Psalms · chapter 52 · verse 1
Psalm 52:1 in Kannada
ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು.
O paraakramiye, kettatanadalli ninna shtakke neene hechchalapaduvadu yaake? Devara olletanavu yaavaagaloo iruvadu.
Psalm 52:1 in English
- King James Version (KJV)
- To the chief Musician, Maschil, [A Psalm] of David, when Doeg the Edomite came and told Saul, and said unto him, David is come to the house of Ahimelech. Why boastest thou thyself in mischief, O mighty man? the goodness of God [endureth] continually.
- World English Bible (WEB)
- For the Chief Musician. A contemplation by David, when Doeg the Edomite came and told Saul, “David has come to Ahimelech’s house.” Why do you boast of mischief, mighty man? God’s loving kindness endures continually.
- American Standard Version (ASV)
- For the Chief Musician. Maschil of David; when Doeg the Edomite came and told Saul, and said unto him, David is come to the house of Ahimelech. Why boastest thou thyself in mischief, O mighty man? The lovingkindness of God [endureth] continually.
- Bible in Basic English (BBE)
- To the chief music-maker. Maschil. Of David. When Doeg the Edomite came to Saul saying, David has come to the house of Ahimelech. Why do you take pride in wrongdoing, lifting yourself up against the upright man all the day?
- Darby Translation (DBY)
- To the chief Musician: an instruction. Of David; when Doeg the Edomite came and told Saul, and said unto him, David came to the house of Ahimelech. Why boastest thou thyself in evil, thou mighty man? The loving-kindness of God [abideth] continually.
- Webster's Bible (WBS)
- To the chief Musician, Maschil, [A Psalm] of David, when Doeg the Edomite came and told Saul, and said to him, David is come to the house of Ahimelech. Why boastest thou thyself in mischief, O mighty man? the goodness of God [endureth] continually.
- Young's Literal Translation (YLT)
- To the Overseer. — An instruction, by David, in the coming in of Doeg the Edomite, and he declareth to Saul, and saith to him, 'David came in unto the house of Ahimelech.' What, boasteth thou in evil, O mighty one? The kindness of God [is] all the day.
Read in context
- 1ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು.
- 2ಮೋಸ ಮಾಡುವ ಹದವಾದ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡುಗಳನ್ನು ಕಲ್ಪಿಸುತ್ತದೆ.
- 3ಒಳ್ಳೇದಕ್ಕಿಂತ ಕೆಟ್ಟದ್ದನ್ನೂ ನೀತಿಯನ್ನು ಮಾತನಾಡುವದಕ್ಕಿಂತ ಸುಳ್ಳನ್ನೂ ಪ್ರೀತಿ ಮಾಡುತ್ತೀ ಸೆಲಾ.
Cross references
- Psalm 103:17 ಕೀರ್ತನೆಗಳು 103:17ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ
- Psalm 107:1 ಕೀರ್ತನೆಗಳು 107:1ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು.
- Psalm 94:4 ಕೀರ್ತನೆಗಳು 94:4ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
- 1 Samuel 21:7 1 ಸಮುವೇಲನು 21:7ಆದರೆ ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗ ನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಕರ್ತನ ಮುಂದೆ ತಡೆಯಲ್ಪಟ್ಟಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
- Proverbs 6:14 ಜ್ಞಾನೋಕ್ತಿಗಳು 6:14ಅವನ ಹೃದಯದಲ್ಲಿ ಮೂರ್ಖ ತನವಿದೆ. ಯಾವಾಗಲೂ ಅವನು ಕೇಡನ್ನು ಕಲ್ಪಿಸು ತ್ತಾನೆ. ಅವನು ವೈಷಮ್ಯವನ್ನು ಬಿತ್ತುತ್ತಾನೆ.
- Isaiah 59:4 ಯೆಶಾಯ 59:4ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- Genesis 10:8–9 ಆದಿಕಾಂಡ 10:8–9ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು. ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು.
