Psalms · chapter 50 · verse 10
Psalm 50:10 in Kannada
ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
Adaviya mrugagalellavoo bettagalalliruva saavira pashugaloo nannave.
Psalm 50:10 in English
- King James Version (KJV)
- For every beast of the forest [is] mine, [and] the cattle upon a thousand hills.
- World English Bible (WEB)
- For every animal of the forest is mine, and the livestock on a thousand hills.
- American Standard Version (ASV)
- For every beast of the forest is mine, And the cattle upon a thousand hills.
- Bible in Basic English (BBE)
- For every beast of the woodland is mine, and the cattle on a thousand hills.
- Darby Translation (DBY)
- For every beast of the forest is mine, the cattle upon a thousand hills;
- Webster's Bible (WBS)
- For every beast of the forest [is] mine, [and] the cattle upon a thousand hills.
- Young's Literal Translation (YLT)
- For Mine [is] every beast of the forest, The cattle on the hills of oxen.
Read in context
- 8ನಿನ್ನ ಬಲಿಗಳಿಗೋಸ್ಕರ ಇಲ್ಲವೆ ನಿನ್ನ ದಹನಬಲಿಗೋಸ್ಕರ ನಾನು ನಿನ್ನನ್ನು ಗದರಿಸುವ ದಿಲ್ಲ; ಅವು ಯಾವಾಗಲೂ ನನ್ನ ಮುಂದೆ ಇವೆ.
- 9ನಿನ್ನ ಮನೆಯಿಂದ ಹೋರಿಯನ್ನೂ ಇಲ್ಲವೆ ನಿನ್ನ ದೊಡ್ಡಿಗಳಿಂದ ಹೋತಗಳನ್ನೂ ತೆಗೆದುಕೊಳ್ಳೆನು.
- 10ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
- 11ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
- 12ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
Cross references
- Jeremiah 27:5–6 ಯೆರೆಮೀಯ 27:5–6ನಾನೇ ಭೂಮಿಯನ್ನೂ ಭೂಮಿಯ ಮೇಲಿರುವ ಮನುಷ್ಯರನ್ನೂ ಮೃಗಗಳನ್ನೂ ನನ್ನ ಮಹಾಬಲದಿಂದ ನಾನು ಕೈಚಾಚಿ ಉಂಟು ಮಾಡಿ ನನಗೆ ಸರಿತೋಚಿದವರಿಗೆ ಅದನ್ನು ಕೊಟ್ಟಿ ದ್ದೇನೆ. ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ.
- Psalm 104:14 ಕೀರ್ತನೆಗಳು 104:14ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
- Psalm 8:6–8 ಕೀರ್ತನೆಗಳು 8:6–8ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ; ಎಲ್ಲಾ ಕುರಿದನಗಳನ್ನೂ ಹೌದು, ಅಡವಿಯ ಮೃಗಗಳನ್ನೂ ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ.ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.
- Psalm 104:24–25 ಕೀರ್ತನೆಗಳು 104:24–25ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ. ದೊಡ್ಡದೂ ವಿಶಾಲವಾದದ್ದೂ ಆದ ಸಮುದ್ರವದೆ; ಅದರಲ್ಲಿ ಲೆಕ್ಕವಿಲ್ಲದ ಜೀವಜಂತುಗಳೂ ಸಣ್ಣ ದೊಡ್ಡ ಮೃಗಗಳೂ ಅವೆ.
- Daniel 2:38 ದಾನಿಯೇಲನು 2:38ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.
- Jonah 4:11 ಯೋನ 4:11ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.
- Genesis 2:19 ಆದಿಕಾಂಡ 2:19ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು. ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.
- Genesis 1:24–25 ಆದಿಕಾಂಡ 1:24–25ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು; ಅದು ಹಾಗೆಯೇ ಆಯಿತು. ದೇವರು ಅದರ ಜಾತಿಗನುಸಾರವಾಗಿ ಭೂಮೃಗಗಳನ್ನೂ ಅವುಗಳ ಜಾತಿಗನುಸಾರವಾಗಿ ಪಶುಗಳನ್ನೂ ತನ್ನ ಜಾತಿಗನುಸಾರವಾಗಿ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದನ್ನೂ ಮಾಡಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
- 1 Chronicles 29:14–16 1 ಪೂರ್ವಕಾಲವೃತ್ತಾಂತ 29:14–16ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು. ನಾವು ನಿನ್ನ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಅವೆ; ನೆಲೆಯು ಇಲ್ಲ. ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು.
