Psalms · chapter 55 · verse 4
Psalm 55:4 in Kannada
ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ.
Nanna hrudayavu nanna anta rangadalli nondukolluttade; maranada bedarike galu nanna mele biddave.
Psalm 55:4 in English
- King James Version (KJV)
- My heart is sore pained within me: and the terrors of death are fallen upon me.
- World English Bible (WEB)
- My heart is severely pained within me. The terrors of death have fallen on me.
- American Standard Version (ASV)
- My heart is sore pained within me: And the terrors of death are fallen upon me.
- Bible in Basic English (BBE)
- My heart is deeply wounded, and the fear of death has come on me.
- Darby Translation (DBY)
- My heart is writhing within me, and the terrors of death are fallen upon me.
- Webster's Bible (WBS)
- My heart is severely pained within me: and the terrors of death have fallen upon me.
- Young's Literal Translation (YLT)
- My heart is pained within me, And terrors of death have fallen on me.
Read in context
- 2ನನ್ನನ್ನು ಆಲೈಸಿ ನನಗೆ ಕಿವಿಗೊಡು; ನನ್ನ ಚಿಂತೆಯಲ್ಲಿ ನಾನು ದುಃಖಿಸುತ್ತಾ
- 3ಶತ್ರುವಿನ ಶಬ್ದಕ್ಕೋಸ್ಕರವೂ ದುಷ್ಟನ ಉಪದ್ರವದ ನಿಮಿತ್ತವೂ ನರಳುತ್ತೇನೆ; ಅವರು ನನ್ನ ಮೇಲೆ ಅಪರಾಧವನ್ನು ಬೀಳಮಾಡಿ ಕೋಪದಿಂದ ನನ್ನನ್ನು ಹಗೆಮಾಡುತ್ತಾರೆ.
- 4ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ.
- 5ಭಯವೂ ನಡುಗೂ ನನಗೆ ಬಂದವೆ; ಭೀತಿಯು ನನ್ನನ್ನು ಮುಚ್ಚಿಯದೆ.
- 6ನನಗೆ ಪಾರಿವಾಳದಂತೆ ರೆಕ್ಕೆಗಳಿರುತ್ತಿದ್ದರೆ ಹಾರಿ ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು ಎಂದು ಅಂದುಕೊಂಡೆನು.
Cross references
- Psalm 116:3 ಕೀರ್ತನೆಗಳು 116:3ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.
- Mark 14:33–34 ಮಾರ್ಕನು 14:33–34ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ-- ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
- 2 Corinthians 1:8–10 2 ಕೊರಿಂಥದವರಿಗೆ 1:8–10ಸಹೋದರರೇ, ಆಸ್ಯದಲ್ಲಿ ನಮ್ಮಗುಂಟಾದ ಉಪದ್ರವವನ್ನು ನೀವು ತಿಳಿಯ ಬೇಕೆಂದು ನಾನು ಅಪೇಕ್ಷಿಸುತ್ತೇನೆ; ಹೇಗಂದರೆ ನಾವು ಜೀವದ ನಿರೀಕ್ಷೆಯಿಲ್ಲದವರಾಗುವಷ್ಟೂ ಅಳತೆಗೆಟ್ಟು ಬಲ ವಿಾರಿ ಕುಗ್ಗಿ ಹೋದೆವು. ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು. ಆತನು ನಮ್ಮನ್ನು ಎಂಥಾ ಭಯಂಕರವಾದ ಮರಣದಿಂದ ತಪ್ಪಿಸಿದ್ದಾನೆ, ಮತ್ತು ತಪ್ಪಿಸುತ್ತಾನೆ, ಇನ್ನು ಮುಂದೆಯೂ ಆತನು ನಮ್ಮನ್ನು ತಪ್ಪಿಸುವನೆಂದು ನಾವು ಆತನಲ್ಲಿ ಭರವಸೆಯುಳ್ಳವರಾಗಿದ್ದೇವೆ.
- Psalm 18:4–5 ಕೀರ್ತನೆಗಳು 18:4–5ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು. ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು.
- Hebrews 5:7 ಇಬ್ರಿಯರಿಗೆ 5:7ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು.
- Psalm 69:20 ಕೀರ್ತನೆಗಳು 69:20ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ.
- Psalm 102:3–5 ಕೀರ್ತನೆಗಳು 102:3–5ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ. ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ. ನನ್ನ ಮೂಲುಗುವಿಕೆಯ ಸ್ವರದಿಂದ ಎಲುಬುಗಳು ನನ್ನ ಮಾಂಸಕ್ಕೆ ಅಂಟುತ್ತವೆ.
- Isaiah 38:10–13 ಯೆಶಾಯ 38:10–13ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು. ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು. ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ. ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
- Matthew 26:37–38 ಮತ್ತಾಯನು 26:37–38ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು. ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.
- Psalm 6:3 ಕೀರ್ತನೆಗಳು 6:3ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಓ ಕರ್ತನೇ, ಇದು ಎಲ್ಲಿಯ ವರೆಗೆ?
- Psalm 88:3 ಕೀರ್ತನೆಗಳು 88:3ನನ್ನ ಜೀವವು ಕಷ್ಟ ಗಳಿಂದ ತುಂಬಿಯದೆ, ನನ್ನ ಪ್ರಾಣವು ಸಮಾಧಿಗೆ ಸವಿಾಪವಾಗಿದೆ.
- John 12:27 ಯೋಹಾನನು 12:27ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು.