Psalms · chapter 88 · verse 3
Psalm 88:3 in Kannada
ನನ್ನ ಜೀವವು ಕಷ್ಟ ಗಳಿಂದ ತುಂಬಿಯದೆ, ನನ್ನ ಪ್ರಾಣವು ಸಮಾಧಿಗೆ ಸವಿಾಪವಾಗಿದೆ.
Nanna jeevavu kashta galinda tumbiyade, nanna praanavu samaadhige saviాpavaagide.
Psalm 88:3 in English
- King James Version (KJV)
- For my soul is full of troubles: and my life draweth nigh unto the grave.
- World English Bible (WEB)
- For my soul is full of troubles. My life draws near to Sheol.
- American Standard Version (ASV)
- For my soul is full of troubles, And my life draweth nigh unto Sheol.
- Bible in Basic English (BBE)
- For my soul is full of evils, and my life has come near to the underworld.
- Darby Translation (DBY)
- For my soul is full of troubles, and my life draweth nigh to Sheol.
- Webster's Bible (WBS)
- For my soul is full of troubles: and my life draweth nigh to the grave.
- Young's Literal Translation (YLT)
- For my soul hath been full of evils, And my life hath come to Sheol.
Read in context
- 1ನನ್ನ ರಕ್ಷಣೆಯ ದೇವರಾದ ಓ ಕರ್ತನೇ, ಹಗಲಿರುಳು ನಿನ್ನ ಮುಂದೆ ಕೂಗುತ್ತೇನೆ.
- 2ನನ್ನ ಪ್ರಾರ್ಥನೆಯು ನಿನ್ನ ಮುಂದೆ ಬರಲಿ; ನನ್ನ ಮೊರೆಗೆ ನೀನು ಕಿವಿಗೊಡು.
- 3ನನ್ನ ಜೀವವು ಕಷ್ಟ ಗಳಿಂದ ತುಂಬಿಯದೆ, ನನ್ನ ಪ್ರಾಣವು ಸಮಾಧಿಗೆ ಸವಿಾಪವಾಗಿದೆ.
- 4ಕುಣಿಗೆ ಇಳಿಯುವವರ ಸಂಗಡ ಎಣಿಸಲ್ಪಟ್ಟಿದ್ದೇನೆ; ಬಲವಿಲ್ಲದ ಮನುಷ್ಯನ ಹಾಗಿದ್ದೇನೆ.
- 5ಕೊಲ್ಲಲ್ಪಟ್ಟು ಸಮಾಧಿಯಲ್ಲಿ ಮಲಗಿರುವವರನ್ನು ನೀನು ಇನ್ನು ಜ್ಞಾಪಕಮಾಡಿಕೊಳ್ಳದ ಹಾಗೆ ಸತ್ತವ ರಲ್ಲಿ ಬಿಡಲ್ಪಟ್ಟಿದ್ದೇನೆ; ಅವರು ನಿನ್ನ ಕೈಯಿಂದ ಕಡಿ ಯಲ್ಪಟ್ಟಿದ್ದಾರೆ.
Cross references
- Psalm 107:18 ಕೀರ್ತನೆಗಳು 107:18ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ.
- Lamentations 3:15–19 ಪ್ರಲಾಪಗಳು 3:15–19ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ. ಆತನು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು ನನ್ನನ್ನು ಬೂದಿಯಿಂದ ಮುಚ್ಚಿದ್ದಾನೆ. ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು. ನನ್ನ ಬಲವೂ ನಿರೀಕ್ಷೆಯೂ ಕರ್ತನಿಂದ ನಾಶವಾದವೆಂದು ಹೇಳಿ ನನ್ನ ಸಂಕಟವನ್ನು ಹಿಂಸೆಯನ್ನು ಮಾಚಿಪತ್ರೆಯನ್ನು ವಿಷವನ್ನು ಇವುಗಳನ್ನು ಜ್ಞಾಪಕಮಾಡಿಕೊಂಡೆನು.
- Mark 14:33–34 ಮಾರ್ಕನು 14:33–34ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ-- ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
- Matthew 26:37–39 ಮತ್ತಾಯನು 26:37–39ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು. ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು. ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
- Job 6:2–4 ಯೋಬನು 6:2–4ನನ್ನ ವ್ಯಥೆಯನ್ನೆಲ್ಲಾ ತೂಗಿದರೆ, ನನ್ನ ಶ್ರಮೆಯನ್ನು ತ್ರಾಸಿನಲ್ಲಿಟ್ಟರೆ ಲೇಸು. ಈಗಲೇ ಸಮುದ್ರದ ಮರಳಿಗಿಂತ ಅದು ಭಾರವಾಗಿದೆ; ಆದ ದರಿಂದ ನನ್ನ ಮಾತುಗಳು ನುಂಗಲ್ಪಟ್ಟವು. ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.
- Isaiah 53:10–11 ಯೆಶಾಯ 53:10–11ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು. ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Psalm 69:17–21 ಕೀರ್ತನೆಗಳು 69:17–21ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು. ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು. ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ. ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ. ನನ್ನ ಆಹಾರಕ್ಕಾಗಿ ಕಹಿಯಾದದನ್ನು ಕೊಟ್ಟರು; ನನಗೆ ದಾಹವಾದಾಗ ಹುಳಿರಸವನ್ನು ಕುಡಿಯ ಕೊಟ್ಟರು.
- Psalm 88:14–15 ಕೀರ್ತನೆಗಳು 88:14–15ಕರ್ತನೇ,ಯಾಕೆ ನನ್ನ ಪ್ರಾಣವನ್ನು ತೊರೆದು ಬಿಡುತ್ತೀ?ಯಾಕೆ ನಿನ್ನ ಮುಖವನ್ನು ನನಗೆ ಮರೆಮಾಡುತ್ತೀ? ನಾನು ಕುಂದಿದವನೂ ಯೌವನದಾರಭ್ಯ ಸಾಯು ವದಕ್ಕೆ ಸಿದ್ಧನೂ ಆಗಿದ್ದೇನೆ. ನಿನ್ನ ಬೆದರಿಕೆಗಳನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
- Isaiah 53:3 ಯೆಶಾಯ 53:3ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- Psalm 143:3–4 ಕೀರ್ತನೆಗಳು 143:3–4ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ. ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
- Job 33:22 ಯೋಬನು 33:22ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.
- Psalm 77:2 ಕೀರ್ತನೆಗಳು 77:2ನನ್ನ ಇಕ್ಕ ಟ್ಟಿನ ದಿವಸದಲ್ಲಿ ಕರ್ತನನ್ನು ಹುಡುಕಿದೆನು; ನಾನು ರಾತ್ರಿಯೆಲ್ಲಾ ವ್ಯಥೆಪಟ್ಟದ್ದರಿಂದ ನನ್ನ ಪ್ರಾಣವು ಆದರಣೆ ಹೊಂದಲೊಲ್ಲದು.