- Genesis 31:9 ಆದಿಕಾಂಡ 31:9ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು ಅವುಗಳನ್ನು ನನಗೆ ಕೊಟ್ಟಿದ್ದಾನೆ.
- Genesis 8:17 ಆದಿಕಾಂಡ 8:17ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.
- Job 40:15–24 ಯೋಬನು 40:15–24ನಾನು ನಿನ್ನ ಕೂಡ ನಿರ್ಮಿಸಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ಮೇಯುತ್ತದೆ. ಇಗೋ, ಅದರ ಸೊಂಟದಲ್ಲಿರುವ ಅದರ ಶಕ್ತಿ ಯನ್ನೂ ಅದರ ಹೊಟ್ಟೆಯ ನರಗಳಲ್ಲಿರುವ ಅದರ ತ್ರಾಣವನ್ನೂ ನೋಡು. ತನ್ನ ಬಾಲವನ್ನು ದೇವ ದಾರಿನ ಹಾಗೆ ಬೊಗ್ಗಿಸುತ್ತದೆ; ಅದರ ಸೊಂಟದ ನರಗಳು ಸುತ್ತಿ ಹೆಣೆದು ಕೊಂಡಿವೆ. ಅದರ ಎಲುಬುಗಳು ಹಿತ್ತಾಳೆಯ ಸಲಿಕೆಗಳಂತೆ ಬಲವಾಗಿವೆ; ಅಸ್ತಿವಾರಗಳು ಕಬ್ಬಿಣದ ಕಂಬಿಗಳ ಹಾಗೆ ಅವೆ. ಅದೇ ದೇವರ ಮಾರ್ಗಗಳಲ್ಲಿ ಪ್ರಾಮುಖ್ಯವಾ ದ್ದದು; ಅದನ್ನು ನಿರ್ಮಿಸಿದವನು ಅದರ ಖಡ್ಗವು ಅವನನ್ನು ಸಂಧಿಸುವಂತೆ ಮಾಡಬಲ್ಲನು. ನಿಶ್ಚಯ ವಾಗಿ ಪರ್ವತಗಳು ಅದಕ್ಕೆ ಮೇವು ಕೊಡುತ್ತವೆ; ಅಡವಿಯ ಎಲ್ಲಾ ಮೃಗಗಳು ಅಲ್ಲಿ ಆಡುತ್ತವೆ. ನೆರಳಾದ ಗಿಡಗಳ ಕೆಳಗೆ ಆಪಿನ ಮರೆಯಲ್ಲಿಯೂ ಕೆಸರಿನಲ್ಲಿಯೂ ಮಲಗುತ್ತದೆ. ನೆರಳಾದ ಗಿಡಗಳು ತಮ್ಮ ನೆರಳಾಗಿ ಅದನ್ನು ಮುಚ್ಚಿಕೊಳ್ಳುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ. ಇಗೋ, ನದಿಯಲ್ಲಿ ಅವನು ಕುಡಿಯುತ್ತಾನೆ. ಅವಸರ ಮಾಡನು. ಯೊರ್ದನ್ ತನ್ನ ಬಾಯಿಯಲ್ಲಿ ಎಳೆಯುವಂತೆ ಅದು ಭರವಸೆ ಇಟ್ಟಿದೆ.ಅದು ಅದನ್ನು ತನ್ನ ಕಣ್ಣುಗಳಿಂದ ತೆಗೆದುಬಿಡುತ್ತದೆ; ಅದರ ಮೂಗು ಉರ್ಲುಗಳಿಂದ ತಿವಿಯುತ್ತದೆ. ಅದು ಅದನ್ನು ತನ್ನ ಕಣ್ಣುಗಳಿಂದ ತೆಗೆದುಬಿಡುತ್ತದೆ; ಅದರ ಮೂಗು ಉರ್ಲುಗಳಿಂದ ತಿವಿಯುತ್ತದೆ.