Psalms · chapter 56 · verse 2
Psalm 56:2 in Kannada
ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
O atyunnatane, nanna virodhigalu dinavellaa nannannu nungabekendiddaare; nanage virodhavaagi garvadinda yuddhamaaduvavaru anekaraagiddaare.
Psalm 56:2 in English
- King James Version (KJV)
- Mine enemies would daily swallow [me] up: for [they be] many that fight against me, O thou most High.
- World English Bible (WEB)
- My enemies want to swallow me up all day long, for they are many who fight proudly against me.
- American Standard Version (ASV)
- Mine enemies would swallow me up all the day long; For they are many that fight proudly against me.
- Bible in Basic English (BBE)
- My haters are ever ready to put an end to me; great numbers are lifting themselves up against me.
- Darby Translation (DBY)
- Mine enemies would swallow [me] up all the day long; for they are many that fight against me haughtily.
- Webster's Bible (WBS)
- My enemies would daily swallow [me] up: for [they are] many that fight against me, O thou Most High.
- Young's Literal Translation (YLT)
- Mine enemies have swallowed up all the day, For many [are] fighting against me, O most High,
Read in context
- 1ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ.
- 2ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
- 3ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.
- 4ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
Cross references
- Psalm 118:10–12 ಕೀರ್ತನೆಗಳು 118:10–12ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು. ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು. ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
- Psalm 57:3 ಕೀರ್ತನೆಗಳು 57:3ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
- Acts 4:25–27 ಅಪೊಸ್ತಲರ ಕೃತ್ಯಗಳು 4:25–27ನಿನ್ನ ಸೇವಕ ನಾದ ದಾವೀದನ ಬಾಯಿಂದ--ಅನ್ಯಜನರು ಯಾಕೆ ರೇಗಿದರು? ಮತ್ತು ಜನರು ವ್ಯರ್ಥವಾದವುಗಳನ್ನು ಯಾಕೆ ಊಹಿಸಿದರು? ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ. ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತ ಒಂದಾಗಿ ಕೂಡಿಕೊಂಡು
- Psalm 91:1 ಕೀರ್ತನೆಗಳು 91:1ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- Revelation 16:14 ಪ್ರಕಟನೆ 16:14ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು.
- Psalm 9:2 ಕೀರ್ತನೆಗಳು 9:2ನಿನ್ನಲ್ಲಿ ಸಂತೋಷಿಸಿ ಉತ್ಸಾಹಪಡುವೆನು; ಓ ಮಹೋ ನ್ನತನೇ, ನಿನ್ನ ಹೆಸರನ್ನು ಸ್ತುತಿಸಿ ಹಾಡುವೆನು.
- Psalm 93:4 ಕೀರ್ತನೆಗಳು 93:4ಬಹಳ ನೀರುಗಳ ಶಬ್ದಕ್ಕಿಂತಲೂ ಹೌದು, ಸಮುದ್ರದ ಬಲವಾದ ಅಲೆ ಗಳಿಗಿಂತಲೂ ಉನ್ನತದಲ್ಲಿ ಕರ್ತನು ಬಲಿಷ್ಠನಾಗಿ ದ್ದಾನೆ.ನಿನ್ನ ಸಾಕ್ಷಿಗಳು ಬಹಳ ನಿಶ್ಚಯವಾದವುಗಳು; ಓ ಕರ್ತನೇ, ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.
- Psalm 3:1 ಕೀರ್ತನೆಗಳು 3:1ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.
- Daniel 5:18 ದಾನಿಯೇಲನು 5:18ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.
- Psalm 54:5 ಕೀರ್ತನೆಗಳು 54:5ನನ್ನ ವಿರೋಧಿಗಳಿಗೆ ಆತನು ಕೇಡನ್ನು ಬದಲು ಕೊಡುವನು; ನಿನ್ನ ಸತ್ಯದಿಂದ ಅವರನ್ನು ಸಂಹರಿಸು.
- Micah 6:6 ಮೀಕ 6:6ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?