seek my hurt speak mischievous things, and imagine deceits all the day long.
- Young's Literal Translation (YLT)
- And those seeking my soul lay a snare, And those seeking my evil Have spoken mischievous things, And they do deceits meditate all the day.
Read in context
- 10ನನ್ನ ಹೃದಯವು ಬಡಿದುಕೊಳ್ಳುತ್ತದೆ; ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗಿದೆ; ನನ್ನ ಕಣ್ಣುಗಳ ಬೆಳಕು ಸಹ ನನ್ನಲ್ಲಿ ಇಲ್ಲ.
- 11ನನ್ನ ಪ್ರಿಯರೂ ಸ್ನೇಹಿತರೂ ನನ್ನ ಹುಣ್ಣನ್ನು ನೋಡಿ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.
- 12ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
- 13ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳಲಿಲ್ಲ; ತನ್ನ ಬಾಯನ್ನು ತೆರೆಯದ ಮೂಕನ ಹಾಗೆ ನಾನಿದ್ದೆನು.
- 14ನಾನು ಕಿವಿ ಕೇಳಿಸದವನಂತೆಯೂ ಪ್ರತ್ತ್ಯುತ್ತರ ಕೊಡಲಾರದವನಂತೆಯೂ ಆದೆನು.
Cross references
- Psalm 35:20 ಕೀರ್ತನೆಗಳು 35:20ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.
- 2 Samuel 17:1–3 2 ಸಮುವೇಲನು 17:1–3ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು. ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು. ಆಗ ನಾನು ಅರಸನನ್ನು ಮಾತ್ರ ಕೊಂದು ಜನರೆಲ್ಲರನ್ನು ತಿರಿಗಿ ನಿನ್ನ ಬಳಿಗೆ ತಕ್ಕೊಂಡು ಬರು ವೆನು. ನೀನು ಹುಡುಕುವವನು ಸಿಕ್ಕಿದರೆ ಜನರೆಲ್ಲರೂ ಹಿಂತಿರುಗಿದ ಹಾಗೆ ಆಗುವದು; ಜನರೆಲ್ಲರೂ ಸಮಾ ಧಾನವಾಗಿರುವರು ಅಂದನು.
- Psalm 54:3 ಕೀರ್ತನೆಗಳು 54:3ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.
- Psalm 140:5 ಕೀರ್ತನೆಗಳು 140:5ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
- Psalm 119:110 ಕೀರ್ತನೆಗಳು 119:110ದುಷ್ಟರು ನನಗೆ ಉರ್ಲು ಒಡ್ಡಿದ್ದಾರೆ. ಆದರೂ ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
- Psalm 35:4 ಕೀರ್ತನೆಗಳು 35:4ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
- Psalm 141:9 ಕೀರ್ತನೆಗಳು 141:9ಅವರು ನನಗೆ ಒಡ್ಡಿದ ಉರ್ಲಿ ನಿಂದಲೂ ಅಪರಾಧಿಗಳ ನೇಣುಗಳಿಂದಲೂ ನನ್ನನ್ನು ಕಾಪಾಡು.ನಾನು ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿ ಬೀಳಲಿ.
- 2 Samuel 16:7–8 2 ಸಮುವೇಲನು 16:7–8ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು.
- Psalm 64:2–5 ಕೀರ್ತನೆಗಳು 64:2–5ದುರ್ಮಾರ್ಗಿಗಳ ಗುಪ್ತವಾದ ಆಲೋಚನೆಗಳಿಗೂ ದುಷ್ಟರ ಹೊಂಚಿಗೂ ನನ್ನನ್ನು ಮರೆಮಾಡು. ಅವರು ತಮ್ಮ ನಾಲಿಗೆಯನ್ನು ಕತ್ತಿಯ ಹಾಗೆ ಮಸೆಯುತ್ತಾರೆ. ಕಹಿ ಮಾತುಗಳೆಂಬ ಬಾಣಗಳನ್ನು ಹೂಡುತ್ತಾರೆ. ನಿರ್ದೋಷಿಯ ಕಡೆಗೆ ಗುಪ್ತವಾಗಿ ಫಕ್ಕನೆ ಎಸೆಯುವದಕ್ಕೆ ಅವರು ಭಯ ಪಡುವದಿಲ್ಲ. ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ.
- Luke 20:19–22 ಲೂಕನು 20:19–22ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು. ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು. ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು. ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು.
- Psalm 62:3–4 ಕೀರ್ತನೆಗಳು 62:3–4ಎಷ್ಟರವರೆಗೆ ಒಬ್ಬ ಮನುಷ್ಯನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತೀರಿ? ನೀವೆಲ್ಲರೂ ಕೊಲ್ಲಲ್ಪಡುವಿರಿ; ನೀವು ಕುಸಿದುಬೀಳುವ ಗೋಡೆಯಂತೆಯೂ ಅಲ್ಲಾ ಡುವ ಬೇಲಿಯಂತೆಯೂ ಇರುವಿರಿ. ಅವರು ಅವ ನನ್ನು ಉನ್ನತಸ್ಥಾನದಿಂದ ದೊಬ್ಬುವದನ್ನೇ ಆಲೋಚಿ ಸುತ್ತಾರೆ; ಅವರು ಸುಳ್ಳುಗಳಲ್ಲಿ ಇಷ್ಟ ಪಡುತ್ತಾರೆ. ಅವರು ತಮ್ಮ ಬಾಯಿಂದ ಆಶೀರ್ವದಿಸಿ ಅಂತರಂಗ ದಲ್ಲಿ ಶಪಿಸುತ್ತಾರೆ. ಸೆಲಾ.
- Psalm 10:9 ಕೀರ್ತನೆಗಳು 10:9ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ.