Psalms · chapter 50 · verse 11
Psalm 50:11 in Kannada
ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
Bettagala pakshigalannellaa naanu ballenu; kaadumrugagalu nannavugalaagive.
Psalm 50:11 in English
- King James Version (KJV)
- I know all the fowls of the mountains: and the wild beasts of the field [are] mine.
- World English Bible (WEB)
- I know all the birds of the mountains. The wild animals of the field are mine.
- American Standard Version (ASV)
- I know all the birds of the mountains; And the wild beasts of the field are mine.
- Bible in Basic English (BBE)
- I see all the birds of the mountains, and the beasts of the field are mine.
- Darby Translation (DBY)
- I know all the fowl of the mountains, and the roaming creatures of the field are mine:
- Webster's Bible (WBS)
- I know all the fowls of the mountains: and the wild beasts of the field [are] mine.
- Young's Literal Translation (YLT)
- I have known every fowl of the mountains, And the wild beast of the field [is] with Me.
Read in context
- 9ನಿನ್ನ ಮನೆಯಿಂದ ಹೋರಿಯನ್ನೂ ಇಲ್ಲವೆ ನಿನ್ನ ದೊಡ್ಡಿಗಳಿಂದ ಹೋತಗಳನ್ನೂ ತೆಗೆದುಕೊಳ್ಳೆನು.
- 10ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
- 11ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
- 12ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
- 13ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
Cross references
- Matthew 6:26 ಮತ್ತಾಯನು 6:26ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
- Genesis 1:20–22 ಆದಿಕಾಂಡ 1:20–22ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು. ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು. ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು.
- Luke 12:24 ಲೂಕನು 12:24ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ; ಅವುಗಳಿಗೆ ಉಗ್ರಾಣವಾಗಲೀ ಕಣಜವಾಗಲೀ ಇಲ್ಲ; ಆದಾಗ್ಯೂ ದೇವರು ಅವುಗಳಿಗೆ ಆಹಾರ ಕೊಡುತ್ತಾನೆ; ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚಿನವರಾಗಿದ್ದೀರಲ್ಲಾ.
- Job 39:26–30 ಯೋಬನು 39:26–30ಹದ್ದು ನಿನ್ನ ಜ್ಞಾನದಿಂದ ಹಾರುತ್ತದೋ? ತನ್ನ ರೆಕ್ಕೆಗಳನ್ನು ದಕ್ಷಿಣ ಕಡೆಗೆ ಚಾಚುತ್ತದೋ? ರಣ ಹದ್ದು ಎತ್ತರಕ್ಕೆ ಹೋಗುವದೂ ತನ್ನ ಗೂಡನ್ನು ಎತ್ತುವದೂ ನಿನ್ನ ಅಪ್ಪಣೆಯ ಪ್ರಕಾರವೋ? ಅದು ಬಂಡೆಯಲ್ಲಿ ವಾಸಿಸುತ್ತದೆ; ಬಂಡೆಯ ಸಂದುಗಳ ಲ್ಲಿಯೂ ದುರ್ಗಗಳಲ್ಲಿಯೂ ಅದು ಉಳುಕೊಳ್ಳುತ್ತದೆ. ಅಲ್ಲಿಂದ ಆಹಾರವನ್ನು ಹುಡುಕುತ್ತದೆ. ಅದರ ಕಣ್ಣುಗಳು ದೂರಕ್ಕೆ ನೋಡುತ್ತವೆ.ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು. ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು.
- Isaiah 56:9 ಯೆಶಾಯ 56:9ಅರಣ್ಯದ ಸಕಲ ಮೃಗಗಳೇ, ಹೌದು, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವದಕ್ಕೆ ಬನ್ನಿರಿ.
