Psalms · chapter 138 · verse 2
Psalm 138:2 in Kannada
ನಿನ್ನ ಪರಿಶುದ್ಧ ಮಂದಿರದ ಕಡೆಗೆ ಅಡ್ಡ ಬಿದ್ದು ನಿನ್ನ ಪ್ರೀತಿ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ನಿನ್ನ ಹೆಸರನ್ನು ಕೊಂಡಾಡುವೆನು; ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀ.
Ninna parishuddha mandirada kadege adda biddu ninna preeti karuneya nimittavoo ninna satyada nimittavoo ninna hesarannu kondaaduvenu; ninna vaakyavannu ninna ellaa hesarigintaloo migilaagi ghanapadisiddee.
Psalm 138:2 in English
- King James Version (KJV)
- I will worship toward thy holy temple, and praise thy name for thy lovingkindness and for thy truth: for thou hast magnified thy word above all thy name.
- World English Bible (WEB)
- I will bow down toward your holy temple, and give thanks to your Name for your loving kindness and for your truth; for you have exalted your Name and your Word above all.
- American Standard Version (ASV)
- I will worship toward thy holy temple, And give thanks unto thy name for thy lovingkindness and for thy truth: For thou hast magnified thy word above all thy name.
- Bible in Basic English (BBE)
- I will give worship before your holy Temple, praising your name for your mercy and for your unchanging faith: for you have made your word greater than all your name.
- Darby Translation (DBY)
- I will bow down toward the temple of thy holiness, and celebrate thy name for thy loving-kindness and for thy truth; for thou hast magnified thy word above all thy name.
- Webster's Bible (WBS)
- I will worship towards thy holy temple, and praise thy name for thy loving-kindness and for thy truth: for thou hast magnified thy word above all thy name.
- Young's Literal Translation (YLT)
- I bow myself toward Thy holy temple, And I confess Thy name, For Thy kindness, and for Thy truth, For Thou hast made great Thy saying above all Thy name.
Read in context
- 1ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿನ್ನನ್ನು ಕೀರ್ತಿಸುವೆನು.
- 2ನಿನ್ನ ಪರಿಶುದ್ಧ ಮಂದಿರದ ಕಡೆಗೆ ಅಡ್ಡ ಬಿದ್ದು ನಿನ್ನ ಪ್ರೀತಿ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ನಿನ್ನ ಹೆಸರನ್ನು ಕೊಂಡಾಡುವೆನು; ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀ.
- 3ನಾನು ಕೂಗಿಕೊಂಡ ದಿವಸದಲ್ಲಿ ನೀನು ನನಗೆ ಉತ್ತರ ಕೊಟ್ಟೆ; ನನ್ನ ಪ್ರಾಣವನ್ನು ಬಲಪಡಿಸಿದ್ದೀ; ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು ನನ್ನನ್ನು ಬಲಪಡಿಸಿದ್ದೀ.
- 4ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು.
Cross references
- Matthew 5:18 ಮತ್ತಾಯನು 5:18ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Psalm 56:10 ಕೀರ್ತನೆಗಳು 56:10ದೇವ ರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ಕರ್ತ ನಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು.
- Isaiah 42:21 ಯೆಶಾಯ 42:21ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.
- Matthew 24:35 ಮತ್ತಾಯನು 24:35ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
- Psalm 56:4 ಕೀರ್ತನೆಗಳು 56:4ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- 1 Kings 8:29–30 1 ಅರಸುಗಳು 8:29–30ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರಿರುವದೆಂದು ನೀನು ಹೇಳಿದ ಸ್ಥಳವಾದ ಈ ಮಂದಿರದ ಮೇಲೆ ರಾತ್ರಿ ಹಗಲು ನಿನ್ನ ಕಟಾಕ್ಷವಿರಲಿ. ನಿನ್ನ ಸೇವಕನ ವಿಜ್ಞಾಪನೆಯನ್ನೂ ನಿನ್ನ ಜನರಾದ ಇಸ್ರಾಯೇಲ್ಯರ ವಿಜ್ಞಾಪನೆಯನ್ನೂ ಕೇಳು. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಲ್ಲಿ ಕೇಳಿ ಮನ್ನಿಸು.
- Psalm 28:2 ಕೀರ್ತನೆಗಳು 28:2ನಾನು ನಿನಗೆ ಮೊರೆಯಿಡು ವಾಗ ನನ್ನ ಕೈಗಳನ್ನು ನಿನ್ನ ಪರಿಶುದ್ಧ ದೈವೋಕ್ತಿಯ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯ ಶಬ್ದವನ್ನು ಕೇಳು.
- Psalm 5:7 ಕೀರ್ತನೆಗಳು 5:7ನಾನಾದರೋ, ನಿನ್ನ ಕರುಣಾತಿಶಯದಿಂದ ನಿನ್ನ ಆಲಯಕ್ಕೆ ಬರುವೆನು; ನಿನಗೆ ಭಯಪಟ್ಟು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಆರಾಧಿಸುವೆನು.
- John 1:17 ಯೋಹಾನನು 1:17ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.
- Psalm 115:1 ಕೀರ್ತನೆಗಳು 115:1ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
- Psalm 99:9 ಕೀರ್ತನೆಗಳು 99:9ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.