Psalms · chapter 50 · verse 12
Psalm 50:12 in Kannada
ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
Naanu hasididdare ninage helenu; bhoolokavoo adara paripoornateyoo nannave.
Psalm 50:12 in English
- King James Version (KJV)
- If I were hungry, I would not tell thee: for the world [is] mine, and the fulness thereof.
- World English Bible (WEB)
- If I were hungry, I would not tell you, for the world is mine, and all that is in it.
- American Standard Version (ASV)
- If I were hungry, I would not tell thee; For the world is mine, and the fulness thereof.
- Bible in Basic English (BBE)
- If I had need of food, I would not give you word of it; for the earth is mine and all its wealth.
- Darby Translation (DBY)
- If I were hungry, I would not tell thee; for the world is mine, and the fulness thereof.
- Webster's Bible (WBS)
- If I were hungry, I would not tell thee: for the world [is] mine, and the fullness thereof.
- Young's Literal Translation (YLT)
- If I am hungry I tell not to thee, For Mine [is] the world and its fulness.
Read in context
- 10ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
- 11ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
- 12ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
- 13ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
- 14ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.
Cross references
- Exodus 19:5 ವಿಮೋಚನಕಾಂಡ 19:5ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ.
- Psalm 24:1–2 ಕೀರ್ತನೆಗಳು 24:1–2ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು. ಆತನು ಅದನ್ನು ಸಮುದ್ರಗಳ ಮೇಲೆ ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರ ಪಡಿಸಿದ್ದಾನೆ.
- Deuteronomy 10:14 ಧರ್ಮೋಪದೇಶಕಾಂಡ 10:14ಇಗೋ, ಆಕಾಶವೂ ಆಕಾಶದಾಕಾಶವೂ ಭೂಮಿಯೂ ಅದರಲ್ಲಿ ರುವಂಥದ್ದೆಲ್ಲವೂ ನಿನ್ನ ದೇವರಾಗಿರುವ ಕರ್ತನವು ಗಳೇ.
- 1 Corinthians 10:26–28 1 ಕೊರಿಂಥದವರಿಗೆ 10:26–28ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ? ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ. ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ?
- Job 41:11 ಯೋಬನು 41:11ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ.
- Psalm 115:15–16 ಕೀರ್ತನೆಗಳು 115:15–16ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನಿಂದ ನೀವು ಆಶೀರ್ವದಿಸಲ್ಪಟ್ಟವರು. ಆಕಾಶಗಳು ಕರ್ತನವುಗಳೇ. ಆತನು ಭೂಮಿ ಯನ್ನು ನರಪುತ್ರರಿಗೆ ಕೊಟ್ಟಿದ್ದಾನೆ.
- Psalm 145:15–16 ಕೀರ್ತನೆಗಳು 145:15–16ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ. ನಿನ್ನ ಕೈ ತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ತೃಪ್ತಿಪಡಿ ಸುತ್ತೀ.
- Genesis 8:17 ಆದಿಕಾಂಡ 8:17ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.
- Genesis 1:28–30 ಆದಿಕಾಂಡ 1:28–30ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು. ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು. ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು. ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
- Genesis 1:11–12 ಆದಿಕಾಂಡ 1:11–12ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು; ಅದು ಹಾಗೆಯೇ ಆಯಿತು. ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು. ದೇವರು ಅದನ್ನು ಒಳ್ಳೆಯದೆಂದು ನೋಡಿ ದನು.
- Psalm 104:24 ಕೀರ್ತನೆಗಳು 104:24ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.