- Job 39:13–18 ಯೋಬನು 39:13–18ನೀನು ನವಿಲುಗಳಿಗೆ ಅಂದವಾದ ರೆಕ್ಕೆಗಳನ್ನು ಉಷ್ಟ್ರಪಕ್ಷಿಗೆ ಗರಿಗಳನ್ನೂ ರೆಕ್ಕೆಗಳನ್ನೂ ಕೊಟ್ಟಿರು ತ್ತೀಯೋ? ಅದು ತನ್ನ ಮೊಟ್ಟೆಗಳನ್ನು ಭೂಮಿ ಯಲ್ಲಿ ಬಿಟ್ಟು ದೂಳಿನಲ್ಲಿ ಅವುಗಳನ್ನು ಬಿಸಿಮಾಡು ತ್ತದೆ. ಕಾಲು ಅದನ್ನು ತುಳಿದೀತು, ಇಲ್ಲವೆ ಅಡವಿಯ ಮೃಗ ಅದನ್ನು ಜಜ್ಜೀತು ಎಂದು ಮರೆತು ಬಿಡುತ್ತದೆ. ತನ್ನ ಮರಿಗಳನ್ನು ತನ್ನವುಗಳಲ್ಲವೆಂದು ಕಠಿಣವಾಗಿ ನಡಿಸುತ್ತದೆ. ತನ್ನ ಕಷ್ಟವು ವ್ಯರ್ಥವೆಂಬ ಹೆದರಿಕೆಯೂ ಇಲ್ಲ. ದೇವರು ಅದಕ್ಕೆ ಜ್ಞಾನ ತಪ್ಪಿಸಿದ್ದಾನೆ. ಗ್ರಹಿಕೆಯನ್ನು ಅದಕ್ಕೆ ಕೊಡಲಿಲ್ಲ. ಉನ್ನತಕ್ಕೆ ಓಡುವ ಸಮಯದಲ್ಲಿ ಕುದುರೆಯನ್ನೂ ರಾಹುತನನ್ನೂ ನೋಡಿ ನಗುತ್ತದೆ.
- Ezekiel 14:15–16 ಯೆಹೆಜ್ಕೇಲನು 14:15–16ನಾನು ದುಷ್ಟ ಮೃಗಗಳನ್ನು ದೇಶದಲ್ಲಿ ಹಾದು ಹೋಗುವಂತೆ ಮಾಡಿ ಅದನ್ನು ನಿರ್ಜನಪಡಿಸಿ, ಹಾಳು ಮಾಡಿ ಯಾರೂ ಮೃಗಗಳ ನಿಮಿತ್ತ ಹಾದು ಹೋಗದಂತೆ ಮಾಡಿದರೆ ಈ ಮೂವರು ಮನುಷ್ಯರು ಅದರಲ್ಲಿ ಇದ್ದರೂ ನನ್ನ ಜೀವದಾಣೆ, ಅವರು ಕುಮಾರರ ನ್ನಾಗಲೀ ಕುಮಾರ್ತೆಯರನ್ನಾಗಲೀ ತಪ್ಪಿಸದೆ ತಾವು ಮಾತ್ರ ತಪ್ಪಿಸಿಕೊಳ್ಳುವರು; ಆದರೆ ದೇಶವು ಹಾಳಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
- Psalm 104:12 ಕೀರ್ತನೆಗಳು 104:12ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.
- Matthew 10:29–31 ಮತ್ತಾಯನು 10:29–31ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುತ್ತವಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವದಿಲ್ಲ. ಆದರೆ ನಿಮ್ಮ ತಲೆಯ ಕೂದಲುಗಳೆಲ್ಲಾ ಲೆಕ್ಕಿಸಲ್ಪಟ್ಟಿವೆ. ನೀವು ಬಹಳ ಗುಬ್ಬಿಗಳಿಗಿಂತ ಬಹು ಬೆಲೆಯುಳ್ಳವರಾಗಿದ್ದೀರಿ. ಆದದರಿಂದ ಭಯಪಡಬೇಡಿರಿ.
- Psalm 147:9 ಕೀರ್ತನೆಗಳು 147:9ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.