Psalms · chapter 48 · verse 10
Psalm 48:10 in Kannada
ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.
O devare, ninna hesarige takkantaye ninna stotravu bhoomiya antyagala varegoo ade. Ninna balagai neetiyinda tumbi ade.
Psalm 48:10 in English
- King James Version (KJV)
- According to thy name, O God, so [is] thy praise unto the ends of the earth: thy right hand is full of righteousness.
- World English Bible (WEB)
- As is your name, God, so is your praise to the ends of the earth. Your right hand is full of righteousness.
- American Standard Version (ASV)
- As is thy name, O God, So is thy praise unto the ends of the earth: Thy right hand is full of righteousness.
- Bible in Basic English (BBE)
- As your name is, O God, so is your praise to the ends of the earth; your right hand is full of righteousness.
- Darby Translation (DBY)
- According to thy name, O God, so is thy praise unto the ends of the earth: thy right hand is full of righteousness.
- Webster's Bible (WBS)
- According to thy name, O God, so [is] thy praise to the ends of the earth: thy right hand is full of righteousness.
- Young's Literal Translation (YLT)
- As [is] Thy name, O God, so [is] Thy praise, Over the ends of the earth, Righteousness hath filled Thy right hand.
Read in context
- 8ನಾವು ಹೇಗೆ ಕೇಳಿದೆವೋ ಹಾಗೆಯೇ ಸೈನ್ಯಗಳ ಕರ್ತನ ಪಟ್ಟಣದಲ್ಲಿ, ಅಂದರೆ ನಮ್ಮ ದೇವರ ಪಟ್ಟಣದಲ್ಲಿಯೇ ನೋಡಿದೆವು; ದೇವರು ಅದನ್ನು ಎಂದೆಂದಿಗೂ ಸ್ಥಿರಪಡಿಸುವನು. ಸೆಲಾ.
- 9ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.
- 10ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.
- 11ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.
- 12ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.
Cross references
- Psalm 113:3 ಕೀರ್ತನೆಗಳು 113:3ಸೂರ್ಯೋದಯ ದಿಂದ ಅದರ ಅಸ್ತಮಾನದ ವರೆಗೂ ಕರ್ತನ ಹೆಸರು ಸ್ತುತಿಸಲ್ಪಡತಕ್ಕದ್ದು.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Deuteronomy 28:58 ಧರ್ಮೋಪದೇಶಕಾಂಡ 28:58ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Joshua 7:9 ಯೆಹೋಶುವ 7:9ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು.
- Psalm 138:2–4 ಕೀರ್ತನೆಗಳು 138:2–4ನಿನ್ನ ಪರಿಶುದ್ಧ ಮಂದಿರದ ಕಡೆಗೆ ಅಡ್ಡ ಬಿದ್ದು ನಿನ್ನ ಪ್ರೀತಿ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ನಿನ್ನ ಹೆಸರನ್ನು ಕೊಂಡಾಡುವೆನು; ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀ. ನಾನು ಕೂಗಿಕೊಂಡ ದಿವಸದಲ್ಲಿ ನೀನು ನನಗೆ ಉತ್ತರ ಕೊಟ್ಟೆ; ನನ್ನ ಪ್ರಾಣವನ್ನು ಬಲಪಡಿಸಿದ್ದೀ; ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು ನನ್ನನ್ನು ಬಲಪಡಿಸಿದ್ದೀ. ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು.
- Revelation 19:11 ಪ್ರಕಟನೆ 19:11ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ;
- Psalm 145:17 ಕೀರ್ತನೆಗಳು 145:17ಕರ್ತನು ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿವಂತನೂ ತನ್ನ ಎಲ್ಲಾ ಕೆಲಸಗಳಲ್ಲಿ ಪರಿಶುದ್ಧನೂ ಆಗಿದ್ದಾನೆ.
- Exodus 3:13–15 ವಿಮೋಚನಕಾಂಡ 3:13–15ಅದಕ್ಕೆ ಮೋಶೆಯು ದೇವರಿಗೆ--ಇಗೋ, ಇಸ್ರಾಯೇಲ್ ಮಕ್ಕಳ ಬಳಿಗೆ ಹೋಗಿ--ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರು ನನಗೆ--ಆತನ ಹೆಸರು ಏನು ಎಂದು ಕೇಳಿದರೆ ನಾನು ಅವರಿಗೆ ಏನು ಹೇಳಬೇಕು ಅಂದನು. ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು ಅಂದನು. ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.
- Malachi 1:14 ಮಲಾಕಿಯ 1:14ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Psalm 45:7 ಕೀರ್ತನೆಗಳು 45:7ನೀನು ನೀತಿಯನ್ನು ಪ್ರೀತಿ ಮಾಡುತ್ತೀ; ದುಷ್ಟತ್ವವನ್ನು ಹಗೆಮಾಡುತ್ತೀ; ಆದದ ರಿಂದ ದೇವರು, ನಿನ್ನ ದೇವರು, ನಿನ್ನ ಸಂಗಡಿಗರಿಗಿಂತ ಹೆಚ್ಚಾಗಿ ನಿನ್ನನ್ನು ಆನಂದ ತೈಲದಿಂದ ಅಭಿಷೇಕಿಸಿ ದ್ದಾನೆ.
- Revelation 19:2 ಪ್ರಕಟನೆ 19:2ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು.