Psalms · chapter 44 · verse 7
Psalm 44:7 in Kannada
ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
Neenu namma vairigalinda nammannu rakshisidi; nammannu hagemaadidavarannu naachike padisidi.
Psalm 44:7 in English
- King James Version (KJV)
- But thou hast saved us from our enemies, and hast put them to shame that hated us.
- World English Bible (WEB)
- But you have saved us from our adversaries, and have shamed those who hate us.
- American Standard Version (ASV)
- But thou hast saved us from our adversaries, And hast put them to shame that hate us.
- Bible in Basic English (BBE)
- But it is you who have been our saviour from those who were against us, and have put to shame those who had hate for us.
- Darby Translation (DBY)
- For thou hast saved us from our adversaries, and hast put them to shame that hate us.
- Webster's Bible (WBS)
- But thou hast saved us from our enemies, and hast put them to shame that hated us.
- Young's Literal Translation (YLT)
- For Thou hast saved us from our adversaries, And those hating us Thou hast put to shame.
Read in context
- 5ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
- 6ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ.
- 7ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
- 8ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ.
- 9ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
Cross references
- Psalm 140:7 ಕೀರ್ತನೆಗಳು 140:7ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.
- Psalm 136:24 ಕೀರ್ತನೆಗಳು 136:24ನಮ್ಮ ವೈರಿಗಳಿಂದ ನಮ್ಮನ್ನು ಬಿಡಿ ಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Joshua 23:9–10 ಯೆಹೋಶುವ 23:9–10ಕರ್ತನು ನಿಮ್ಮ ಮುಂದೆ ಬಲವಾದ ದೊಡ್ಡ ಜನಾಂಗಗಳನ್ನು ಹೊರಡಿಸಿಬಿಟ್ಟನು. ಆದರೆ ನಿಮ್ಮ ಮುಂದೆ ಈ ವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು. ನಿಮ್ಮಲ್ಲಿ ಇರುವ ಒಬ್ಬನು ಸಾವಿರ ಮಂದಿಯನ್ನು ಹಿಂದಟ್ಟುವನು. ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಹಾಗೆ ಆತನೇ ನಿಮಗೋಸ್ಕರ ಯುದ್ಧಮಾಡುತ್ತಾನೆ.
- Joshua 1:5 ಯೆಹೋಶುವ 1:5ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
- Psalm 132:18 ಕೀರ್ತನೆಗಳು 132:18ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
- Psalm 53:5 ಕೀರ್ತನೆಗಳು 53:5ಭಯವಿಲ್ಲದಿರುವಲ್ಲಿ ಅವರು ಭಯ ಭ್ರಾಂತರಾದರು; ನಿನಗೆ ವಿರೋಧವಾಗಿ ದಂಡು ಇಳಿ ಸುವವನ ಎಲುಬುಗಳನ್ನು ದೇವರು ಚದರಿಸಿ ಬಿಟ್ಟಿ ದ್ದಾನೆ. ನೀನು ಅವರನ್ನು ನಾಚಿಕೆಪಡಿಸಿದ್ದೀ; ದೇವರು ಅವರನ್ನು ತಿರಸ್ಕರಿಸಿದ್ದಾನೆ.ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬಂದರೆ ಎಷ್ಟೋ ಒಳ್ಳೇದು. ದೇವರು ತನ್ನ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬನು ಉಲ್ಲಾಸಿಸುವನು, ಇಸ್ರಾಯೇಲನು ಸಂತೋಷಿ ಸುವನು.
- Psalm 83:1–18 ಕೀರ್ತನೆಗಳು 83:1–18ಓ ದೇವರೇ, ಮೌನವಾಗಿರಬೇಡ; ಓ ದೇವರೇ, ಮೌನವಾಗಿರಬೇಡ; ಸುಮ್ಮ ನಿರಬೇಡ. ಇಗೋ, ನಿನ್ನ ಶತ್ರುಗಳು ಗದ್ದಲ ಮಾಡು ತ್ತಾರೆ; ನಿನ್ನ ಹಗೆಯವರು ತಲೆ ಎತ್ತುತ್ತಾರೆ. ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ. ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ. ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ. ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ; ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ. ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು. ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು. ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್ ಜೇಬ್ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು. ಅವರು--ನಾವು ದೇವರ ನಿವಾಸಗಳನ್ನು ಸ್ವತಂತ್ರಿಸಿಕೊಳ್ಳೋಣ ಅನ್ನುತ್ತಾರೆ. ಓ ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು. ಕಾಡನ್ನು ಸುಡುವ ಬೆಂಕಿಯ ಹಾಗೆಯೂ ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ ನಿನ್ನ ಬಿರುಗಾಳಿಯಿಂದ ಅವರನ್ನು ಹಿಂಸಿಸಿ ನಿನ್ನ ಸುಳಿ ಗಾಳಿಯಿಂದ ಅವರನ್ನು ತಲ್ಲಣ ಪಡಿಸು. ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು. ಅವರು ನಾಚಿಕೆಪಟ್ಟು ಎಂದೆಂ ದಿಗೂ ಕಳವಳಗೊಳ್ಳಲಿ; ಹೌದು, ಅವರು ಲಜ್ಜೆ ಯಿಂದ ನಾಶವಾಗಲಿ.ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ. ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
- Psalm 144:10 ಕೀರ್ತನೆಗಳು 144:10ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,
- Psalm 40:14 ಕೀರ್ತನೆಗಳು 40:14ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
- Joshua 10:42 ಯೆಹೋಶುವ 10:42ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.
- 2 Samuel 7:10 2 ಸಮುವೇಲನು 7:10ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಏರ್ಪಡಿಸಿ ಅವರು ಇನ್ನು ಮೇಲೆ ಚಲಿಸದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಡು ವೆನು. ಪೂರ್ವದ ಹಾಗೆಯೂ ನಾನು ನನ್ನ ಜನವಾದ ಇಸ್ರಾಯೇಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿ ಸಿದ ದಿವಸದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.
- Joshua 11:6 ಯೆಹೋಶುವ 11:6ಆಗ ಕರ್ತನು ಯೆಹೋಶುವನಿಗೆಅವರಿಗೆ ಭಯಪಡಬೇಡ; ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರನ್ನು ಇಸ್ರಾಯೇಲಿನ ಮುಂದೆ ಕೊಲ್ಲಲ್ಪ ಡುವಂತೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು ಅಂದನು.