- Psalm 36:3–6 ಕೀರ್ತನೆಗಳು 36:3–6ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ. ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ. ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ. ನಿನ್ನ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿನ್ನ ನ್ಯಾಯತೀರ್ಪುಗಳು ಮಹಾ ಅಗಾಧವೇ. ಓ ಕರ್ತನೇ, ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
- Psalm 137:1–2 ಕೀರ್ತನೆಗಳು 137:1–2ಬಾಬೆಲಿನ ನದಿಗಳ ಹತ್ತಿರ ನಾವು ಕೂತುಕೊಂಡು ಹೌದು, ಚೀಯೋ ನನ್ನು ಜ್ಞಾಪಕಮಾಡಿಕೊಂಡಾಗ ನಾವು ಅತ್ತೆವು. ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗಹಾಕಿದೆವು.
- Psalm 7:14 ಕೀರ್ತನೆಗಳು 7:14ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.
- Psalm 10:2–3 ಕೀರ್ತನೆಗಳು 10:2–3ದುಷ್ಟರು ಗರ್ವ ದಿಂದ ದೀನನನ್ನು ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಯುಕ್ತಿಗಳಲ್ಲಿ ತಾವೇ ಹಿಡಿಯಲ್ಪಡಲಿ. ದುಷ್ಟನು ತನ್ನ ಹೃದಯದ ಆಶೆಗೋಸ್ಕರ ಹೊಗಳಿಕೊಳ್ಳುತ್ತಾನೆ; ಕರ್ತನು ಅಸಹ್ಯಪಡುವ ಲೋಭಿಯನ್ನು ಅವನು ಆಶೀರ್ವದಿಸುತ್ತಾನೆ.
- 1 Samuel 22:9–19 1 ಸಮುವೇಲನು 22:9–19ಆಗ ಸೌಲನ ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಪ್ರತ್ಯುತ್ತರವಾಗಿ--ಇಷಯನ ಮಗನು ನೋಬದ ಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ನೋಡಿದೆನು. ಇವನು ಅವನಿಗೋಸ್ಕರ ಕರ್ತನನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನು ಅವನಿಗೆ ಕೊಟ್ಟನು ಅಂದನು. ಅರಸನು ಅಹೀಟೂ ಬನ ಮಗನಾದ ಯಾಜಕನಾಗಿರುವ ಅಹೀಮೆಲಕ ನನ್ನೂ ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರೆಲ್ಲರನ್ನೂ ಕರೇ ಕಳುಹಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು. ಆಗ ಸೌಲನು--ಅಹೀಟೂಬನ ಮಗನೇ, ಕೇಳು ಅಂದನು. ಅದಕ್ಕವನು--ಇಗೋ, ನನ್ನ ಒಡೆಯನೇ, ನಾನು ಇಲ್ಲಿದ್ದೇನೆ ಅಂದನು. ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು. ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ. ನಾನು ಅವನಿಗೋಸ್ಕರ ದೇವರನ್ನು ಕೇಳಲು ಪ್ರಾರಂಭಿಸಿದ್ದೆನೋ? ಅದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕನ ಮೇಲಾ ದರೂ ನನ್ನ ತಂದೆಯ ಮನೆಯವರಲ್ಲಿ ಯಾರ ಮೇಲಾ ದರೂ ಅಪರಾಧ ಹೊರಿಸಬಾರದು; ನಿನ್ನ ಸೇವಕನು ಇದರಲ್ಲಿ ಹೆಚ್ಚಾದದ್ದನ್ನಾದರೂ ಕಡಿಮೆಯಾದದ್ದನ್ನಾ ದರೂ ತಿಳಿದವನಲ್ಲ ಅಂದನು. ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು. ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು. ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು. ಇದಲ್ಲದೆ ಯಾಜಕರ ಪಟ್ಟಣ ವಾದ ನೋಬಿನಲ್ಲಿ ಇರುವ ಪುರುಷರನ್ನೂ ಸ್ತ್ರೀಯ ರನ್ನೂ ಮಕ್ಕಳನ್ನೂ ಕೂಸುಗಳನ್ನೂ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕತ್ತಿಯಿಂದ ಸಂಹರಿಸಿದನು.